ಪುಣೆ : ರವೀಂದ್ರ ಜಡೇಜಾ ಭಾರತ ತಂಡದ ಅತ್ಯುತ್ತಮ ಫೀಲ್ಡರ್ಗಳಲ್ಲಿ ಒಬ್ಬರು. ಬಾಂಗ್ಲಾದೇಶ ವಿರುದ್ಧದದ ಪಂದ್ಯದ ವೇಳೆ ಮುಷ್ಫಿಕರ್ ರಹೀಮ್ ಅವರನ್ನು ಔಟ್ ಮಾಡಲು ಅದ್ಭುತವಾದ ಕ್ಯಾಚೊಂದನ್ನು ಪಡೆದರು. ನಂತರ ಸೂಪರ್ಮ್ಯಾನ್ ಫೀಲ್ಡರ್ ಭಾರತೀಯ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರನ್ನು ನೋಡಿಕೊಂಡು ವಿಶಿಷ್ಟ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದರು. ಅದು ಏನೆಂಬುದು ತಕ್ಷಣಕ್ಕೆ ಅಭಿಮಾನಿಗಳಿಗೆ ಗೊತ್ತಾಗಲಿಲ್ಲ. ಅದು ಏನೆಂಬುದು ಎಲ್ಲರಿಗೂ ಗೊತ್ತಾಯಿತು.
ಹಾಲಿ ವಿಶ್ವ ಕಪ್ನಲ್ಲಿ ಪಂದ್ಯ ಮುಗಿದ ಬಳಿಕ ಆ ಪಂದ್ಯದಲ್ಲಿ ಅತ್ಯುತ್ತಮ ಫೀಲ್ಡಿಂಗ್ ಮಾಡಿದ ಅಟಗಾರರನ್ನು ಗುರುತಿಸ ಸನ್ಮಾನ ಮಾಡುವ ಅಭ್ಯಾಸ ಆರಂಭವಾಗಿದೆ. ಅಂತೆಯೇ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಪಾಕ್ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಕೀಪಿಂಗ್ ಮಾಡಿದ್ದ ಕೆ. ಎಲ್ ರಾಹುಲ್ ಪ್ರಶಸ್ತ ಪಡೆದುಕೊಂಡಿದ್ದರು. ಅಂತೆಯೇ ಮುಷ್ಫಿಕರ್ ನೀಡಿದ್ದ ಅದ್ಭುತ್ ಕ್ಯಾಚ್ ಹಿಡಿದ ರವೀಂದ್ರ ಜಡೇಜಾ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರಿಗೆ ಉತ್ತಮ ಫೀಲ್ಡರ್ ಪ್ರಶಸ್ತಿ ತಮಗೆ ಕೊಡುವಂತೆ ಮನವಿ ಮಾಡುತ್ತಾರೆ.
ಕ್ಯಾಚ್ ಪಡೆದ ಜಡೇಜಾ ಖಂಡಿತವಾಗಿಯೂ ಆಟದ ಅತ್ಯುತ್ತಮ ಫೀಲ್ಡರ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಹೀಗಾಗಿ ಪದಕವನ್ನು ಸಿದ್ಧಪಡಿಸಿ ಅವರಿಗೆ ನೀಡುವಂತೆ ಟಿ ದಿಲೀಪ್ ಅವರಿಗೆ ಸಂಕೇತ ನೀಡಿದರು. ಅಂಪೈರ್ ಮರೈಸ್ ಎರಾಸ್ಮಸ್ ಕೂಡ ಜಡೇಜಾಗೆ ಪದಕವನ್ನು ನೀಡುವಂತೆ ಟಿ ದಿಲೀಪ್ ಅವರಿಗೆ ಸೂಚಿಸಿದರು.
ಭಾರತಕ್ಕೆ 257 ರನ್ ಗೆಲುವಿನ ಗುರಿ
ಪುಣೆ: ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಭಾರತ ತಂಡ ವಿಶ್ವ ಕಪ್ನಲ್ಲಿ ತನ್ನ ನಾಲ್ಕನೇ ಪಂದ್ಯದಲ್ಲಿ ಬಾಂಗ್ಲಾದೇಶ (Ind vs Ban) ತಂಡವನ್ನು 256 ರನ್ಗಳಿಗೆ ನಿಯಂತ್ರಿಸಿದೆ. ಈ ಮೂಲಕ ರೋಹಿತ್ ಶರ್ಮಾ ಬಳಗಕ್ಕೆ 257 ರನ್ಗಳ ಗೆಲುವಿನ ಗುರಿ ಎದುರಾಗಿದೆ. ಆರಂಭದಲ್ಲಿ ಬಾಂಗ್ಲಾದೇಶ ತಂಡದ ಬ್ಯಾಟರ್ಗಳು ಮೇಲುಗೈ ಸಾಧಿಸಿದರೆ, ಬಳಿಕ ಭಾರತದ ಬೌಲರ್ಗಳು ರನ್ವೇಗಕ್ಕೆ ಕಡಿವಾಣ ಹಾಕಿದರು.
ಇಲ್ಲಿನ ಎಂಸಿಎ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಅವಕಾಶ ಸಿಕ್ಕಾಗ ರನ್ ಗಳಿಸುತ್ತಾ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟ ಮಾಡಿಕೊಂಡು 256 ರನ್ ಬಾರಿಸಿತು.
