ಬೆಂಗಳೂರು: ಭಾರತ ಫುಟ್ಬಾಲ್(indian football) ತಂಡದ ನಾಯಕ ಸುನೀಲ್ ಚೆಟ್ರಿ(Sunil Chhetri) ಅವರು ಗಂಡು ಮಗುವಿನ ತಂದೆಯಾಗಿದ್ದಾರೆ. ಅವರ ಪತ್ನಿ ಸೋನಮ್(Sonam Bhattacharya) ಭಟ್ಟಾಚಾರ್ಯ ಅವರು ಆಗಸ್ಟ್ 31, ಗುರುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದೆ ಎಂದು ಆಸ್ಪತ್ರೆಯ ಮೂಲಗಳು ಮಾಹಿಇತಿ ನೀಡಿದೆ.
ಡೆಂಗ್ಯೂ ರೋಗ ಕಂಡು ಬಂದಿತ್ತು
ಸೋನಮ್ ಭಟ್ಟಾಚಾರ್ಯ ಅವರ ಗರ್ಭಾವಸ್ಥೆಯಲ್ಲಿ ಡೆಂಗ್ಯೂ ರೋಗ ಲಕ್ಷಣಗಳು ಕಂಡುಬಂದಿತ್ತು. ಹೀಗಾಗಿ ಕೆಲ ಕಳವಳ ಇತ್ತು. ಆದರೆ ಈಗ ಸೋನಮ್ ಮತ್ತು ನವಜಾತ ಶಿಶು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಸೋಮನ್ ಕುಟುಂಬ ಮತ್ತು ಆಸ್ಪತ್ರೆ ಮೂಲಗಳು ಖಚಿತಪಡಿಸಿವೆ.
ಜೂನ್‌ನಲ್ಲಿ ನಡೆದ ಇಂಟರ್‌ಕಾಂಟಿನೆಂಟಲ್ ಕಪ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಸುನೀಲ್ ಚೆಟ್ರಿ ಅವರು ತಮ್ಮ ಪತ್ನಿ ಗರ್ಭಿಣಿಯಾಗಿರುವುದು. ಮತ್ತು ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದರು. ವನುವಾಟು ತಂಡದ ವಿರುದ್ಧದ ಪಂದ್ಯ ಇದಾಗಿತ್ತು. ಈ ಪಂದ್ಯದಲ್ಲಿ ಗೋಲು ಬಾರಿಸಿದ ಬಳಿಕ ಚೆಟ್ರಿ ಅವರು ಚೆಂಡನ್ನು ತಮ್ಮ ಜೆರ್ಸಿಯ ಒಳಗಡೆ ಹಾಕಿ ಹೊಟ್ಟೆ ಬಂದಂತೆ ಪತ್ನಿಗೆ ಫ್ಲೈಯಿಂಗ್ ಕಿಸ್ ನೀಡಿ ಸಂಭ್ರಮಿಸಿದರು.
ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತ್ತಿದ್ದ ಪತ್ನಿ ಸೋನಮ್(Sonam Bhattacharya) ಅವರು ತಮ್ಮ ಗಂಡನ ಈ ಸಂಭ್ರಮವನ್ನು ಕಂಡು ಚಪ್ಪಾಳೆ ತಟ್ಟುತ್ತಾ ನಗು ಬೀರಿದ್ದರು. ಈ ದೃಶ್ಯ ಕ್ರೀಡಾಂಗಣದ ಬೃಹತ್ ಪರದೆಯಲ್ಲಿ ಮೂಡಿಬಂದಿತ್ತು. ಪಂದ್ಯದ ಬಳಿಕ ಮಾತನಾಡಿದ್ದ ಚೇಟ್ರಿ, ‘ನನ್ನ ಹೆಂಡತಿ ಮತ್ತು ನಾನು ಮಗುವಿನ ನಿರೀಕ್ಷೆಯಲ್ಲಿದ್ದೇವೆ. ನಮ್ಮ ಭವಿಷ್ಯದ ಮಗುವನ್ನು ಈ ರೀತಿ ಘೋಷಿಸಬೇಕೆಂದು ಅವಳು ಬಯಸಿದ್ದಳು. ಅದೃಷ್ಟಕ್ಕೆ ನಾನು ಈ ಪಂದ್ಯದಲ್ಲಿ ಗೋಲು ಬಾರಿಸಿ ಅವಳ ಬಯಕೆಯನ್ನು ಈಡೇರಿಸಿದ್ದೆ” ಎಂದು ಹೇಳಿದ್ದರು.
ಇದನ್ನೂ ಓದಿ Sunil Chhetri: ಬಿಎಫ್ಸಿ ತಂಡದ ಜತೆ ನಂಟು ಮುಂದುವರಿಸಿದ ಸುನಿಲ್ ಚೆಟ್ರಿ
ಕಿಂಗ್ಸ್ ಟ್ರೋಫಿಯಿಂದ ಹೊರಗುಳಿದ ಚೆಟ್ರಿ
ಮಗುವಿನ ನಿರೀಕ್ಷೆಯ ಕಾರಣದಿಂದಲೇ ಸುನೀಲ್ ಚೆಟ್ರಿ ಅವರು ಮುಂಬರುವ ಕಿಂಗ್ಸ್ ಟ್ರೋಫಿ ಫುಟ್ಬಾಲ್ ಕೂಟದಿಂದ ಹಿಂದೆ ಸರಿದಿದ್ದರು. ಆದರೆ ಏಷ್ಯನ್ ಗೇಮ್ಸ್‌ಗೆ ಲಭ್ಯರಿರುದಾಗಿ ತಂಡದ ಕೋಚ್ ಐಗರ್ ಸ್ಟಿಮ್ಯಾಕ್ ತಿಳಿಸಿದ್ದರು. 4 ರಾಷ್ಟ್ರಗಳ ನಡುವಿನ ನಾಕೌಟ್ ಮಾದರಿಯ ಈ ಪಂದ್ಯಾವಳಿ ಸೆಪ್ಟೆಂಬರ್ 7ರಿಂದ 10ರ ತನಕ ಥಾಯ್ಲೆಂಡ್‌ನ ಚಿಯಾಂಗ್ ಮೈನಲ್ಲಿ ನಡೆಯಲಿದೆ.
ಭಾರತ ತಂಡ ಇರಾಕ್ ವಿರುದ್ಧ ಸೆಪ್ಟೆಂಬರ್ 7ರ ಮೊದಲ ಸೆಮಿಫೈನಲ್‌ನಲ್ಲಿ ಸೆಣಸಲಿವೆ. ಸೆ. 10ರಂದು ಫೈನಲ್ ಹಣಾಹಣಿ ಏರ್ಪಡಲಿದೆ. 2019ರಲ್ಲಿ ಭಾರತ ಕಿಂಗ್ಸ್ ಟ್ರೋಫಿ ಕೂಟದಲ್ಲಿ ಕಂಚಿನ ಪದಕ ಗೆದ್ದಿತ್ತು.