ಕೋಲ್ಕತಾ: ಭಾರತದಲ್ಲಿ ಆಳವಾಗಿ ಬೇರೂರಿರುವ ಕ್ರಿಕೆಟ್, ಕ್ರಿಕೆಟಿಗರೆಂದರೆ ದೇವರು ಎಂದು ಪೂಜಿಸಲ್ಪಡುವ ಜಾಯಮಾನದಲ್ಲಿ ಒಬ್ಬ ಫುಟ್ಬಾಲ್ ಆಟಗಾರ (Indian Football player) 20 ವರ್ಷಗಳಿಂದ ದೇಶಕ್ಕಾಗಿ ಆಡುತ್ತಾನೆ ಅಂದರೆ ನಂಬಲು ಕಷ್ಟ ಆಗಬಹುದು. ಫುಟ್ಬಾಲಿಗೆ ಕೆಲವು ಶ್ರೀಮಂತ ಕ್ಲಬ್ ಬಿಟ್ಟರೆ ಬೇರೆ ಯಾವ ಸಪೋರ್ಟ್ ಕೂಡ ಇಲ್ಲದ ಸನ್ನಿವೇಶದಲ್ಲಿ ಕೂಡ ಈ ದೈತ್ಯ ಪ್ರತಿಭೆಯ ಆಟಗಾರ ದಾಖಲೆಗಳ ಮೇಲೆ ದಾಖಲೆಗಳನ್ನು ಮಾಡುತ್ತಾನೆ ಅಂದರೆ ಅದು ನಿಜವಾಗಿಯೂ ಅದ್ಭುತ! ಭಾರತೀಯ ಫುಟ್ಬಾಲ್ ತಂಡದ (Indian Football team) ಕ್ಯಾಪ್ಟನ್ ಆಗಿ ಭಾರತದಲ್ಲಿ ಫುಟ್ಬಾಲ್ ಕ್ರೇಜನ್ನು ಜೀವಂತವಾಗಿ ಉಳಿಸಿದ ಲೆಜೆಂಡ್ ಮಿಂಚು ಹರಿಸುವ ಫಾರ್ವರ್ಡ್ ಆಟಗಾರ ಸುನೀಲ್ ಚೆಟ್ರಿ (Sunil Chhetri) ವಿದಾಯದ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಇಂದು (ಗುರುವಾರ) ನಡೆಯುವ ಕುವೈಟ್ ವಿರುದ್ಧ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಫುಟ್ಬಾಲ್ ವೇತ್ತಿ ಜೀವನಕ್ಕೆ ತೆರೆ ಎಳೆಯಲಿದ್ದಾರೆ. ಭಾರತ ಮುಂದಿನ ಸುತ್ತು ಪ್ರವೇಶಿಸಬೇಕಾದರೆ ಈ ಪಂದ್ಯ ಗೆಲ್ಲಲೇಬೇಕಿದೆ.
38 ವರ್ಷದ ಚೆಟ್ರಿ ಕೆಲವು ವಾರಗಳ ಹಿಂದೆ ತಮ್ಮ ವಿದಾಯ ಘೋಷಿಸಿದ್ದರು. ಒಟ್ಟು ಭಾರತ ಪರ 150 ಪಂದ್ಯಗಳನ್ನಾಡಿ 94 ಗೋಲು ಬಾರಿಸಿದ್ದಾರೆ. ಮೆಸ್ಸಿ ಮತ್ತು ರೊನಾಲ್ಡೊ ಬಳಿಕ ಅತ್ಯಧಿಕ ಗೋಲು ಬಾರಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಇಂದು ನಡೆಯುವ ಪಂದ್ಯದಲ್ಲಿ ಭಾರತ ಗೆಲ್ಲುವ ಮೂಲಕ ಚೆಟ್ರಿಗೆ ಗೆಲುವಿನ ವಿದಾಯ ನೀಡಬೇಕಿದೆ.
