Site icon Vistara News

Sunil Narine: ಅತ್ಯಧಿಕ ಸಿಕ್ಸರ್​ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಸುನೀಲ್​ ನರೈನ್

Sunil Narine

ಲಕ್ನೋ: ಈ ಬಾರಿಯ ಐಪಿಎಲ್​ನಲ್ಲಿ(IPL 2024) ಸಿಡಿಲಬ್ಬರದ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿರುವ ಕೆಕೆಆರ್(Kolkata Knight Riders)​ ತಂಡದ ಎಡಗೈ ಆಟಗಾರ ಸುನೀಲ್​ ನರೈನ್(Sunil Narine)​ ಲಕ್ನೋ(Lucknow Super Giants) ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 7 ಸಿಕ್ಸರ್​ ಬಾರಿಸುವ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಭಾನುವಾರ ರಾತ್ರಿ ನಡೆದ ಐಪಿಎಲ್​ನ 54ನೇ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್​ ನಡೆಸಿದ ನರೈನ್​ ಕೇವಲ 39 ಎಸೆತಗಳಿಂದ 6 ಬೌಂಡರಿ ಮತ್ತು 7 ಸೊಗಸಾದ ಸಿಕ್ಸರ್ ಸಿಡಿಸಿ 81 ರನ್​ ಚಚ್ಚಿದರು. ಈ 7 ಸಿಕ್ಸರ್​ ಮೂಲಕ ಈ ಬಾರಿಯ ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. ಇದಕ್ಕೂ ಮುನ್ನ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಹೆನ್ರಿಚ್​ ಕ್ಲಾಸೆನ್​(31 ಸಿಕ್ಸರ್​) ಅಗ್ರಸ್ಥಾನದಲ್ಲಿದ್ದರು. ಇದೀಗ ನರೈನ್​ 32 ಸಿಕ್ಸರ್​ಗಳೊಂದಿಗೆ ಕ್ಲಾಸೆನ್​ ಅವರನ್ನು ಹಿಂದಿಕ್ಕಿದ್ದಾರೆ.

​ಇಂದು ನಡೆಯುವ ಪಂದ್ಯದಲ್ಲಿ ಹೈದರಾಬಾದ್​ ತಂಡ ಮುಂಬೈ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಕ್ಲಾಸೆನ್​ 2 ಸಿಕ್ಸರ್​ ಸಿಡಿಸಿದರೆ ಮತ್ತೆ ತಮ್ಮ ಅಗ್ರಸ್ಥಾನವನ್ನು ವಶಪಡಿಸಿಕೊಳ್ಳಲಿದ್ದಾರೆ. ಸದ್ಯ ನರೈನ್​ ಮತ್ತು ಕ್ಲಾಸೆನ್​ ಮಧ್ಯೆ ಸಿಕ್ಸರ್​ ಪೈಪೋಟಿ ಏರ್ಪಟ್ಟಿದೆ. 28 ಸಿಕ್ಸರ್​ ಬಾರಿಸಿರುವ ಅಭಿಷೇಕ್​ ಶರ್ಮ ಮೂರನೇ ಸ್ಥಾನದಲ್ಲಿದ್ದಾರೆ. ಶಿವಂ ದುಬೆ(26 ಸಿಕ್ಸರ್​) ನಾಲ್ಕನೇ ಸ್ಥಾನಿಯಾಗಿದ್ದಾರೆ.

ಇದನ್ನೂ ಓದಿ IPL 2024 Points Table: ರಾಜಸ್ಥಾನ್​ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕೆಕೆಆರ್​; ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

ಅಗ್ರಸ್ಥಾನಕ್ಕೆ ಜಿಗಿದ ಕೆಕೆಆರ್​


ಇದೇ ಮೊದಲ ಬಾರಿಗೆ ಶ್ರೀ ಭಾರತ ರತ್ನ ಅಟಲ್​ ಬಿಹಾರಿ ವಾಜಪೇಯಿ ಏಕನಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ದಾಖಲಾದ ಬೃಹತ್​ ಮೊತ್ತದ ಮೇಲಾಟದಲ್ಲಿ ಕೆಕೆಆರ್​ ತಂಡ ಲಕ್ನೋ ವಿರುದ್ಧ 98 ರನ್​ಗಳ ಬೃಹತ್​ ಜಯ ಸಾಧಿಸಿತು. ಜತೆಗೆ ಅಂಕಪಟ್ಟಿಯಲ್ಲಿ ರಾಜಸ್ಥಾನ್​ ರಾಯಲ್ಸ್​ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿತು. ಈ ಪಂದ್ಯದಲ್ಲಿ ಟಾಸ್​ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಅರ್​ ಬಳಗ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 235 ರನ್​ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಪ್ರತಿಯಾಗಿ ಆಡಿದ ತವರಿನ ತಂಡ 16.1 ಓವರ್​ಗಳಲ್ಲಿ 137 ರನ್​ಗಳಿಗೆ ಆಲ್​ಔಟ್​ ಆಗಿ ಹೀನಾಯ ಸೋಲಿಗೆ ತುತ್ತಾಯಿತು.

Exit mobile version