Site icon Vistara News

Sunil Chhetri: ಬಿಎಫ್​ಸಿ ತಂಡದ ಜತೆ ನಂಟು ಮುಂದುವರಿಸಿದ ಸುನಿಲ್​ ಚೆಟ್ರಿ

sunil chhetri

ಬೆಂಗಳೂರು: ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ(Sunil Chhetri) ಅವರು ಇಂಡಿಯನ್ ಸೂಪರ್ ಲೀಗ್ (Indian Super League) ತಂಡ ಬೆಂಗಳೂರು ಎಫ್ಸಿ(bengaluru fc) ಜತೆಗಿನ ಒಪ್ಪಂದವನ್ನು ಒಂದು ವರ್ಷಕ್ಕೆ ವಿಸ್ತರಿಸಿದ್ದಾರೆ. ಈ ಮೂಲಕ ಸದ್ಯ ಫುಟ್ಬಾಲ್​ನಿಂದ ನಿವೃತ್ತಿಯಾಗುವುದಿಲ್ಲ ಎನ್ನುವ ಸುಳಿವೊಂದನ್ನು ನೀಡಿದ್ದಾರೆ.

ಸಕ್ರಿಯ ಆಟಗಾರರಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಗೋಲು ಗಳಿಸಿದವರ ಪಟ್ಟಿಯಲ್ಲಿ ಪ್ರಸ್ತುತ ಮೂರನೇ ಸ್ಥಾನದಲ್ಲಿರುವ ಚೆಟ್ರಿ ಸಾರಥ್ಯದಲ್ಲಿ ಸ್ಯಾಫ್​ ಫುಟ್ಬಾಲ್​ ಚಾಂಪಿಯನ್​ಶಿಪ್​ನಲ್ಲಿ ಭಾರತ ತಂಡ ಚಾಂಪಿಯನ್​ ಆಗಿತ್ತು. ಈ ಮೂಲಕ ಭಾರತ 9ನೇ ಸ್ಯಾಫ್​ ಕಿರೀಟ ಗೆದ್ದ ಸಾಧನೆ ಮಾಡಿತ್ತು.

2013ರಲ್ಲಿ ಆರಂಭ ಐಎಸ್ಎಲ್ ಟೂರ್ನಿಯಿಂದಲೇ ಚೆಟ್ರಿ ಬೆಂಗಳೂರು ಎಫ್ಸಿ ತಂಡದ ನಾಯಕರಾಗಿದ್ದಾರೆ. ಅವರ ನಾಯಕತ್ವದಲ್ಲಿ ಕ್ಲಬ್‌ ಏಳು ಟ್ರೋಫಿಗಳನ್ನು ಗೆದ್ದಿದೆ. ಒಪ್ಪಂದವನ್ನು ಒಂದು ವರ್ಷಕ್ಕೆ ವಿಸ್ತರಿಸಿದ ಬಳಿಕ ಮಾತನಾಡಿದ ಅವರು “ಬೆಂಗಳೂರು ಎಫ್‌ಸಿಯ ಒಪ್ಪಂದಕ್ಕೆ ಹಲವು ಬಾರಿ ಸಹಿ ಮಾಡಿದ್ದೇನೆ. ಇದು ಯಾವಾಗಲೂ ವಿಶೇಷವಾಗಿದೆ” ಎಂದು ಹೇಳಿದರು.

ಇದನ್ನೂ ಓದಿ SAFF Championship: ಕುವೈತ್​ ವಿರುದ್ಧ ಫೈನಲ್​ ಆಡಲು ಸಜ್ಜಾದ ಭಾರತ; ಚೆಟ್ರಿ ಪಂದ್ಯದ ಪ್ರಮುಖ ಆಕರ್ಷಣೆ

“ಚೆಟ್ರಿ ಅವರು ಕ್ಲಬ್​ನೊಂದಿದೆ ಒಪ್ಪಂದವನ್ನು ಮುಂದುವರಿಸಿರಯವುದು ಸಂತಸದ ಸಂಗತಿ. ಸ್ಯಾಫ್​ ಕಪ್​ನಲ್ಲಿ ಶ್ರೇಷ್ಠ ಪ್ರದvರ್ಶನ ತೋರುವ ಮೂಲಕ ಭಾರತ ತಂಡಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರು ನಮ್ಮ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ” ಎಂದು ಬಿಎಫ್​ಸಿ ತಂಡದ ಮಾಲಿಕ ಪಾರ್ಥ್​ ಜಿಂದಾಲ್​ ತಿಳಿಸಿದ್ದಾರೆ.

