Site icon Vistara News

Sudirman Cup 2023: ಆಸ್ಟ್ರೇಲಿಯಾ ವಿರುದ್ಧ ಗೆದ್ದು ಅಭಿಯಾನ ಮುಗಿಸಿದ ಭಾರತ

Sudirman Cup

ಸುಜೌ (ಚೀನಾ): ಸುದೀರ್‌ಮನ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ(Sudirman Cup 2023) ಈಗಾಗಲೇ ಹೊರಬಿದ್ದಿರುವ ಭಾರತ ತಂಡ ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿ ಅಭಿಯಾನವನ್ನು ಮುಗಿಸಿದೆ. ಬುಧವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು 4-1 ಅಂಕಗಳಿಂದ ಮಣಿಸುವಲ್ಲಿ ಯಶಸ್ವಿಯಾಗಿದೆ.

ಬುಧವಾರ ಆಸ್ಟ್ರೇಲಿಯಾ ವಿರುದ್ಧದ ಹಣಾಹಣಿಯಲ್ಲಿ ಮೊದಲ ಪಂದ್ಯದಲ್ಲಿ ಸೋಲು ಕಂಡರೂ ಬಳಿಕದ ಪಂದ್ಯಗಳಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಭಾರತ ಗೆಲುವು ತನ್ನದಾಗಿಸಿಕೊಂಡಿತು. ಮೊದಲು ಕಣಕ್ಕಿಳಿದ ಮಿಶ್ರ ಡಬಲ್ಸ್‌ ಜೋಡಿ ಸಾಯಿ ಪ್ರತೀಕ್- ತನೀಷಾ ಕ್ರಾಸ್ತೊ 21-17, 14-21, 18-21 ರಲ್ಲಿ ಕೆನೆತ್‌ ಜೆ- ಗ್ರೊನ್ಯಾ ಸಮರ್‌ವಿವ್ ಎದುರು ಪರಾಭವಗೊಂಡರು.

ಆ ಬಳಿಕ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಎಚ್‌.ಎಸ್‌.ಪ್ರಣಯ್‌ ಅವರು ಜಾಕ್‌ ಯು ಅವರನ್ನು 21-8, 21-8 ಗೇಮ್​ಗಳಿಂದ ಮಣಿಸುವ ಮೂಲಕ 1-1 ಅಂತರದಿಂದ ಹೋರಾಟವನ್ನು ಸಮಬಲಕ್ಕೆ ತಂದರು. ಪಿ.ವಿ. ಸಿಂಧು ಬದಲು ಮಹಿಳೆಯರ ಸಿಂಗಲ್ಸ್‌ನಲ್ಲಿ ಅಡಿದ ಅನುಪಮಾ ಉಪಾಧ್ಯಾಯ 21-16, 21-18 ರಲ್ಲಿ ಟಿಫಾನಿ ಹೊ ಅವರನ್ನು ಹಿಮ್ಮೆಟಿಸಿದರು. ಪುರುಷರ ಡಬಲ್ಸ್‌ನಲ್ಲಿ ಎಂ.ಆರ್‌.ಅರ್ಜುನ್‌- ಧ್ರುವ್‌ ಕಪಿಲಾ ಜೋಡಿ 21-11, 21-12 ರಲ್ಲಿ ರಿಕಿ ಟಾಂಗ್- ರಿಯಾನೆ ವಾಂಗ್‌ ಎದುರು ಗೆಲುವು ದಾಖಲಿಸಿತು. ಅಂತಿಮ ಹಂತದಲ್ಲಿ ನಡೆದ ಮಹಿಳೆಯರ ಡಬಲ್ಸ್‌ನಲ್ಲಿ ತನೀಷಾ ಕ್ರಾಸ್ತೊ- ಅಶ್ವಿನಿ ಪೊನ್ನಪ್ಪ 21-19, 21-13 ರಲ್ಲಿ ಕೈಟ್ಲಿನ್‌ ಎಯಾ- ಏಂಜೆಲಾ ಯು ಅವರನ್ನು ಮಣಿಸಿ ಭಾರತದ ಗೆಲುವನ್ನು ಸಾರಿದರು.

ಇದನ್ನೂ ಓದಿ ಸುದಿರ್ಮನ್ ಕಪ್ ಬ್ಯಾಡ್ಮಿಂಟನ್: ಚೈನೀಸ್ ತೈಪೆ ವಿರುದ್ಧ 1-4 ಗೇಮ್​ಗಳಿಂದ ಸೋತ ಭಾರತ

‘ಸಿ’ ಗುಂಪಿಯನಲ್ಲಿ ಕಣಕ್ಕಿಳಿದಿದ್ದ ಭಾರತ ಈ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಬಹುದೆಂದು ನಿರೀಕ್ಷೆಯೊಂದನ್ನು ಮಾಡಲಾಗಿತ್ತು. ಆದರೆ ಮೊದಲ ಎರಡು ಪಂದ್ಯಗಳಲ್ಲಿ ಚೈನೀಸ್​​ ತೈಪೆ ಮತ್ತು ಮಲೇಷ್ಯಾ ತಂಡಗಳ ಎದುರು ಕ್ರಮವಾಗಿ 1-4 ಹಾಗೂ 0-5 ರಲ್ಲಿ ಸೋಲು ಕಂಡು ನಾಕೌಟ್‌ ರೇಸ್‌ನಿಂದ ಹೊರಬಿದ್ದಿತ್ತು.

Exit mobile version