Site icon Vistara News

Sunil Chhetri Farewell: ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಕ್ಕೆ ಭಾರತ ತಂಡ ಪ್ರಕಟ; ಚೆಟ್ರಿಗೆ ವಿದಾಯ ಪಂದ್ಯ

Sunil Chhetri Farewell

Sunil Chhetri Farewell: India Announce 27-Member Squad For FIFA World Cup Qualifier Against Kuwait

ಬೆಂಗಳೂರು: ಭಾರತದ ಖ್ಯಾತ ಫುಟ್ಬಾಲ್(Indian football icon)​ ಆಟಗಾರ ಸುನೀಲ್‌ ಚೆಟ್ರಿ(Sunil Chhetri) ಅವರು ಆಡುವ ವಿದಾಯ(Sunil Chhetri Farewell) ಪಂದ್ಯವಾದ ಕುವೈತ್(Kuwait) ವಿರುದ್ಧ ಫಿಫಾ ವಿಶ್ವಕಪ್ ಅರ್ಹತಾ(FIFA World Cup 2026 qualifier) ಪಂದ್ಯಕ್ಕೆ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್‌ 27 ಸದಸ್ಯರ ಫುಟ್ಬಾಲ್ ತಂಡವನ್ನು ಪ್ರಕಟಿಸಿದೆ. ಭಾರತ ಮತ್ತು ಕುವೈತ್(India vs Kuwait) ನಡುವಣ ಈ ಪಂದ್ಯ ಜೂನ್​ 6ರಂದು ನಡೆಯಲಿದೆ.

ಫಾರ್ವರ್ಡ್ ಆಟಗಾರ ಪಾರ್ಥಿಬ್ ಗೊಗೊಯ್ ಮತ್ತು ಡಿಫೆಂಡರ್ ಮುಹಮ್ಮದ್ ಹಮ್ಮದ್ ಗಾಯಗೊಂಡ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ತಂಡವನ್ನು ಮುಖ್ಯ ಕೋಚ್ ಇಗೊರ್ ಸ್ಟಿಮಾಕ್ ಪ್ರಕಟಿಸಿದರು. ಭಾರತ ಪ್ರಸ್ತುತ 4 ಪಂದ್ಯಗಳಿಂದ ನಾಲ್ಕು ಅಂಕಗಳೊಂದಿಗೆ ಗುಂಪಿನಲ್ಲಿ 2ನೇ ಸ್ಥಾನದಲ್ಲಿದೆ. ಗುಂಪಿನಲ್ಲಿ ಅಗ್ರ 2 ತಂಡಗಳು ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ 3ನೇ ಸುತ್ತಿಗೆ ಅರ್ಹತೆ ಪಡೆಯುತ್ತವೆ. ಹಾಗೆ 2027ರಲ್ಲಿ ಸೌದಿ ಅರೇಬಿಯಾದಲ್ಲಿ ನಡೆಯುವ ಎಎಫ್​ಸಿ ಏಷ್ಯನ್ ಕಪ್​​ಗೆ ತಮ್ಮ ಸ್ಥಾನ ಕಾಯ್ದಿರಿಸುತ್ತವೆ.

2005ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಪದಾರ್ಪಣೆ ಮಾಡಿದ ಸುನೀಲ್‌ ಚೆಟ್ರಿ 93 ಗೋಲು ದಾಖಲಿಸಿ ಅತ್ಯಧಿಕ ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೋನೆಲ್‌ ಮೆಸ್ಸಿ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದ್ದಾರೆ.

ಜೂನ್ 12, 2005 ರಂದು ಕ್ವೆಟ್ಟಾದಲ್ಲಿ ಪಾಕಿಸ್ತಾನದ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಚೆಟ್ರಿ ಮೊದಲ ಬಾರಿಗೆ ಹಿರಿಯ ರಾಷ್ಟ್ರೀಯ ತಂಡದ ಜರ್ಸಿಯನ್ನು ತೊಟ್ಟಿದ್ದರು. ಆ ಪಂದ್ಯ 1-1 ಡ್ರಾದಲ್ಲಿ ಅತ್ಯಂಕಡಿತ್ತು. ಭಾರತದ ಈ ಒಂದು ಗೋಲ್​ ಬಾರಿಸಿದ್ದು ಚೆಟ್ರಿ. ಅಂದಿನಿಂದ, ಅವರು ಇದುವರೆಗೂ ರಾಷ್ಟ್ರೀಯ ತಂಡದ ಪರ ಹಲವು ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ Sunil Chhetri: ಭಾರತದ ಫುಟ್ಬಾಲ್‌ ಮಾಂತ್ರಿಕ ಸುನೀಲ್ ಚೆಟ್ರಿ ಕುರಿತ 8 ಕುತೂಹಲಕರ ಸಂಗತಿಗಳಿವು!

