Site icon Vistara News

Sunil Chhetri: 150ನೇ ಅಂತಾರಾಷ್ಟ್ರೀಯ ಪಂದ್ಯ ಆಡಲು ಸಜ್ಜಾದ ಸುನೀಲ್ ಚೆಟ್ರಿ

Sunil Chhetri

ಗುವಾಹಟಿ: ಭಾರತದ ಖ್ಯಾತ ಫುಟ್ಬಾಲ್​ ತಾರೆ ಸುನೀಲ್ ಚೆಟ್ರಿ(Sunil Chhetri) ಅವರು ತಮ್ಮ 150ನೇ(Sunil Chhetri’s 150th International match) ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಅಫಫ್ಘಾನಿಸ್ಥಾನ ವಿರುದ್ಧ ಇಂದು (ಮಂಗಳವಾರ) ನಡೆಯುವ 2026ರ ಫಿಫಾ ವಿಶ್ವಕಪ್‌ ಅರ್ಹತಾ(FIFA World Cup 2026 ) ಸುತ್ತಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಚೆಟ್ರಿ ಈ ಸಾಧನೆ ಮಾಡಲಿದ್ದಾರೆ. ಈ ಮೈಲುಗಲ್ಲು ನಿರ್ಮಿಸಿದ ಭಾರತದ ಮೊದಲ ಫುಟ್ಬಾಲ್ ಆಟಗಾರ ಎನಿಸಿಕೊಳ್ಳಲಿದ್ದಾರೆ. 2005ರಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದ ಚೆಟ್ರಿ ಇದುವರೆಗೆ 149* ಪಂದ್ಯಗಳನ್ನಾಡಿ 93 ಗೋಲುಗಳನ್ನು ಹೊಡೆದಿದ್ದಾರೆ.

“ನಾನು ದೆಹಲಿಯಲ್ಲಿ ಸುಬ್ರೊಟೊ ಕಪ್ ಆಡುವಾಗ, ದೇಶಕ್ಕಾಗಿ ಆಡುತ್ತೇನೆ ಎಂದು ನಾನು ಭಾವಿಸಿರಲಿಲ್ಲ ಅಥವಾ ಕನಸು ಕಾಣಲಿಲ್ಲ. ಕ್ಲಬ್‌ಗಾಗಿ ಆಡುವ ವೃತ್ತಿಪರ ಸೆಟಪ್ ತುಂಬಾ ದೂರವಾಗಿತ್ತು. ಏಕೆಣದರೆ ಆ ದಿನಗಳಲ್ಲಿ ಅದು ಬಹಳ ಕಷ್ಟಕರವಾಗಿತ್ತು. ಹಾಗಾಗಿ ನಾನು ಆಡುವ ಕನಸು ಕಾಣಲಿಲ್ಲ. ಆದರೆ ದೇವರ ದಯೆಯಿಂದ ನನಗೆ ಈ ಅವಕಾಶ ಒದಗಿ ಬಂತು. ದೇಶವನ್ನು ಪ್ರತಿನಿಧಿಸುವ ಪ್ರತಿ ಕ್ಷಣವೂ ಕೂಡ ವಿಶೇಷ” ಎಂದು 150ನೇ ಪಂದ್ಯವಾನ್ನಾಡುವ ಮುನ್ನ ಚೆಟ್ರಿ ಭಾವುಕ ಮಾತುಗಳನ್ನಾಡಿದರು.

