Site icon Vistara News

Stuart MacGill: ಕೊಕೇನ್ ಮಾರಾಟ; ಆಸೀಸ್​ ಮಾಜಿ ಆಟಗಾರನ ಬಂಧನ

Former Australian star cricketer Stuart MacGil

ಮೆಲ್ಬೊರ್ನ್​: ಮಾದಕ ದ್ರವ್ಯ ಕೊಕೇನ್ ಮಾರಾಟದ ಆರೋಪದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಸ್ಟುವರ್ಟ್ ಮೆಕ್​ಗಿಲ್(Stuart MacGill)​ ಅವರನ್ನು ಪೊಲೀಸರು ಬಂಧಿಸಿದ್ದಾರೆ. 2.74 ಕೋಟಿ ರೂ. ಹೆಚ್ಚು ಮೊತ್ತದ ಕೊಕೇನ್ ಮಾರಾಟ ವ್ಯವಹಾರ ನಡೆಸಿದ ಆರೋಪ ಅವರ ಮೇಲಿದೆ.

2021ರಲ್ಲಿ ಸಿಡ್ನಿ ನಗರದಲ್ಲಿ ಸ್ಟುವರ್ಟ್ ಅವರನ್ನು ಅಪಹರಿಸಲಾಗಿತ್ತು. ಬಳಿಕ ಸ್ಟುವರ್ಟ್ ಅವರು ಅಪಹರಣಕಾರರು ತನಗೆ ಥಳಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದರು. ದೂರಿನ ಮೇರೆಗೆ ತನಿಖೆಯ ಜಾಡು ಹಿಡಿದ ಪೊಲೀಸರಿಗೆ ಈ ಅಪಹರಣದ ಹಿಂದಿರುವ ನಿಜವಾದ ಸತ್ಯ ತಿಳಿದಿದೆ. ಅವರ ಅಪಹರಣಕ್ಕೆ ಮಾದಕ ದ್ರವ್ಯ ಮಾರಾಟ ವ್ಯವಹಾರವೇ ಪ್ರಮುಖ ಕಾರಣ ಎಂದು ತನಿಖೆಯಿಂದ ಬಹಿರಂಗಗೊಂಡಿದೆ.

ಸ್ಟುವರ್ಟ್ ಮೆಕ್​ಗಿಲ್ ಕೊಕೇನ್ ಮಾರಾಟದ ಬಳಿಕ ಸರಿಯಾಗಿ ಹಣವನ್ನು ನೀಡದೆ ವಂಚಿಸಿದ್ದರು. ಇದೇ ಕಾರಣಕ್ಕೆ ಅವರನ್ನು ಅಪಹರಣ ಮಾಡಲಾಗಿತ್ತು. ನ್ಯೂ ಸೌತ್ ವೇಲ್ಸ್ ಪೊಲೀಸರು ಕೊಕೇನ್ ಡೀಲ್ ಪ್ರಕರಣದಲ್ಲಿ ಸ್ಟುವರ್ಟ್ ಮೆಕ್​ಗಿಲ್ ಅವರನ್ನು ಬಂಧಿಸಿ ಇದೀಗ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

2019ರಲ್ಲಿ ನಿಷೇಧಿತ ಡ್ರಗ್ ಡೀಲ್​ನಲ್ಲಿ ಸ್ಟುವರ್ಟ್ ಮ್ಯಾಕ್‌ಗಿಲ್ 1 ಕೆಜಿ ಕೊಕೇನ್‌ ಡೀಲ್​ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ Senanayake: ಫಿಕ್ಸಿಂಗ್ ಆರೋಪ; ಕೆಕೆಆರ್​ ಮಾಜಿ ಆಟಗಾರನ ಬಂಧನ

ಆಸೀಸ್​ ಪರ ಉತ್ತಮ ಸಾಧನೆ

ಬೌಲರ್​ ಆಗಿದ್ದ ಸ್ಟುವರ್ಟ್ ಮ್ಯಾಕ್‌ಗಿಲ್ ಅವರು ಆಸ್ಟ್ರೇಲಿಯಾ ಪರ 44 ಟೆಸ್ಟ್​ ಪಂದ್ಯಗಳನ್ನು ಆಡಿದ್ದು 349 ಮತ್ತು 208 ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ. ಮೂರು ಏಕದಿನ ಪಂದ್ಯ ಆಡಿ 6 ವಿಕೆಟ್​ ಪಡೆದಿದ್ದಾರೆ. 19 ರನ್​ಗೆ 4 ವಿಕೆಟ್​ ಕೆಡವಿದ್ದು ಅವರ ಅತ್ಯುತ್ತಮ ವೈಯಕ್ತಿಕ ಸಾಧನೆಯಾಗಿದೆ.

ಮ್ಯಾಚ್ ಫಿಕ್ಸಿಂಗ್ ಶ್ರೀಲಂಕಾ ಆಟಗಾರನ ಬಂಧನ

ಶ್ರೀಲಂಕಾ ಮಾಜಿ ಕ್ರಿಕೆಟಿಗ ಸಚಿತ್ರ ಸೇನಾನಾಯಕೆ(Sachithra Senanayake) ಅವರನ್ನು ಮ್ಯಾಚ್ ಫಿಕ್ಸಿಂಗ್(match fixing) ಆರೋಪದ ಮೇಲೆ ಬುಧವಾರ ಬಂಧಿಸಲಾಗಿದೆ. ಕ್ರೀಡಾ ಭ್ರಷ್ಟಾಚಾರ ತನಿಖಾ ದಳದ ಪೊಲೀಸರು ಅವರಿನ್ನು ಬಂಧಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಮೂರು ವಾರಗಳ ಹಿಂದೆ ಅವರಿಗೆ ನ್ಯಾಯಾಲಯವು ವಿದೇಶ ಪ್ರಯಾಣವನ್ನು ನಿಷೇಧಿಸಿತು. ಕಳೆದ ವಾರ ಅವರ ಬಂಧನವಾಗಿದೆ.

ಸದ್ಯ ಈ ಪ್ರಕರಣದಲ್ಲಿ ಕೊಲಂಬೊ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮೂರು ತಿಂಗಳ ಅವಧಿಗೆ ಜಾರಿಯಲ್ಲಿರುವ ಪ್ರಯಾಣ ನಿಷೇಧವನ್ನು ವಿಧಿಸಿದೆ. ಮಾಜಿ ಆಫ್ ಸ್ಪಿನ್ನರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಕ್ರೀಡಾ ಸಚಿವಾಲಯದ ವಿಶೇಷ ತನಿಖಾ ಘಟಕವು ಜನರಲ್ ಇಲಾಖೆಗೆ ಸೂಚನೆ ನೀಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ಲಂಕಾ ಪ್ರೀಮಿಯರ್ ಲೀಗ್ (LPL) ನ 2020ರ ಆವೃತ್ತಿಯಲ್ಲಿ ಸೇನಾನಾಯಕೆ ಅವರು ಇಬ್ಬರು ಆಟಗಾರರಿಗೆ ಫಿಕ್ಸಿಂಗ್​ ನಡೆಸಲು ಪ್ರಚೋದಿಸಿದ್ದಾರೆ ಎಂದು ಆರೋಪದಲ್ಲಿ ತಿಳಿದುಬಂದಿದೆ. 38 ವರ್ಷದ ಅವರು 2012 ಮತ್ತು 2016 ರ ನಡುವೆ ಶ್ರೀಲಂಕಾ ಪರ ಒಂದು ಟೆಸ್ಟ್, 49 ಏಕದಿನ ಮತ್ತು 24 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

Exit mobile version