ಲಖನೌ: ಅಕ್ಟೋಬರ್ 16 ರಂದು ಲಕ್ನೋದಲ್ಲಿ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ (ICC World Cup 2023) ಆಸ್ಟ್ರೇಲಿಯಾ ಅಂತಿಮವಾಗಿ ಶ್ರೀಲಂಕಾ ವಿರುದ್ಧ ಐದು ವಿಕೆಟ್ಗಳ ಜಯದೊಂದಿಗೆ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು, ಜೋಶ್ ಇಂಗ್ಲಿಸ್ ಮತ್ತು ಮಿಚೆಲ್ ಮಾರ್ಷ್ ಅವರ ಅದ್ಭುತ ಅರ್ಧಶತಕಗಳು ಮತ್ತು ಆಡಮ್ ಜಂಪಾ ಅವರ ನಾಲ್ಕು ವಿಕೆಟ್ ಸಾಧನೆಯಿಂದಾಗಿ ಐದು ಬಾರಿಯ ಚಾಂಪಿಯನ್ ತಂಡ ಶುಭಾರಂಭ ಮಾಡಿತು. ಅಲ್ಲದೆ, ಸಿಕ್ಕಾಪಟ್ಟೆ ಬರುತ್ತಿದ್ದ ಟೀಕೆಗಳಿಂದ ತಪ್ಪಿಸಿಕೊಂಡಿತು.
ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಆಸ್ಟ್ರೇಲಿಯಾದ ಹೆಚ್ಚು ಅಗತ್ಯವಾದ ಗೆಲುವಿನ ನಂತರ, ಮಿಚೆಲ್ ಮಾರ್ಷ್ ಮತ್ತು ದಿಗ್ಗಜ ಕ್ರಿಕೆಟಿಗ ಸುನೀ ಲ್ ಗವಾಸ್ಕರ್ ನಡುವಿನ ತಮಾಷೆಯ ಸಂಭಾಷಣೆ ವೈರಲ್ ಆಗಿದೆ. ಅವರಿಬ್ಬರು ಬ್ಯಾಟಿಂಗ್ ಶೈಲಿಯನ್ನು ಮಾತನಾಡುವ ನಡುವೆ, ನಿನಗೆ ನಿನ್ನಪ್ಪ ಬ್ಯಾಟ್ ಕಲಿಸಲಿಲ್ವೇ ಎಂದು ಗವಾಸ್ಕರ್ ಮಾರ್ಷ್ಗೆ ಕೇಳುತ್ತಾರೆ. ಈ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಮಿಚೆಲ್ ಮಾರ್ಷ್ ಅವರು ಆಸ್ಟ್ರೇಲಿಯಾ ತಂಡದ ಮಾಜಿ ವಿಕೆಟ್ಕೀಪರ್ ಜೆಫ್ ಮಾರ್ಷ್ ಅವರ ಪುತ್ರ. ಅವರು ರಕ್ಷಣಾತ್ಮಕ ಆಟ ಆಡುವ ಆಟಗಾರ. ಆದರೆ ಮಾರ್ಷ್ ಸ್ಫೋಟಕ ಬ್ಯಾಟರ್. ಈ ಬಗ್ಗೆ ಬಗ್ಗೆ ಗವಾಸ್ಕರ್ ಪ್ರಶ್ನಿಸಿದ್ದು, ನಿನ್ನ ಅಪ್ಪ ರಕ್ಷಣಾತ್ಮಾಕ ಆಟ ಆಡಲು ಕಲಿಸಿಲ್ವಾ ಎಂದು ಪ್ರಶ್ನಿಸಿದ್ದಾರೆ.
117 ಏಕದಿನ ಪಂದ್ಯಗಳಲ್ಲಿ ಜೆಫ್ ಅವರ ಸ್ಟ್ರೈಕ್ ರೇಟ್ 55.33 ಆಗಿದ್ದರೆ, ಮಿಚ್ ಅವರ ಸ್ಟ್ರೈಕ್ ರೇಟ್ 93.85 ಆಗಿದೆ. ಗವಾಸ್ಕರ್ ತಂದೆ-ಮಗನ ಜೋಡಿಯ ವಿಭಿನ್ನ ಬ್ಯಾಟಿಂಗ್ ವಿಧಾನವನ್ನು ತಮಾಷೆಯಾಗಿ ಪ್ರಶ್ನಿಸಿದ್ದಾರೆ. ಆದರೆ, ಆಸ್ಟ್ರೇಲಿಯಾದ ಬ್ಯಾಟರ್ ಈ ಪ್ರಶ್ನೆಗೆ ಅತ್ಯಂತ ರಕ್ಷಣಾತ್ಮಕವಾಗಿಯೇ ಉತ್ತರ ಕೊಟ್ಟಿದ್ದಾರೆ.
ಗವಾಸ್ಕರ್ ಪ್ರಶ್ನೆ ಹೀಗಿತ್ತು
ನಿಮ್ಮ ತಂದೆ ನಿಮಗೆ ಈ ರೀತಿ ಆಡಲು ಕಲಿಸಲಿಲ್ಲವೇ? (ರಕ್ಷಣಾತ್ಮಕ ಶಾಟ್ ನೊಂದಿಗೆ) ಏಕೆಂದರೆ ನೀವು ಮಾಡುತ್ತಿರುವುದು ಬರೇ ಹೊಡೆ ಬಡಿಯ ರನ್ಗಳನ್ನು.