ಜೂನ್ 12, 2005 ರಂದು ಕ್ವೆಟ್ಟಾದಲ್ಲಿ ಪಾಕಿಸ್ತಾನದ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಚೆಟ್ರಿ ಮೊದಲ ಬಾರಿಗೆ ಹಿರಿಯ ರಾಷ್ಟ್ರೀಯ ತಂಡದ ಜರ್ಸಿಯನ್ನು ತೊಟ್ಟಿದ್ದರು. ಆ ಪಂದ್ಯ 1-1 ಡ್ರಾದಲ್ಲಿ ಅತ್ಯಂಕಡಿತ್ತು. ಭಾರತದ ಈ ಒಂದು ಗೋಲ್​ ಬಾರಿಸಿದ್ದು ಚೆಟ್ರಿ. ಅಂದಿನಿಂದ, ಅವರು ಇದುವರೆಗೂ ರಾಷ್ಟ್ರೀಯ ತಂಡದ ಪರ ಹಲವು ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ Sunil Chhetri: ಕ್ಲಬ್​ ತೊರೆದು ದೇಶದ ಪರ ಆಡಲು ನಿರ್ಧರಿಸಿದ ಸುನೀಲ್​ ಚೆಟ್ರಿಗೆ ಮೆಚ್ಚುಗೆ

ವಿಶ್ವಕಪ್‌ ಅರ್ಹತಾ ಸುತ್ತಿನ 3ನೇ ಘಟ್ಟಕ್ಕೇರಲು ಭಾರತ ಇಂದು ನಡೆಯುವ ಪಂದ್ಯದಲ್ಲಿ ಗೆಲುವು ಸಾಧಿಸಲೇ ಬೇಕು. ಗೆದ್ದರೆ ಏಷ್ಯಾ ಕಪ್‌ಗೂ ಅರ್ಹತೆ ಸಾಧಿಸುವ ಅವಕಾಶವಿದೆ. ಸೌದಿ ಅರೇಬಿಯಾದಲ್ಲಿ ಮಾರ್ಚ್‌ 22ರಂದು ನಡೆದ ಪಂದ್ಯದಲ್ಲಿ ಭಾರತ ತಂಡ ಅಫಫ್ಘಾನಿಸ್ಥಾನ ವಿರುದ್ಧ ಗೋಲು ರಹಿತ ಡ್ರಾ ಸಾಧಿಸಿತ್ತು. ಒಂದೊಮ್ಮೆ ಗೋಲು ಬಾರಿಸುತ್ತಿದ್ದರೆ ಭಾರತಕ್ಕೆ ಮುಂದಿನ ಹಂತಕ್ಕೇರಲು ಸಹಾಯವಾಗುತ್ತಿತ್ತು.

ವಿಶ್ವಕಪ್‌ ಅರ್ಹತಾ ಸುತ್ತಿನ “ಎ’ ಗುಂಪಿನಲ್ಲಿ 4 ಅಂಕ ಗಳಿಸಿರುವ ಭಾರತ ಸದ್ಯ 2ನೇ ಸ್ಥಾನದಲ್ಲಿದೆ. ತಂಡಕ್ಕೆ ಇನ್ನೂ 3 ಪಂದ್ಯ ಬಾಕಿಯಿದೆ. ಇಂದಿನ ಪಂದ್ಯ ಹೊರತು ಪಡಿಸಿ ಅಫಘಾನಿಸ್ಥಾನ ಮತ್ತು ಕತಾರ್‌ ವಿರುದ್ಧ ಆಡಬೇಕಿದೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿ 4 ಅಂಕ ಗಳಿಸಿದರೆ ವಿಶ್ವಕಪ್‌ ಅರ್ಹತಾ ಸುತ್ತಿನ 3ನೇ ಘಟ್ಟಕ್ಕೇರಬಹುದು. ಗುವಾಹಟಿಯಲ್ಲಿ ಭಾರತ ಕೊನೆಯ ಬಾರಿ ಆಡಿದ್ದು ಐದು ವರ್ಷಗಳ ಹಿಂದೆ. 2023ರ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ. ಈ ಪಂದ್ಯದಲ್ಲಿ 1-2 ಗೋಲುಗಳಿಂದ ಒಮಾನ್ ಎದುರು ಸೋಲು ಕಂಡಿತ್ತು. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ನಡೆದ ಹಲವು ಫುಟ್ಬಾಲ್​ ಟೂರ್ನಿಯಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿತ್ತು ಹೀಗಾಗಿ ತವರಿನ ಲಭವನ್ನು ಬಳಸಿಕೊಂಡು ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.

Exit mobile version