Site icon Vistara News

Sudirman Cup: ಸುದಿರ್ಮನ್‌ ಕಪ್​ಗೆ ಭಾರತ ತಂಡ ಪ್ರಕಟ: ಪ್ರಣಯ್‌, ಸಿಂಧು ನೇತೃತ್ವ

sudirman-cup-indian-team-announced-for-sudirman-cup-pranai-sindhu-to-lead

sudirman-cup-indian-team-announced-for-sudirman-cup-pranai-sindhu-to-lead

ನವದೆಹಲಿ: ಪ್ರತಿಷ್ಠಿತ ಸುದಿರ್ಮನ್‌ ಕಪ್‌ ಬ್ಯಾಡ್ಮಿಂಟನ್(Sudirman Cup)​ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದೆ. ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಪಿ.ವಿ. ಸಿಂಧು ಮತ್ತು ವಿಶ್ವದ ನಂ. 9 ಆಟಗಾರ ಎಚ್‌.ಎಸ್‌. ಪ್ರಣಯ್‌ ಅವರ ನೇತೃತ್ವದಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ಈ ಪಂದ್ಯವಾವಳಿ ಚೀನದ ಸುಝೂನಲ್ಲಿ ಮೇ 14ರಿಂದ 21ರ ತನಕ ನಡೆಯಲಿದೆ.

ಟೂರ್ನಿಯಲ್ಲಿ ಒಟ್ಟು 16 ತಂಡ​ಗಳು ಪಾಲ್ಗೊ​ಳ್ಳ​ಲಿದ್ದು, 4 ಗುಂಪು​ಗ​ಳ​ನ್ನಾಗಿ ವಿಂಗ​ಡಿ​ಸ​ಲಾ​ಗಿದೆ. ಭಾರತ ‘ಸಿ’ ವಿಭಾಗದಲ್ಲಿ ಸ್ಥಾನ ಪಡೆದಿದ್ದು, ಮಲೇಷ್ಯಾ, ಚೈನೀಸ್‌ ತೈಪೆ ಮತ್ತು ಆಸ್ಟ್ರೇಲಿಯಾ ಈ ವಿಭಾಗದ ಉಳಿದ ತಂಡಗಳಾಗಿವೆ. ಇದು ಮಿಶ್ರ ತಂಡ ಚಾಂಪಿಯನ್‌ಶಿಪ್‌ ಆಗಿದ್ದು, ಮೊದಲ ಬಾರಿ ಚಿನ್ನದ ಪದಕ ಗೆಲ್ಲುವ ಗುರಿಯಿಟ್ಟುಕೊಂಡು ರಾಷ್ಟ್ರೀಯ ಆಯ್ಕೆ ಸಮಿತಿಯು ‘ಸಮತೋಲಿತ ತಂಡ’ವನ್ನು ಆಯ್ಕೆ ಮಾಡಿದೆ.

ಕಳೆದ ವರ್ಷ ಪ್ರತಿಷ್ಠಿತ ಥಾಮಸ್‌ ಕಪ್ ಟೂರ್ನಿಯಲ್ಲಿ ಭಾರತ ತಂಡ ಪ್ರಶಸ್ತಿ ಜಯಿಸಿತ್ತು. ಈ ವರ್ಷದ ಆರಂಭದಲ್ಲಿ ಏಷ್ಯನ್ ಮಿಶ್ರ ತಂಡ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿತ್ತು. ಇದೀಗ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಇರಾದೆಯೊಂದಿಗೆ ಕಣಕ್ಕಿಳಿಯಲು ಭಾರತ ತಂಡ ಸಜ್ಜಾಗಿದೆ. ತಂಡದಲ್ಲಿ ಹಲವು ಭರವಸೆಯ ಆಟಗಾರರು ಕಾಣಿಸಿಕೊಂಡಿದ್ದಾರೆ. ಜತೆಗೆ ಯುವ ಆಟಗಾರರು ಕೂಡ ಇದ್ದಾರೆ. ಒಟ್ಟಾರೆ ಭಾರತ ಸಮರ್ಥ ತಂಡವಾಗಿ ಕಾಣಿಸಿಕೊಂಡಿದೆ.

ಇದನ್ನೂ ಓದಿ Spanish Para-Badminton: ಕಂಚಿನ ಪದಕ ವಿಜೇತ ಕನ್ನಡಿಗ ಸುಹಾಸ್ ಸ್ವದೇಶಕ್ಕೆ ಆಗಮನ

ಪುರು​ಷರ ಸಿಂಗ​ಲ್ಸ್‌​ನಲ್ಲಿ ಕಿದಂಬಿ ಶ್ರೀಕಾಂತ್‌ ಸ್ಪರ್ಧಿ​ಸ​ಲಿದ್ದು, ಲಕ್ಷ್ಯ ಸೇನ್‌ ಮೀಸಲು ಆಟ​ಗಾ​ರ​ನಾಗಿ ತಂಡದ ಜತೆ​ಗಿ​ರ​ಲಿ​ದ್ದಾರೆ. ಸಿಂಧು ಜತೆ ಅನು​ಪಮಾ ಉಪಾ​ಧ್ಯಾಯ ಮಹಿಳಾ ಸಿಂಗ​ಲ್ಸ್‌​ನಲ್ಲಿ ಆಡಲಿದ್ದಾರೆ. ಪುರು​ಷರ ಡಬ​ಲ್ಸ್‌​ನ​ಲ್ಲಿ ಸಾತ್ವಿ​ಕ್‌-ಚಿರಾಗ್‌, ಅರ್ಜು​ನ್‌-ಧೃವ್‌ ಕಪಿಲಾ, ಮಹಿಳಾ ಡಬ​ಲ್ಸ್‌​ನಲ್ಲಿ ಗಾಯ​ತ್ರಿ-ತ್ರೀಸಾ, ಅಶ್ವಿನಿ-ತನೀಷಾ, ಮಿಶ್ರ ಡಬ​ಲ್ಸ್‌​ನಲ್ಲಿ ತನೀ​ಷಾ-ಸಾಯಿ ಪ್ರತೀ​ಕ್‌ ಕಣಕ್ಕಿಳಿಯಲಿದ್ದಾರೆ.

Exit mobile version