ಬಾಂಗ್ಲಾದೇಶ ತಂಡ ಉತ್ತಮ ಆರಂಭವನ್ನೇ ಪಡೆಯಿತು. 14.4 ಓವರ್ಗಳಲ್ಲಿ 93 ರನ್ ಬಾರಿಸುವ ಮೂಲಕ ದೊಡ್ಡ ಸ್ಕೋರ್ ಗಳಿಸುವ ಗುರಿಯನ್ನು ವ್ಯಕ್ತಪಡಿಸಿತು. ಆದರೆ, ಕುಲ್ದೀಪ್ ಯಾದವ್ ಅವರ ಅಮೋಘ ಕೈಚಳಕಕ್ಕೆ ಅರ್ಧ ಶತಕ ಬಾರಿಸಿದ್ದ ತಂಜಿದ್ ಹಸನ್ (51) ಎಲ್ಬಿಡಬ್ಲ್ಯು ಆಗಿ ಔಟಾದರು. ಮೊದಲ ವಿಕೆಟ್ ಕಳೆದುಕೊಂಡ ಬಾಂಗ್ಲಾ ತಂಡಕ್ಕೆ ತಕ್ಷಣವೇ ಚೇತರಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಬಳಿಕ ಬಂದ ಹಂಗಾಮಿ ನಾಯಕ ನಜ್ಮುಲ್ ಶಾಂಟೊ 8 ರನ್ಗೆ ಔಟಾದರು. ಅವರು ಜಡೇಜಾ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯು ಆದರು. ಏತನ್ಮಧ್ಯೆ ರನ್ ಗಳಿಕೆಗೆ ವೇಗ ಕೊಟ್ಟ ಮತ್ತೊಬ್ಬ ಆರಂಭಿಕ ಆಟಗಾರ ಲಿಟನ್ ದಾಸ್ 66 ರನ್ಗಳಿಗೆ ಔಟಾದರು. ಜಡೇಜಾ ಎಸೆತಕ್ಕೆ ದೊಡ್ಡ ಹೊಡೆದ ಬಾರಿಸಲು ಮುಂದಾದ ಅವರು ಗಿಲ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಈ ಸುದ್ದಿಗಳನ್ನೂ ಓದಿ
KL Rahul : ಜಿಂಕೆಯಂತೆ ಚಂಗನೆ ನೆಗೆದು ಅದ್ಭುತ್ ಕ್ಯಾಚ್ ಹಿಡಿದ ಕೆ. ಎಲ್ ರಾಹುಲ್
IND vs PAK : ಹಾರ್ದಿಕ್ ಪಾಂಡ್ಯ ಶೂ ಲೇಸ್ ಕಟ್ಟಿದ ಶದಾಬ್ ಖಾನ್; ಕ್ರೀಡಾ ಸ್ಫೂರ್ತಿಗೆ ನೆಟ್ಟಿಗರ ಮೆಚ್ಚುಗೆ
ನಾಲ್ಕನೇ ಬ್ಯಾಟರ್ ಆಗಿ ಆಡಲು ಬಂದ ಮೆಹೆದಿ ಹಸನ್ ವೇಗಿ ಮೊಹಮ್ಮದ್ ಸಿರಾಜ್ಗೆ ವಿಕೆಟ್ ಒಪ್ಪಿಸಿದರು. ವಿಕೆಟ್ ಕೀಪರ್ ಕೆ. ಎಲ್ ರಾಹುಲ್ ಹಿಡಿದ ಅದ್ಭುತ ಕ್ಯಾಚ್ಗೆ ಅವರು ಬಲಿಯಾದರು. ಇದಾದ ಬಳಿಕ ಆಡಲು ಬಂದ ತೌಹಿದ್ ಹೃದೋಯ್ 16 ರನ್ ಬಾರಿಸಿ ಕ್ರೀಸ್ನಲ್ಲಿ ತಳವೂರುವ ಲಕ್ಷಣ ತೋರಿದರು. ಇವರಿಗೆ ವಿಕೆಟ್ಕೀಪರ್ ಮುಷ್ಫಿಕರ್ ರಹೀಮ್ (38) ಸಾಥ್ ಕೊಟ್ಟರು. ಹೃದೋಯ್ ಠಾಕೂರ್ಗೆ ವಿಕೆಟ್ ಒಪ್ಪಿಸಿದರೆ, ಬುಮ್ರಾ ಎಸೆತಕ್ಕೆ 38 ರನ್ ಬಾರಿಸಿ ಔಟಾದರು. ಜಡೇಜಾ ಹಿಡಿದ ಅದ್ಭುತ ಕ್ಯಾಚ್ಗೆ ಮುಷ್ಫಿಕರ್ ವಿಕೆಟ್ ಒಪ್ಪಿಸಿದರು.
ನಸುಮ್ ಅಹಮದ್ 14 ರನ್ ಬಾರಿಸಿ ಔಟಾದರು. ಮಹಮದುಲ್ಲಾ 46 ರನ್ ಬಾರಿಸಿ ಮಿಂಚಿದರು.
ಭಾರತ ತಂಡದ ಪರ ಬೌಲಿಂಗ್ನಲ್ಲಿ ಬುಮ್ರಾ 2 ವಿಕೆಟ್ ಉರುಳಿಸಿದರೆ, ಸಿರಾಜ್ 2 ವಿಕೆಟ್ ತಮ್ಮದಾಗಿಸಿಕೊಂಡರು. ರವೀಂದ್ರ ಜಡೇಜಾ ಪ್ರಮುಖ ಎರಡು ವಿಕೆಟ್ಗಳನ್ನು ಉರುಳಿಸಿದರೆ, ಶಾರ್ದೂಲ್ ಠಾಕೂರ್ ಹಾಗೂ ಕುಲ್ದೀಪ್ ಯಾದವ್ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು.