Site icon Vistara News

Sunil Chhetri: ನಿವೃತ್ತಿ ಬಗ್ಗೆ ಬಿಗ್​ ಅಪ್​ಡೇಟ್​ ನೀಡಿದ ಸುನೀಲ್​ ಚೆಟ್ರಿ

sunil chhetri

ಬೆಂಗಳೂರು: ಭಾರತ ಫುಟ್ಬಾಲ್​(football) ತಂಡದ ನಾಯಕ ಸುನೀಲ್​ ಚೆಟ್ರಿ(sunil chhetri) ಅವರು ತಮ್ಮ ನಿವೃತ್ತಿಯ ಬಗೆಗಿನ ಉಹಾಪೋಹದ ಸುದ್ದಿಗೆ ತೆರೆ ಎಳೆದಿದ್ದಾರೆ. ತಂಡಕ್ಕಾಗಿ ನನಗೆ ಯಾವಾಗ ಆಡಲು ಸಾಧ್ಯವಿಲ್ಲವೋ ಅಂದು ನಾನು ನಿವೃತ್ತಿ ಘೋಷಿಸುವೆ, ಅಲ್ಲಿಯ ವರೆಗೆ ನಾನು ತಂಡದ ಭಾಗವಾಗಿರಲಿದ್ದೇನೆ ಎಂದಿದ್ದಾರೆ. ಈ ಮೂಕಲ ಅವರು ಇನ್ನು ಕೆಲ ವರ್ಷಗಳ ಕಾಲ ಭಾರತ ಪರ ಆಡುವ ಸುಳಿವನ್ನು ನೀಡಿದ್ದಾರೆ.

ಸ್ಯಾಫ್​ ಫುಟ್ಬಾಲ್​ ಟೂರ್ನಿಯಲ್ಲಿ(saff cup championship) ಫೈನಲ್​ ಪ್ರವೇಶ ಪಡೆದಿರುವ ಭಾರತ ತಂಡ ಜುಲೈ 4ರಂದು ನಡೆಯುವ ಫೈನಲ್​ ಪಂದ್ಯದಲ್ಲಿ ಲೆಬನಾನ್(Lebanon vs India) ವಿರುದ್ಧ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ. ಫೈನಲ್​ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೇಟ್ರಿ, ನನ್ನ ದೇಹದಲ್ಲಿ ಶಕ್ತಿ ಇರುವವರೆಗೂ ನಾನು ಭಾರತ ಆಡಲು ಮೈದಾನದಲ್ಲಿರುತ್ತೇನೆ. ಯಾವಗಾ ನನ್ನಿಂದ ಆಡಲು ಸಾಧ್ಯವಿಲ್ಲ ಎಂದು ನನಗೆ ತಿಳಿಯುತ್ತದೋ ಅಂದು ನಾನು ನಿವೃತ್ತಿ ಹೇಳಲಿದ್ದೇನೆ. ಎಂದಿಗೂ ದೀರ್ಘಾವಧಿಯ ಗುರಿಗಳನ್ನು ಹೊಂದಿಲ್ಲ. ಮುಂದಿನ ಪಂದ್ಯದ ಬಗ್ಗೆ ಯೋಚಿಸುತ್ತೇನೆ ಅಷ್ಟೇ, ಎನ್ನುವ ಮೂಲಕ ತಮ್ಮ ನಿವೃತ್ತಿ ವಿಚಾರವನ್ನು ತಳ್ಳಿ ಹಾಕಿದ್ದಾರೆ.

“ಫೈನಲ್​ ಪಂದ್ಯದಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ತೋರುವ ಆತ್ಮವಿಶ್ವಾಸದಲ್ಲಿದೆ. ಏಕೆಂದರೆ ಇಂಟರ್‌ಕಾಂಟಿನೆಂಟಲ್ ಕಪ್‌ನ ಫೈನಲ್‌ನಲ್ಲಿ ಲೆಬನಾನ್ ವಿರುದ್ಧ ನಾನು 2-0 ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದೆವು, ಅಲ್ಲಿ ತೋರಿದ ಪ್ರದರ್ಶನವನ್ನೇ ಈ ಪಂದ್ಯದಲ್ಲಿಯೂ ತೋರ್ಪಡಿಸುವ ವಿಶ್ವಾಸ ನಮ್ಮಲ್ಲಿದೆ. ಆದರೆ ಈ ಸವಾಲನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವಂತಿಲ್ಲ” ಎಂದರು.​

ಇದನ್ನೂ ಓದಿ Viral Video: ತಂದೆಯಾಗುತ್ತಿರುವ ವಿಚಾರವನ್ನು ವಿಶೇಷ ರೀತಿಯಲ್ಲಿ ಸಂಭ್ರಮಿಸಿದ ಸುನೀಲ್​ ಚೆಟ್ರಿ; ಮಜವಾಗಿದೆ ವಿಡಿಯೊ

ಅಂತಾರಾಷ್ಟ್ರೀಯ ಫುಟ್ಬಾಲ್​ನಲ್ಲಿ ಸದ್ಯ 91 ಗೋಲು ಬಾರಿಸಿಸುವ ಮೂಲಕ ಈ ಸಾಧನೆ ಮಾಡಿದ ಏಷ್ಯಾದ ಎರಡನೇ ಫುಟ್ಬಾಲ್​ ಆಟಗಾರ ಎನಿಸಿಕೊಂಡಿರುವ ಚೆಟ್ರಿ ಫೈನಲ್​ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರುವತ್ತ ಚಿತ್ತ ನೆಟ್ಟಿದ್ದಾರೆ. ಕಳೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್​ ಬಳಿಕ ನೇಪಾಳ ವಿರುದ್ಧವೂ ಚೇಟ್ರಿ ಗೋಲ್​ ಬಾರಿಸಿ ಮಿಂಚಿದ್ದರು.

8 ಬಾರಿ ಚಾಂಪಿಯನ್​ ಪಟ್ಟ

ಸ್ಯಾಫ್‌ ಕಪ್‌ ಟೂರ್ನಿಯಲ್ಲಿ ಭಾರತ ಎಂಟು ಸಲ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನಾಲ್ಕು ಸಲ ರನ್ನರ್ಸ್‌ ಅಪ್‌ ಆಗಿದೆ. 2003 ರಲ್ಲಿ ಢಾಕಾದಲ್ಲಿ ನಡೆದಿದ್ದ ಟೂರ್ನಿಯನ್ನು ಹೊರತುಪಡಿಸಿ ಉಳಿದ ಎಲ್ಲ ಕೂಟಗಳಲ್ಲಿಯೂ ಭಾರತ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದೆ. ಈ ಬಾರಿಯೂ ಭಾರತ ತಂಡ ಕೂಟದ ನೆಚ್ಚಿನ ತಂಡವಾಗಿ ಕಾಣಿಸಿಕೊಂಡಿದೆ.

Exit mobile version