Site icon Vistara News

Suresh Raina | 36ನೇ ವಸಂತಕ್ಕೆ ಕಾಲಿಟ್ಟ ಸುರೇಶ್ ರೈನಾಗೆ ಶುಭಾಶಯಗಳ ಮಹಾಪೂರ

suresh raina

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಸುರೇಶ್ ರೈನಾ (Suresh Raina) 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂತಸದಲ್ಲಿರುವ ಅವರಿಗೆ ಅಭಿಮಾನಿಗಳು, ಮಾಜಿ ಹಾಗೂ ಹಾಲಿ ಆಟಗಾರರು ಸೇರಿದಂತೆ ಬಿಸಿಸಿಐ ಕೂಡಾ ಶುಭ ಹಾರೈಸಿದೆ.

ನವೆಂಬರ್ 27, 1986 ರಂದು ಜನಿಸಿದ ರೈನಾ ಎಡಗೈ ಬ್ಯಾಟರ್​ ಆಗಿ ಭಾರತ ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮೈದಾನದಲ್ಲಿ ಚುರುಕಿನ ಫಿಲ್ಡಿಂಗ್​ ಮೂಲಕ ಕ್ಯಾಚ್‍ಗಳನ್ನು ಹಿಡಿದಿರುವ ಇವರು ವಿಶ್ವದ ಅತ್ಯುತ್ತಮ ಫೀಲ್ಡರ್ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.

2011ರ ಏಕದಿನ ವಿಶ್ವ ಕಪ್ ವಿಜೇತ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದು ಅವರ ಶ್ರೇಷ್ಠ ಸಾಧನೆಯಾಗಿದೆ. 2020ರ ಆಗಸ್ಟ್ 15ರಂದು ಧೋನಿ ಜತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಸುರೇಶ್ ರೈನಾ ಅವರನ್ನು ಮಿಸ್ಟರ್ ಐಪಿಎಲ್ ಎಂದೇ ಕರೆಯಲಾಗುತ್ತದೆ.

ರೈನಾ ಸಾಧನೆ

ಭಾರತ ಪರ ಒಟ್ಟು 322 ಅಂತಾರಾಷ್ಟ್ರೀಯ ಪಂದ್ಯ ಆಡಿದ ರೈನಾ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 7988 ರನ್​ಗಳ ಸಾಧಕ.

ರೈನಾ ಒಟ್ಟು 7 ಅಂತಾರಾಷ್ಟ್ರೀಯ ಶತತ ಬಾರಿಸಿದ್ದಾರೆ.

205 ಐಪಿಎಲ್​ ಪಂದ್ಯಗಳಲ್ಲಿ 5528 ರನ್ ಬಾರಿಸಿದ್ದಾರೆ.

ಇದನ್ನೂ ಓದಿ | Team India | ಉಮ್ರಾನ್‌ ಮಲಿಕ್‌ ಮೊದಲ ಒಡಿಐ ವಿಕೆಟ್‌ ಪಡೆದಾಗ ಮನೆ ಮಂದಿಯ ಸಂಭ್ರಮ ಹೀಗಿತ್ತು

Exit mobile version