Site icon Vistara News

Sunny Leone: ಟೀಮ್​ ಇಂಡಿಯಾದ ಈ ಕ್ರಿಕೆಟಿಗ ಸನ್ನಿ ಲಿಯೋನ್​ಗೆ ಫೇವರಿಟ್​

Sunny Leone

ಬೆಂಗಳೂರು: ಬಾಲಿವುಡ್​ನ ಮೋಹಕ ತಾರೆ ಸನ್ನಿ ಲಿಯೋನ್(Sunny Leone) ಅವರಿಗೆ ಕ್ರಿಕೆಟ್​ ಮತ್ತು ಫುಟ್ಬಾಲ್​ ಆಟ ಎಂದರೆ ಅಚ್ಚುಮೆಚ್ಚು. ಅದರಲ್ಲೂ ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಎಂದರೆ ಫೇವರಿಟ್​​. ಈ ವಿಷಯವನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಕ್ರಿಕೆಟ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತಾನು ಮಹೇಂದ್ರ ಸಿಂಗ್​ ಧೋನಿ ಅವರ ಅಪ್ಪಟ ಅಭಿಮಾನಿ ಅವರ ಬ್ಯಾಟಿಂಗ್​ ಶೈಲಿಯನ್ನು ನೋಡುವುದೇ ಕಣ್ಣಿಗೆ ಹಿತ ಎಂದು ಹೇಳಿದ್ದಾರೆ. ಜತೆಗೆ ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್​ ತಂಡವೂ ಅಚ್ಚುಮೆಚ್ಚು ಎಂದಿದ್ದಾರೆ.

ಫುಟ್ವಾಲ್​ ಬಗೆಗಿನ ವಿಚಾರದಲ್ಲಿ ಮಾತನಾಡಿದ ಸನ್ನಿ, ಫೋರ್ಚುಗಲ್​ ತಂಡದ ಸ್ಟಾರ್​ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ಅವರು ನೆಚ್ಚಿನ ಆಟಗಾರ, ಭಾರತದಲ್ಲಿ ಸುನೀಲ್​ ಚೆಟ್ರಿ(Sunil Chhetri) ಇಷ್ಟ ಎಂದು ಹೇಳಿದ್ದಾರೆ. ಈ ಮೂಲಕ ಸನ್ನಿ ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದಿದ್ದಾರೆ. ಹಲವು ಬಾರಿ ಅವರು ಭಾರತ ದೇಶ ಅತ್ಯಂತ್ಯ ಗೌರವ ನೀಡುವ ದೇಶವಾಗಿದೆ ಎಂದು ಹೇಳುವ ಮೂಲಕ ಭಾರತದ ಬೆಂಬಲಕ್ಕೂ ನಿಂತಿದ್ದರು.

ಇದನ್ನೂ ಓದಿ IPL 2023 : ಮಹೇಂದ್ರ ಸಿಂಗ್​ ಧೋನಿಗೆ ವಿಶೇಷ ಕೊಡುಗೆ ನೀಡಿದ ಅಭಿಮಾನಿ, ಏನದು?

ಸದ್ಯ ಭಾರತೀಯ ಸಿನಿಮಾಗಳಲ್ಲಿ ಮಿಂಚುತ್ತಿರುವ ಅವರು ಕೇವಲ ಹಿಂದಿ ಮಾತ್ರವಲ್ಲದೇ ಕನ್ನಡದ ಕೆಲ ಚಿತ್ರಗಳ ಹಾಡುಗಳಲ್ಲಿ ಹೆಜ್ಜೆಹಾಕಿದ್ದಾರೆ. ಅವರು ಕೊನೆಯ ಬಾರಿಗೆ ಅನುರಾಗ್ ಕಷ್ಯಪ್ ಅವರ ಕೆನಡಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಐಐಎಫ್​ಎನಲ್ಲಿ ಪ್ರೀಮಿಯರ್ ಶೋ ಆಗಿತ್ತು. ಜತೆಗೆ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

Exit mobile version