ಜೂನ್ 12, 2005 ರಂದು ಕ್ವೆಟ್ಟಾದಲ್ಲಿ ಪಾಕಿಸ್ತಾನದ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಚೆಟ್ರಿ ಮೊದಲ ಬಾರಿಗೆ ಹಿರಿಯ ರಾಷ್ಟ್ರೀಯ ತಂಡದ ಜರ್ಸಿಯನ್ನು ತೊಟ್ಟಿದ್ದರು. ಆ ಪಂದ್ಯ 1-1 ಡ್ರಾದಲ್ಲಿ ಅತ್ಯಂಕಡಿತ್ತು. ಭಾರತದ ಈ ಒಂದು ಗೋಲ್ ಬಾರಿಸಿದ್ದು ಚೆಟ್ರಿ. ಅಂದಿನಿಂದ, ಅವರು ಇದುವರೆಗೂ ರಾಷ್ಟ್ರೀಯ ತಂಡದ ಪರ ಹಲವು ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ Sunil Chhetri Farewell: ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಕ್ಕೆ ಭಾರತ ತಂಡ ಪ್ರಕಟ; ಚೆಟ್ರಿಗೆ ವಿದಾಯ ಪಂದ್ಯ
18ನೆಯ ವರ್ಷದಲ್ಲಿ ವೃತ್ತಿಪರ ಫುಟ್ಬಾಲ್ ಆಟಗಾರನಾಗಿ ಆಡಲು ಆರಂಭ ಮಾಡಿದ್ದ ಸುನೀಲ್ ಹೆಚ್ಚು ಕಡಿಮೆ ಭಾರತದ ಎಲ್ಲ ಕ್ಲಬ್ಗಳ ಪರವಾಗಿ ಆಡಿದ್ದಾರೆ. ಮೋಹನ್ ಬಗಾನ್, ಜೆಸಿಟಿ, ಬಂಗಾಳ ತಂಡಗಳ ಆಟಗಾರನಾಗಿ ಮಿಂಚು ಹರಿಸಿದ್ದಾರೆ. 2015ರಿಂದ ಇಂದಿನವರೆಗೆ ಬೆಂಗಳೂರು ತಂಡದ ಪರವಾಗಿ ಆಡುತ್ತ ಬಂದಿದ್ದಾರೆ.
ಭಾರತ ತಂಡ
ಗೋಲ್ ಕೀಪರ್ಸ್: ಗುರ್ಪ್ರೀತ್ ಸಿಂಗ್ ಸಂಧು, ಅಮರಿಂದರ್ ಸಿಂಗ್, ವಿಶಾಲ್ ಕೈತ್.
ಡಿಫೆಂಡರ್ಸ್: ಅಮೆ ರಾನವಾಡೆ, ಅನ್ವರ್ ಅಲಿ, ಜಯ್ ಗುಪ್ತಾ, ಲಾಲ್ಚುಂಗ್ನುಂಗಾ, ಮೆಹತಾಬ್ ಸಿಂಗ್, ನರೇಂದರ್, ನಿಖಿಲ್ ಪೂಜಾರಿ, ರಾಹುಲ್ ಭೆಕೆ, ಸುಭಾಶಿಶ್ ಬೋಸ್.
ಮಿಡ್ ಫೀಲ್ಡರ್ಸ್: ಅನಿರುದ್ಧ್ ಥಾಪಾ, ಬ್ರಾಂಡನ್ ಫರ್ನಾಂಡಿಸ್, ಎಡ್ಮಂಡ್ ಲಾಲ್ರಿಂಡಿಕಾ, ಜೀಕ್ಸನ್ ಸಿಂಗ್ ತೌನೋಜಮ್, ಲಾಲಿಯನ್ಜುವಾಲಾ ಚಾಂಗ್ಟೆ, ಲಿಸ್ಟನ್ ಕೊಲಾಕೊ, ಮಹೇಶ್ ಸಿಂಗ್ ನೌರೆಮ್, ನಂದಕುಮಾರ್ ಶೇಖರ್, ಸಹಲ್ ಅಬ್ದುಲ್ ಸಮದ್, ಸುರೇಶ್ ಸಿಂಗ್ ವಾಂಗ್ಜಾಮ್.
ಫಾರ್ವರ್ಡ್ಸ್: ಡೇವಿಡ್ ಲಾಲ್ಹನ್ಸಂಗ, ಮನ್ವೀರ್ ಸಿಂಗ್, ರಹೀಮ್ ಅಲಿ, ಸುನೀಲ್ ಚೆಟ್ರಿ, ವಿಕ್ರಮ್ ಪ್ರತಾಪ್ ಸಿಂಗ್.