ಮುಂಬಯಿ: ಮರು ನಿಗದಿಯಾಗಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಇಂಗ್ಲೆಂಡ್ ಜಯಭೇರಿ ಬಾರಿಸಿದೆ. ಹೀಗಾಗಿ ಸರಣಿ ೨-೨ ಸಮಬಲದ ಸಾಧನೆಯೊಂದಿಗೆ ಮುಕ್ತಾಯಗೊಂಡಿದೆ. ಭಾರತದ ಪಾಲಿಗೆ ಇದು ಹಿನ್ನಡೆ. ಸೋಲಿನ ಕಾರಣಗಳ ಬಗ್ಗೆ ವಿಶ್ಲೇಷಣೆ ಮಾಡಿರುವ ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್, “Edgebasotn ಪಿಚ್ ಯಾಕೊ ಸರಿಯಾಗಿರಲಿಲ್ಲʼʼ ಎಂದು ಹೇಳಿದ್ದಾರೆ.
ಎಜ್‌ಬಾಸ್ಟನ್ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ ೪೧೬ ರನ್ ಬಾರಿಸಿ ಎದುರಾಳಿ ತಂಡವನ್ನು ೨೮೪ ರನ್‌ಗಳಿಗೆ ಕಟ್ಟಿಹಾಕಿತ್ತು. ನಂತರ ೨೪೫ ರನ್ ಬಾರಿಸಿ ೩೭೮ ರನ್‌ಗಳ ಬೃಹತ್ ಗುರಿಯನ್ನೊಡ್ಡಿತ್ತು. ಆದಾಗ್ಯೂ ಇಂಗ್ಲೆಂಡ್ ತಂಡ ಮೂರು ವಿಕೆಟ್‌ಗಳ ನಷ್ಟಕ್ಕೆ ಗುರಿ ಮುಟ್ಟಿ ದಾಖಲೆ ಮಾಡಿತ್ತು. ಜೋ ರೂಟ್ ಅಜೇಯ ೧೪೨ ರನ್ ಬಾರಿಸಿದ್ದರೆ, ಜಾನಿ ಬೈರ್‌ಸ್ಟೋವ್ ಔಟಾಗದೇ ೧೧೪ ರನ್ ಬಾರಿಸಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಇನಿಂಗ್ಸ್‌ನಲ್ಲಿ ಇಷ್ಟೊಂದು ದೊಡ್ಡ ಗುರಿಯನ್ನು ಮೀರುವುದು ಸುಲಭವಲ್ಲ. ಹೀಗಾಗಿ ಗವಾಸ್ಕರ್, ಪಿಚ್ ಬ್ಯಾಟಿಂಗ್‌ಗೆ ಪೂರಕವಾಗಿತ್ತು ಹಾಗೂ ಆ ಸಂಗತಿಯೇ ಇಂಗ್ಲೆಂಡ್ ಗೆಲುವಿಗೆ ಕಾರಣವಾಯಿತು ಎಂದು ಹೇಳಿದ್ದಾರೆ.
ಸಪಾಟು ಪಿಚ್‌ನ ಮಹಿಮೆ
ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ ೨೪೮ ರನ್‌ಗಳಿಗೆ ಆಲ್‌ಔಟ್ ಮಾಡಿರುವ ಭಾರತ ತಂಡದ ಬೌಲರ್‌ಗಳಿಗೆ ಎರಡನೇ ಇನಿಂಗ್ಸ್‌ನಲ್ಲಿ ಯಾಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ ಎಂಬ ವಾದವನ್ನು ಮುಂದಿಟ್ಟುಕೊಂಡು ವಿಮರ್ಶೆ ಮಾಡಿರುವ ಗವಾಸ್ಕರ್, “ಎಜ್‌ಬಾಸ್ಟನ್ ಪಿಚ್ ಮೂರು ಮತ್ತು ನಾಲ್ಕನೇ ದಿನ ಸಪಾಟಾಗಿತ್ತು. ಇದು ವೇಗದ ಬೌಲಿಂಗ್‌ಗೆ ನೆರವು ನೀಡುತ್ತಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಸ್ಪಿನ್ನರ್‌ಗಳಿಗೆ ಅನುಕೂಲ ಮಾಡಿಕೊಡುತ್ತಿತ್ತು. ಹೀಗಾಗಿ ರೂಟ್ ಹಾಗೂ ಜಾನಿಯ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ,ʼʼ ಎಂದು ಅವರು ಹೇಳಿದ್ದಾರೆ.
“ಬರ್ಮಿಂಗ್‌ಹ್ಯಾಮ್ ಪಿಚ್ ಆರಂಭದಲ್ಲಿ ಬ್ಯಾಟಿಂಗ್‌ಗೆ ನೆರವಾಗುತ್ತದೆ ಎಂಬುದು ಗೊತ್ತಿರುವ ವಿಚಾರ. ಅದರೆ, ದಿನ ಕಳೆದಂತೆ ಅದು ಹೊಸ ಚೆಂಡಿನ ಪ್ರಯೋಗಕ್ಕೆ ಅನುಕೂಲ ಮಾಡಿಕೊಡುತ್ತದೆ. ಆದರೆ ಭಾರತ ವಿರುದ್ಧದ ಪಂದ್ಯದಲ್ಲಿ ಆ ರೀತಿ ಆಗಲಿಲ್ಲ. ವಿರಾಟ್ ಕೊಹ್ಲಿ ಔಟಾಗಿರುವುದು ಲೆಂತ್ ಎಸೆತದ ಬೌನ್ಸರ್‌ಗೆ. ಆದರೆ, ಭಾರತ ತಂಡ ಬೌಲಿಂಗ್ ಮಾಡುವಾಗ ಇಂಥ ಎಸೆತಗಳು ಬೀಳುತ್ತಿರಲಿಲ್ಲ. ಆ ವೇಳೆ ಪಿಚ್ ಸಪಾಟಾಗಿತ್ತು. ಇದು ಇಂಗ್ಲೆಂಡ್ ತಂಡ ಗೆಲುವಿಗೆ ಅನುಕೂಲ ಮಾಡಿಕೊಟ್ಟಿತು,ʼʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: Englad Tour: ಏಕದಿನ ಮತ್ತು ಟಿ20 ಸರಣಿಗೆ ಭಾರತ ತಂಡ ಪ್ರಕಟ, ನಾಯಕ ಯಾರು?