ಇದಕ್ಕೆ ಪ್ರತಿಕ್ರಿಯಿಸಿದ ಮಾರ್ಷ್, “ನಾನು ಅವರ ಕಳಪೆ ಸ್ಟ್ರೈಕ್ ರೇಟ್ ಅನ್ನು ಸರಿದೂಗಿಸುತ್ತಿದ್ದೇನೆ. ಹೀಗಾಗಿ ನನ್ನ ಸಹ ಆಟಗಾರರು ನನ್ನನ್ನು ಉಸೇನ್ ಬೋಲ್ಟ್ ಎಂದು ಕರೆಯುತ್ತಿದ್ದಾರೆ.
ಮುಂದುವರಿದ ಅವರು “ಉತ್ತಮ ಫಾರ್ಮ್ ಕಂಡುಕೊಂಡು ಬ್ಯಾಟಿಂಗ್ ಮಾಡುವುದು ಕೂಡ ಸಂತಸದ ವಿಷಯವಾಗಿದೆ. ಅದು ನನಗೆ ಒಳ್ಳೆಯ ದಿನಗಳಾಗಿತ್ತು. ನಿಧಾನಗತಿಯ ಆರಂಭದ ನಂತರ ನಾವು ಸ್ವಲ್ಪ ಒತ್ತಡದಲ್ಲಿ ಈ ಆಟಕ್ಕೆ ಬಂದೆವು. ನಮ್ಮದು ಸಂಪೂರ್ಣ ಪ್ರದರ್ಶನವಾಗಿತ್ತು ಎಂದು ಅವರು ಹೇಳಿದ್ದಾರೆ.
ಈ ಸುದ್ದಿಗಳನ್ನೂ ಓದಿ
ICC World Cup 2023 : ಭಾರತ ವಿರುದ್ಧ ಸೋತು ಕಂಗೆಟ್ಟ ಪಾಕ್ ತಂಡಕ್ಕೆ ಜ್ವರದ ಬಾಧೆ!
Rohit Sharma : ಸಿಕ್ಸರ್ಗಳನ್ನು ಬಾರಿಸಿ ನೂತನ ದಾಖಲೆ ಬರೆದ ಹಿಟ್ಮ್ಯಾನ್ ರೋಹಿತ್
Yuvaraj Singh : ಅತಿ ವೇಗದ ಅರ್ಧ ಶತಕ; ಯುವರಾಜ್ ದಾಖಲೆ ಮುರಿದ ಶರ್ಮಾ
“ನಾವು ಉತ್ತಮ ಆರಂಭವನ್ನು ಪಡೆಯಲು ಬಯಸುವ ಹೆಚ್ಚಿನ ನಿರೀಕ್ಷೆಯೊಂದಿಗೆ ಇಲ್ಲಿಗೆ ಬಂದಿದ್ದೇವೆ. ಸತ್ಯವೆಂದರೆ, ನಾವು ಕೆಲವು ಉತ್ತಮ ತಂಡಗಳ ವಿರುದ್ಧ ಆಡಿದ್ದೇವೆ. ಈ ದೊಡ್ಡ ಪಂದ್ಯಾವಳಿಗಳಲ್ಲಿ, ಸೋಲುಗಳನ್ನು ಭರಿಸಲು ಸಾಧ್ಯವಿಲ್ಲ. ಆದರೆ ಈ ಗೆಲವು ಬಹುಶಃ ಇಂದು ನಮಗೆ ಸರಿಯಾದ ದಿಕ್ಕಿನಲ್ಲಿ ಒಂದು ಮೆಟ್ಟಿಲು ಎಂದು ಆಶಿಸುತ್ತೇವೆ. ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಗೆಲುವು
ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಹಾಲಿ ವಿಶ್ವ ಕಪ್ನಲ್ಲಿ (ICC World Cup 2023) ತನ್ನ ಮೊದಲ ವಿಜಯವನ್ನು ಕಂಡಿದೆ. ಸೋಮವಾರ (ಅಕ್ಟೋಬರ್ 16) ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 5 ವಿಕೆಟ್ಗಳ ಸುಲಭ ಜಯ ಗಳಿಸಿದ ಪ್ಯಾಟ್ ಕಮಿನ್ಸ್ ಬಳಗ ಗೆಲುವಿನ ನಗೆ ಬೀರಿದೆ. ಕಾಂಗರೂ ಪಡೆ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ವಿರುದ್ಧ 6 ವಿಕೆಟ್ಗಳ ಸೋಲಿಗೆ ಒಳಗಾಗಿದ್ದರೆ, ನಂತರದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 134 ರನ್ಗಳ ಹೀನಾಯ ಸೋಲಿಗೆ ಒಳಗಾಗಿತ್ತು. ಹೀಗಾಗಿ ಅಂಕಪಟ್ಟಿಯಲ್ಲಿ ಕೊನೇ ಸ್ಥಾನ ಪಡೆಯುವ ಮೂಲಕ ವಿಮರ್ಶೆಗೆ ಒಳಪಟ್ಟಿತ್ತು. ಇದೀಗ ಮೈ ಚಳಿ ಬಿಟ್ಟು ಆಡುವ ಮೂಲಕ ಗೆಲುವು ತನ್ನದಾಗಿಸಿಕೊಂಡಿದೆ.
ಇಲ್ಲಿನ ಭಾರತ ರತ್ನ ಶ್ರೀ ಅಟಲ್ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ 43.3 ಓವರ್ಗಳಲ್ಲಿ 209 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 35.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 215 ರನ್ ಬಾರಿಸಿ ಗೆಲುವು ಕಂಡಿತು.