ಭಾರತಕ್ಕಾಗಿ 145 ಪಂದ್ಯಗಳನ್ನು ಆಡಿರುವ ಅವರು 20 ವರ್ಷಗಳ ವೃತ್ತಿಜೀವನದಲ್ಲಿ 93 ಗೋಲುಗಳನ್ನು ಗಳಿಸಿದ್ದಾರೆ. ಭಾಗವಹಿಸಿದ ಎಲ್ಲ ಜಾಗತಿಕ ಕೂಟಗಳಲ್ಲಿ ಒಂದಲ್ಲ ಒಂದು ಪ್ರಶಸ್ತಿ ಗೆಲ್ಲದೇ ಸುನೀಲ್ ಹಿಂದೆ ಬಂದ ಒಂದು ಉದಾಹರಣೆ ಕೂಡ ದೊರೆಯುವುದಿಲ್ಲ. ಸುನೀಲ್ ಕಾರಣಕ್ಕೆ ಭಾರತದಲ್ಲಿ ಫುಟ್ಬಾಲ್ ಆಕರ್ಷಣೆ ಹೆಚ್ಚಿತು ಮತ್ತು ಹೆಚ್ಚು ಯುವಜನತೆ ಫುಟ್ಬಾಲ್ ಆಡಲು ಶುರು ಮಾಡಿದರು ಅನ್ನುವ ಮಾತಿನಲ್ಲಿ ಉತ್ಪ್ರೇಕ್ಷೆ ಇಲ್ಲ!

ಭಾರತ ತಂಡ

ಗೋಲ್ ಕೀಪರ್ಸ್: ಗುರ್ಪ್ರೀತ್ ಸಿಂಗ್ ಸಂಧು, ಅಮರಿಂದರ್ ಸಿಂಗ್, ವಿಶಾಲ್ ಕೈತ್.

ಡಿಫೆಂಡರ್ಸ್: ಅಮೆ ರಾನವಾಡೆ, ಅನ್ವರ್ ಅಲಿ, ಜಯ್ ಗುಪ್ತಾ, ಲಾಲ್ಚುಂಗ್ನುಂಗಾ, ಮೆಹತಾಬ್ ಸಿಂಗ್, ನರೇಂದರ್, ನಿಖಿಲ್ ಪೂಜಾರಿ, ರಾಹುಲ್ ಭೆಕೆ, ಸುಭಾಶಿಶ್ ಬೋಸ್.

ಮಿಡ್ ಫೀಲ್ಡರ್ಸ್: ಅನಿರುದ್ಧ್ ಥಾಪಾ, ಬ್ರಾಂಡನ್ ಫರ್ನಾಂಡಿಸ್, ಎಡ್ಮಂಡ್ ಲಾಲ್ರಿಂಡಿಕಾ, ಜೀಕ್ಸನ್ ಸಿಂಗ್ ತೌನೋಜಮ್, ಲಾಲಿಯನ್ಜುವಾಲಾ ಚಾಂಗ್ಟೆ, ಲಿಸ್ಟನ್ ಕೊಲಾಕೊ, ಮಹೇಶ್ ಸಿಂಗ್ ನೌರೆಮ್, ನಂದಕುಮಾರ್ ಶೇಖರ್, ಸಹಲ್ ಅಬ್ದುಲ್ ಸಮದ್, ಸುರೇಶ್ ಸಿಂಗ್ ವಾಂಗ್ಜಾಮ್.

ಫಾರ್ವರ್ಡ್ಸ್: ಡೇವಿಡ್ ಲಾಲ್ಹನ್ಸಂಗ, ಮನ್ವೀರ್ ಸಿಂಗ್, ರಹೀಮ್ ಅಲಿ, ಸುನೀಲ್​ ಚೆಟ್ರಿ, ವಿಕ್ರಮ್ ಪ್ರತಾಪ್ ಸಿಂಗ್.

Exit mobile version