ಬೆಂಗಳೂರು: ಸ್ಯಾಂಡಲ್ವುಡ್ ನಟರು ಹಾಗೂ ಈ ಕ್ಷೇತ್ರದ ಎಲ್ಲ ಸದಸ್ಯರು ಭಾಗಿಯಾಗುವ ಕನ್ನಡ ಚಲನಚಿತ್ರ ಕಪ್ನ (Kannada Chalanachitra Cricket) ಟಿಕೆಟ್ ಮಾರಾಟ ಪ್ರಕ್ರಿಯೆಗೆ ನಟ ಕಿಚ್ಚ ಸುದೀಪ್ ಅವರು ಭಾನುವಾರ ಚಾಲನೆ ಕೊಟ್ಟಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಟಿಕೆಟ್ ವಿತರಣೆ ಕುರಿತು ಮಾಹಿತಿ ನೀಡಿದರು. ಇದೇ ವೇಳೆ ಅವರು ಸಾಮಾಜಿಕ ಜಾಲತಾಣಗಳಲ್ಲೂ ಟಿಕೆಟ್ ವಿತರಣೆಯ ವೆಬ್ಸೈಟ್ (https://in.ticketgenie.in/Tickets/KCC-2023) ಮಾಹಿತಿ ಹಂಚಿಕೊಂಡಿದ್ದಾರೆ.
ಫೆಬ್ರವರಿ 24 ಮತ್ತು 25ರಂದು ಕೆಸಿಸಿ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ. ನಗರದ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ಪಂದ್ಯ ಆಯೋಜನೆಗೊಂಡಿದೆ. ಫೆಬ್ರವರಿ 24 ರಂದು 4, 6 ಹಾಗೂ 8 ಗಂಟೆಗೆ ಪಂದ್ಯಗಳು ಆಯೋಜನೆಗೊಂಡಿವೆ. 25ರಂದು 2, 4 ಹಾಗೂ 6 ಗಂಟೆಗೆ ಪಂದ್ಯ ನಡೆಯಲಿವೆ. ಟಿಕೆಟ್ ದರ 150 ರೂಪಾಯಿಯಿಂದ ಆರಂಭಗೊಂಡು 5000 ರೂಪಾಯಿ ತನಕ ನಿಗದಿಯಾಗಿದೆ.
ಇದನ್ನೂ ಓದಿ : Kiccha Sudeep : ವಾಲ್ಮೀಕಿ ಜಾತ್ರೆಗೆ ಬಾರದ ನಟ ಕಿಚ್ಚ ಸುದೀಪ್, ಸಿಟ್ಟಿಗೆದ್ದ ಅಭಿಮಾನಿಗಳಿಂದ ಭಾರಿ ದಾಂಧಲೆ, ಲಾಠಿಚಾರ್ಜ್
ಜಿ ಪಿಚ್ಚರ್ ಚಾನೆಲ್ನಲ್ಲಿ ಪಂದ್ಯದ ನೇರಪ್ರಸಾರವಾಗಲಿದೆ. 30 ದೇಶಗಳಲ್ಲಿ ಪಂದ್ಯ ಪ್ರಸಾರವಾಗಲಿದೆ ಎಂದು ಸುದೀಪ್ ಅವರು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಅವರು ಸಿನಿಮಾ ಕ್ಷೇತ್ರದವನ್ನು ಒಂದು ಕಡೆ ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ. ಇಲ್ಲೇನಾದರೂ ತಪ್ಪಾದರೆ ಅದನ್ನೇ ದೊಡ್ಡದು ಮಾಡಬೇಡಿ ಎಂದು ಹೇಳಿದರು.