10 ವರ್ಷಗಳ ಅವಧಿಯಲ್ಲಿ ಐ-ಲೀಗ್ (2014 ಮತ್ತು 2016) ಮತ್ತು ಫೆಡರೇಶನ್ ಕಪ್ (2015, 2017) ನಲ್ಲಿ ತಲಾ ಎರಡು ಪ್ರಶಸ್ತಿಗಳನ್ನು ದಗೆದ್ದಿದ್ದಾರೆ. ಸೂಪರ್ ಕಪ್ (2018), ISL (2019) ಮತ್ತು ಡ್ಯುರಾಂಡ್ ಕಪ್‌ನಲ್ಲಿ ತಲಾ ಒಂದು ಕಪ್​ ಗೆದ್ದದ್ದಾರೆ. ಈ ತಂಡಕ್ಕಾಗಿ 250ಕ್ಕೂ ಹೆಚ್ಚು ಪಂದ್ಯಗಳಾಡಿದ ಸಾಧನೆಯೂ ಚೆಟ್ರಿ ಅವರದ್ದಾಗಿದೆ.

ಇತ್ತೀಚೆಗಷ್ಟೇ ಚೆಟ್ರಿ ತಮ್ಮ ನಿವೃತ್ತಿಯ ಬಗೆಗಿನ ಉಹಾಪೋಹದ ಸುದ್ದಿಗೆ ತೆರೆ ಎಳೆದಿದ್ದರು. ತಂಡಕ್ಕಾಗಿ ನನಗೆ ಯಾವಾಗ ಆಡಲು ಸಾಧ್ಯವಿಲ್ಲವೋ ಅಂದು ನಾನು ನಿವೃತ್ತಿ ಘೋಷಿಸುವೆ, ಅಲ್ಲಿಯ ವರೆಗೆ ನಾನು ತಂಡದ ಭಾಗವಾಗಿರಲಿದ್ದೇನೆ ಎಂದಿದ್ದರು. ಈ ಮೂಕಲ ಅವರು ಇನ್ನು ಕೆಲ ವರ್ಷಗಳ ಕಾಲ ಭಾರತ ಪರ ಆಡುವ ಸುಳಿವನ್ನು ನೀಡಿದ್ದರು.

“ನನ್ನ ದೇಹದಲ್ಲಿ ಶಕ್ತಿ ಇರುವವರೆಗೂ ನಾನು ಭಾರತ ಆಡಲು ಮೈದಾನದಲ್ಲಿರುತ್ತೇನೆ. ಯಾವಗಾ ನನ್ನಿಂದ ಆಡಲು ಸಾಧ್ಯವಿಲ್ಲ ಎಂದು ನನಗೆ ತಿಳಿಯುತ್ತದೋ ಅಂದು ನಾನು ನಿವೃತ್ತಿ ಹೇಳಲಿದ್ದೇನೆ. ಎಂದಿಗೂ ದೀರ್ಘಾವಧಿಯ ಗುರಿಗಳನ್ನು ಹೊಂದಿಲ್ಲ. ಮುಂದಿನ ಪಂದ್ಯದ ಬಗ್ಗೆ ಯೋಚಿಸುತ್ತೇನೆ ಅಷ್ಟೇ” ಎನ್ನುವ ಮೂಲಕ ತಮ್ಮ ನಿವೃತ್ತಿ ವಿಚಾರವನ್ನು ತಳ್ಳಿ ಹಾಕಿದ್ದರು.

Exit mobile version