Site icon Vistara News

Virat Kohli : ಮೈದಾನದಲ್ಲಿ ವಿರಾಟ್​ ಮೆರೆದಾಟ; ಹೊಸ ದಾಖಲೆ ಬರೆದ ಕಿಂಗ್​ ಕೊಹ್ಲಿ

Virat Kohli

ಚೆನ್ನೈ: ವಿರಾಟ್​ ಕೊಹ್ಲಿ (Virat Kohli) ತಮ್ಮ ನಾಲ್ಕನೇ ಏಕದಿನ ವಿಶ್ವ ಕಪ್ ಆಡುತ್ತಿದ್ದಾರೆ. ಕ್ರಿಕೆಟ್​ನ ಪ್ರತಿಯೊಂದು ವಿಚಾರದಲ್ಲೂ ಸಾಧನೆ ಮಾಡುತ್ತಿರುವ ಅವರು ಈ ಬಾರಿ ತಮ್ಮ ಮೊದಲ ಪಂದ್ಯದಲ್ಲಿಯೇ ಒಂದು ಸಾಧನೆ ಮಾಡಿದ್ದಾರೆ. ಕಿಂಗ್​ ಕೊಹ್ಲಿ ಈಗ ಏಕದಿನ ವಿಶ್ವಕಪ್​​ನಲ್ಲಿ ಮೆನ್ ಇನ್ ಬ್ಲೂ ಪರ ಅತಿ ಹೆಚ್ಚು ಕ್ಯಾಚ್​ಗಳನ್ನು ಹಿಡಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ಮಿಚೆಲ್ ಮಾರ್ಷ್ ಅವರ ಕ್ಯಾಚ್ ಪಡೆದ ಔಟ್ ಮಾಡುವ ಮೂಲಕ ವಿರಾಟ್ ಕೊಹ್ಲಿ ಈ ಅಪರೂಪದ ಸಾಧನೆ ಮಾಡಿದ್ದಾರೆ.

ಶುಬ್ಮನ್ ಗಿಲ್ ಅನುಪಸ್ಥಿತಿಯಲ್ಲಿ ಕೊಹ್ಲಿಯನ್ನು ಮೊದಲ ಸ್ಲಿಪ್​ನಲ್ಲಿ ಫೀಲ್ಡಿಂಗ್​ಗೆ ನಿಲ್ಲಿಸಲಾಗಿತ್ತು. ಅಂತೆಯೇ ಅವರು ಅದ್ಭುತ ಕ್ಯಾಚ್​ ಹಿಡಿಯುವ ಮೂಲಕ ವಿಶ್ವ ಕಪ್​ನಲ್ಲಿ ತಮ್ಮ ತಮ್ಮ 15ನೇ ಬಲಿಯನ್ನು ಪಡೆದುಕೊಂಡರು. ವಿರಾಟ್​ 2011 ರಲ್ಲಿ ತಮ್ಮ ಮೊದಲ ವಿಶ್ವ ಕಪ್​ ಪಂದ್ಯವನ್ನು ಆಡಿದ್ದರು. 12 ವರ್ಷಗಳ ನಂತರ ತಮ್ಮ 4ನೇ ವಿಶ್ವ ಕಪ್​ ಆಡುತ್ತಿದ್ದಾರೆ.

ಏಕದಿನ ವಿಶ್ವಕಪ್ನಲ್ಲಿ ಭಾರತ ಪರ ಅತಿ ಹೆಚ್ಚು ಕ್ಯಾಚ್​ಗಳನ್ನು ಹಿಡಿವರು (ವಿಕೆಟ್​ಕೀಪರ್ ಹೊರತುಪಡಿಸಿ)

ಕೊಹ್ಲಿ ತಮ್ಮ ಅದ್ಭುತ ಕ್ಯಾಚ್ ಮೂಲಕ ಭಾರತದ ಕೆಲವು ದಿಗ್ಗಜ ಆಟಗಾರರನ್ನು ಮೀರಿಸಿದ್ದಾರೆ. ಸಚಿನ್ ತೆಂಡೂಲ್ಕರ್, ಕಪಿಲ್ ದೇವ್ ಮತ್ತು ಅನಿಲ್ ಕುಂಬ್ಳೆ ಅವರನ್ನು ಹಿಂದಿಕ್ಕಿ ಏಕದಿನ ವಿಶ್ವ ಕಪ್​ನಲ್ಲಿ ಮೆನ್ ಇನ್ ಬ್ಲೂ ಪರ ಅತಿ ಹೆಚ್ಚು ಕ್ಯಾಚರ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐದನೇ ಏಕದಿನ ವಿಶ್ವಕಪ್ 2023 ರ ಪಂದ್ಯದಲ್ಲಿ ಟಾಸ್ ಗೆದ್ದ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ಏಕದಿನ ವಿಶ್ವಕಪ್ ನಲ್ಲಿ ಅತ್ಯುತ್ತಮ ತಂಡಗಳಲ್ಲಿ ಒಂದಾಗಿದೆ. ಎರಡೂ ತಂಡಗಳು ಗೆಲುವಿನೊಂದಿಗೆ ತಮ್ಮ ಅಭಿಯಾನವನ್ನು ಪ್ರಾರಂಭಿಸಲು ಎದುರು ನೋಡುತ್ತಿವೆ.

ಇದನ್ನೂ ಓದಿ : Shubman Gill: ಇನ್ನೂ ಎರಡು ಪಂದ್ಯಗಳಿಗೆ ಶುಭಮನ್​ ಗಿಲ್​ ಅನುಮಾನ

36 ವರ್ಷದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪಂದ್ಯಕ್ಕೆ ಮೊದಲು ಮಾತನಾಡಿ, ಅನಾರೋಗ್ಯದ ಕಾರಣ ಶುಬ್ಮನ್ ಗಿಲ್ ಟೂರ್ನಿಯ ಆರಂಭಿಕ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಅವರ ಬದಲಿಗೆ ಇಶಾನ್ ಕಿಶನ್ ಆಡಲಿದ್ದಾರೆ ಎಂದು ಖಚಿತಪಡಿಸಿದರು. ಬೌಲಿಂಗ್​ ಪರಿಸ್ಥಿತಿಗಳು ಸ್ವಲ್ಪ ನಿಧಾನವಾಗಿವೆ. ನಾವು ಲೈನ್​ ಮತ್ತು ಲೆಂತ್​ ಖಚಿತಪಡಿಸಿಕೊಳ್ಳಬೇಕಾಗಿದೆ. ವಿಶ್ವಕಪ್​ಗೆ ಮುನ್ನ ನಾವು ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಎರಡು ಉತ್ತಮ ಸರಣಿಗಳನ್ನು ಆಡಿದ್ದೇವೆ ಮತ್ತು ನಮ್ಮ ಎಲ್ಲಾ ಅವಕಾಶಗಳನ್ನು ಹೊಂದಿದ್ದೇವೆ. ಆದರೆ ಗಿಲ್​ ಅನಾರೋಗ್ಯಕ್ಕೆ ಒಳಗಾಧರು. ಅವರ ಬದಲಿಗೆ ಇಶಾನ್ ಕಣಕ್ಕಿಳಿಯಲಿದ್ದಾರೆ, “ಎಂದು ರೋಹಿತ್ ಹೇಳಿದರು.

ಭಾರತ ತಂಡ: ರೋಹಿತ್ ಶರ್ಮಾ (ಸಿ), ಇಶಾನ್ ಕಿಶನ್, ವಿರಾಟ್ ಕೊಹ್ಲಿ (ಸಿ), ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

Exit mobile version