Site icon Vistara News

Neeraj Chopra : ನೀರಜ್ ಚೋಪ್ರಾ ಭೇಟಿಯಾದ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ

Neeraj Chopra

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಅಥ್ಲೀಟ್ ನೀರಜ್ ಚೋಪ್ರಾ (Neeraj Chopra) ಅವರನ್ನು ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ ಸುನಿಲ್ ಛೆಟ್ರಿ ಭೇಟಿಯಾಗಿ ಶುಭ ಹಾರೈಸಿದರು. ಕ್ರೀಡಾಕೂಟದಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಕ್ರೀಡಾಪಟುಗಳನ್ನು ಭೇಟಿಯಾಗಲು ಛೆಟ್ರಿ ಪ್ಯಾರಿಸ್ ಪ್ರಯಾಣಿಸಿದ್ದರು. ಸತತ ಒಲಿಂಪಿಕ್ಸ್​​ನಲ್ಲಿ ಪದಕಗಳನ್ನು ಗೆದ್ದ ಮೊದಲ ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ನೀರಜ್ ಪಾತ್ರರಾಗಿದ್ದಾರೆ.

ಗುರುವಾರ ನಡೆದ 2024 ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿನ ಜಾವೆಲಿನ್​ ಥ್ರೋ ಫೈನಲ್​​​ನಲ್ಲಿ 89.45 ಮೀಟರ್ ಎಸೆಯುವ ಮೂಲಕ ಬೆಳ್ಳಿ ಪದಕ ಗಳಿಸಿದರು. ಇದು ಟೋಕಿಯೊ 2020 ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಗೆದ್ದ ನೀರಜ್​ಗೆ ಸಿಕ್ಕಿದ ಇನ್ನೊಂದು ಪದಕವಾಗಿದೆ. ಪ್ಯಾರಿಸ್ 2024 ಒಲಿಂಪಿಕ್ಸ್​​ನಲ್ಲಿ ಅರ್ಷದ್ ನದೀಮ್ ತಮ್ಮ ಎರಡನೇ ಪ್ರಯತ್ನದಲ್ಲಿ 92.97 ಮೀಟರ್ ಎಸೆಯುವ ಮೂಲಕ ಒಲಿಂಪಿಕ್ ದಾಖಲೆ ನಿರ್ಮಿಸಿ ಚಿನ್ನ ಗೆದ್ದರು. ಆದರ ನೀರಜ್​ ಗೆದ್ದಿರುವ ಬೆಳ್ಳಿ ಭಾರತದ ಪಾಲಿಗೆ ಬಹುಮುಖ್ಯವಾಗಿದೆ. ಅಂತೆಯೇ ನೀರಜ್ ಅವರನ್ನು ಭೇಟಿಯಾದ ಛೆಟ್ರಿ ಅಭಿನಂದನೆ ಸಲ್ಲಿಸಿದರು.

ಈ ಸಾಧನೆಯು ಒಲಿಂಪಿಕ್ಸ್​ನಲ್ಲಿ ಒಂದಕ್ಕಿಂತ ಹೆಚ್ಚು ವೈಯಕ್ತಿಕ ಪದಕಗಳನ್ನು ಗೆದ್ದ ಭಾರತೀಯ ಕ್ರೀಡಾಪಟುಗಳ ಎಲೈಟ್ ಗುಂಪಿಗೆ ನೀರಜ್ ಅವರನ್ನು ಸೇರಿಸಿದೆ. ಇದಕ್ಕೂ ಮುನ್ನ ಸುಶೀಲ್ ಕುಮಾರ್ (ಕುಸ್ತಿ) ಮತ್ತು ಪಿ.ವಿ.ಸಿಂಧು (ಬ್ಯಾಡ್ಮಿಂಟನ್) ಮಾತ್ರ ಎರಡೆದರು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ನಾರ್ಮನ್ ಪ್ರಿಚರ್ಡ್ , ಸುಶೀಲ್ ಕುಮಾರ್, ಪಿ.ವಿ.ಸಿಂಧು ಮತ್ತು ಮನು ಭಾಕರ್ ಅವರ ಸಾಲಿಗೆ ಸೇರಿರುವ ನೀರಜ್ ಒಲಿಂಪಿಕ್ಸ್ ನಲ್ಲಿ ಒಂದಕ್ಕಿಂತ ಹೆಚ್ಚು ಪದಕಗಳನ್ನು ಗೆದ್ದ ಐದನೇ ಭಾರತೀಯರಾಗಿದ್ದಾರೆ.

ಇದನ್ನೂ ಓದಿ: Rahul Dravid : ಕೋಚಿಂಗ್​ ಅವಧಿಯ ಅತ್ಯಂತ ಕೆಟ್ಟ ಸರಣಿಯನ್ನು ವಿವರಿಸಿದ ರಾಹುಲ್ ದ್ರಾವಿಡ್​

ಪುರುಷರ ಜಾವೆಲಿನ್ ಫೈನಲ್​​ನಲ್ಲಿ ನೀರಜ್ ಚೋಪ್ರಾ ದೀರ್ಘಕಾಲದ ಸೊಂಟದ ಗಾಯಕ್ಕೆ ಚಿಕಿತ್ಸೆ ಪಡೆಯಲು ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ. ಕಳೆದ ಕೆಲವು ತಿಂಗಳುಗಳಿಂದ ಶಸ್ತ್ರಚಿಕಿತ್ಸೆಯ ಬಗ್ಗೆ ಯೋಚಿಸಿದ ನಂತರ ಜಾವೆಲಿನ್ ಸೂಪರ್​ಸ್ಟಾರ್​ ಒಲಿಂಪಿಕ್ಸ್​ ಮುಗಿದ ಬಳಿಕ ನಿರ್ಧಾರಕ್ಕೆ ಬಂದಿದ್ದಾರೆ.

Exit mobile version