ಪಲ್ಲೆಕೆಲೆ: ಏಷ್ಯಾಕಪ್ನಲ್ಲಿ(Asia cup 2023) ಭಾರತದ ಬದ್ಧ ಎದುರಾಳಿ ಪಾಕಿಸ್ತಾನ(IND vs PAK) ತಂಡ ಸೋಲು ಕಾಣುವಂತೆ ಕೆಲವು ಕಡೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಕೂಡ ನಡೆಸಲಾಗಿದೆ. ಆದರೆ ಭಾರತ ನೆಲದ್ದಲೇ ಇದು ಪಾಕಿಸ್ತಾನ ಆಟಗಾರನಿಗೆ ಬೆಂಬಲ ಸೂಚಿಸಿದ ನಟಿ ಊರ್ವಶಿ ರೌಟೇಲಾ(Urvashi Rautela) ಅವರ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಜತೆಗೆ ಟ್ರೋಲ್ ಕೂಡ ಮಾಡಿದ್ದಾರೆ.
ಕಳೆದ ವರ್ಷ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಬಳಿಕ ಭಾರತ ಮತ್ತು ಪಾಕಿಸ್ತಾನ ಈ ಪಂದ್ಯದ ಮೂಲಕ ಮುಖಾಮುಖಿಯಾಗಿದೆ. ಮೊದಲು ಬ್ಯಾಟಿಂಗ್ ನಡೆಸಿದ ಭಾರತ 266ರನ್ ಗಳಿಸಿ ಆಲೌಟ್ ಆಯಿತು. ಆದರೆ ಪಾಕಿಸ್ತಾನ ಬ್ಯಾಟಿಂಗ್ ನಡೆಸಲು ಮಳೆ ಅನುವು ನಿಡದ ಕಾರಣ ಪಂದ್ಯ ರದ್ದುಗೊಂಡಿತು. ಹೀಗಾಗಿ ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಲಾಯಿತು. ನೇಪಾಳ ವಿರುದ್ಧ ಮೊದಲ ಪಂದ್ಯದಲ್ಲಿ ಗೆದ್ದ ಪಾಕ್ ಸೂಪರ್ 4 ಹಂತಕ್ಕೆ ಪ್ರವೇಶಿಶಿತು.
ಪಂದ್ಯ ಆರಂಭಕ್ಕೂ ಮುನ್ನ ಪಾಕಿಸ್ತಾನ ಆಟಗಾರ ನಸೀಮ್ ಶಾ ಅವರು ಸಹ ಆಟಗಾರರೊಂದಿಗಿರುವ ಫೋಟೊವನ್ನು ಬಾಲಿವುಡ್ ನಟಿ ಊರ್ವಶಿ ರೌಟೇಲಾ ತಮ್ಮ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ನಲ್ಲಿ ಹಾಕಿದ್ದಾರೆ. ಇದನ್ನು ಕಂಡ ಭಾರತೀಯರು ಅವರನ್ನು ದೇಶ ದ್ರೋಹಿ ಎಂದು ಕರೆದಿದ್ದಾರೆ. ಇನ್ನು ಕೆಲವರು ಟ್ರೋಲ್ ಮಾಡಿದ್ದಾರೆ.
ಕಳೆದ ವರ್ಷ, ಊರ್ವಶಿ ದುಬೈನಲ್ಲಿ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯಕ್ಕೆ ಹಾಜರಾಗಿದ್ದರು. ಅಲ್ಲದೆ ನಸೀಮ್ ಶಾ ಅವರ ಅಭಿನಮಾನಿ ಎಂದು ಪೋಸ್ಟ್ ಕೂಡ ಹಾಕಿದ್ದರು. ಇದಯ ಮಾತ್ರವಲ್ಲದೆ ನಸೀಮ್ ಶಾ ಅವರ ಹುಟ್ಟುಹಬ್ಬಕ್ಕೂ ಶುಭಾಶಯ ಕೋರಿದ್ದರು. ಶುಭಾಶಯದ ಜತೆಗೆ ಡಿಎಸ್‌ಪಿ ಗೌರವ ಪಡೆದಿದ್ದಕ್ಕೂ ನಸೀಮ್ ಶಾ ಅವರಿಗೆ ಊರ್ವಶಿ ಅಭಿನಂದಿಸಿದ್ದರು. ಇದಕ್ಕೆ ನಸೀಮ್ ಶಾ, ‘ಧನ್ಯವಾದಗಳು’ ಎಂದು ಪ್ರತಿಕ್ರಿಕೆ ನೀಡಿದ್ದರು. ಈ ವೇಳೆ ನೆಟ್ಟಿಗರು ಇವರಿಬ್ಬರ ಮಧ್ಯೆ ಪ್ರೇಮಾಂಕುರ ಆಗಿದೆ ಎಂದಿದ್ದರು. ಇದೀಗ ಮತ್ತೆ ಅವರು ನಸೀಮ್ ಶಾ ಫೋಟೊ ಹಾಕಿದನ್ನು ಗಮನಿಸುವಾಗ ಈ ಮಾತು ಶೀಘ್ರದಲ್ಲೇ ನಿಜವಾಗುವ ಲಕ್ಷಣವಿದೆ.
ಇದನ್ನೂ ಓದಿ Actress Urvashi: ತಮ್ಮ ಕುಡಿತದ ಚಟದಿಂದಾಗಿ ಮಗಳನ್ನು ದೂರಮಾಡಿಕೊಂಡೆ ಎಂದ ನಟಿ ಊರ್ವಶಿ!
Urvashi Rautela ♥️ congratulates ✨ Pakistani Cricketer 🏏 Naseem Shah on his Birthday 🎂 & being appointed honorary DSP 👮🏻♂️ of Balochistan Police…
— Urvashi Rautela ❤️ (@AsliUrvashians) February 16, 2023
.
.@UrvashiRautela ♥️@iNaseemShah ✨
.
.#naseemshah #PeshawarZalmi #QuettaGladiators #PakistanCricket#PSL2023 #UrvashiRautela pic.twitter.com/uopzxzzrv9
ಇಷ್ಟು ದಿನ ಟೀಮ್ ಇಂಡಿಯಾದ ಆಟಗಾರ ರಿಷಭ್ ಪಂತ್(Rishabh Pant) ವಿಚಾರದಲ್ಲಿ ಸುದ್ದಿಯಲ್ಲಿದ್ದ ಊರ್ವಶಿ ಇದೀಗ ಪಾಕ್ ಆಟಗಾರ ಬೆನ್ನು ಬಿದ್ದಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡಲಾರಂಭಿಸಿದ್ದಾರೆ.
ರಿಷಭ್ ಪಂತ್ ಅವರು ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ವೇಳೆ ಪಂತ್ ಶೀಘ್ರ ಚೇತರಿಕೆ ಕಾಣುವಂತೆ ಪ್ರಾರ್ಥಿಸಿ ಟ್ವೀಟ್ ಮಾಡಿದ್ದರು. ಅಲ್ಲದೆ “ಪಂತ್ ಈ ದೇಶದ ಆಸ್ತಿ” ಎಂದು ಹೇಳಿದ್ದರು. ಆದರೆ ಈಗ ಅವರು ಪಂತ್ ಅವರನ್ನು ಬಿಟ್ಟು ಪಾಕ್ ಆಟಗಾರ ಹಿಂದೆ ಬಿದ್ದಿದ್ದಾರೆ.