ಮುಂಬಯಿ: ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ(Suresh Raina) ಅವರು 2023ನೇ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ(LPL 2023) ಆಡುವ ಸಾಧ್ಯತೆ ಇದೆ. ಮುಂಬರುವ ಆವೃತ್ತಿಗಾಗಿ ನಡೆಯುವ ಹರಾಜು ಪ್ರಕ್ರಿಯೆಗೆ ತಮ್ಮ ಹೆಸರನ್ನು ನೊಂದಾಯಿಸಿದ್ದಾರೆ. ಈ ಹರಾಜು ಪ್ರಕ್ರಿಯೆ ಜೂನ್ 14 ಬುಧವಾರ ನಡೆಯಲಿದೆ.
ರೈನಾ ಅವರು USD 50,000 ಮೂಲಬೆಲೆಯನ್ನು ಹೊಂದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್(CSK) ತಂಡದ ಪರ ಹಲವು ದಾಖಲೆ ಬೆರೆದಿರುವ ಅವರು ಸದ್ಯ ಐಪಿಎಲ್ನಿಂದ(IPL) ನಿವೃತ್ತಿ ಪಡೆದಿದ್ದಾರೆ. 2022ರ ಸಪ್ಟೆಂಬರ್‌ನಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ರೈನಾ ವಿದೇಶಿ ಲೀಗ್‌ಗಳ ಮೇಲೆ ಚಿತ್ತನೆಟ್ಟಿದ್ದಾರೆ. 2022ರ ಡಿಸೆಂಬರ್‌ನಲ್ಲಿ ನಡೆದಿದ್ದ ಅಬುದಾಬಿ ಟಿ10 ಲೀಗ್‌ನಲ್ಲಿ ರೈನಾ ಅವರು ಡೆಕ್ಕನ್ ಗ್ಲಾಡಿಯೇಟರ್ ಪರ ಕಣಕ್ಕಿಳಿದಿದ್ದರು. ಕಳೆದ ಮಾರ್ಚ್‌ನಲ್ಲಿ ನಡೆದ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿಯೂ ರೈನಾ ಭಾಗಿಯಾಗಿದ್ದರು.
ನಾಲ್ಕನೇ ಆವೃತ್ತಿಯ ಟೂರ್ನಿಯನ್ನು ಆಡಲು ಸಿದ್ಧತೆ ಮಾಡಿಕೊಂಡಿರುವ ಲಂಕಾ ಕ್ರಿಕೆಟ್ ಮಂಡಳಿ)Sri Lanka Cricket) ಇದೇ ಮೊದಲ ಬಾರಿಗೆ ಐಪಿಎಲ್ ಮಾದರಿಯಲ್ಲಿ ಹರಾಜು ಪ್ರಕ್ರಿಯೆ ನಡೆಸಲಿದೆ. 140 ಅಂತಾರಾಷ್ಟ್ರೀಯ ಕ್ರಿಕೆಟಿಗರ ಸಹಿತ ಒಟ್ಟು 500ಕ್ಕೂ ಅಧಿಕ ಕ್ರಿಕೆಟಿಗರು ಈ ಹರಾಜು ಪಟ್ಟಿಯಲ್ಲಿದ್ದಾರೆ. ಪಾಕ್ ತಂಡದ ನಾಯಕ ಬಾಬರ್ ಅಜಂ, ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಈ ಟೂರ್ನಿಯಲ್ಲಿ ಭಾಗವಹಿಸಿರುವ ಪ್ರಮುಖ ಅಂತಾರಾಷ್ಟ್ರೀಯ ಸ್ಟಾರ್ ಕ್ರಿಕೆಟಿಗರಾಗಿದ್ದಾರೆ.
ಇದನ್ನೂ ಓದಿ IPL News: ಡೆಲ್ಲಿ ತಂಡದಿಂದ ರಿಕಿ ಪಾಂಟಿಂಗ್ ಔಟ್; ಗಂಗೂಲಿ ನೂತನ ಕೋಚ್!
205 ಐಪಿಎಲ್ ಪಂದ್ಯಗಳನ್ನು ಆಡಿರುವ ಸುರೇಶ್ ರೈನಾ 5528 ರನ್‌ಗಳನ್ನು ಗಳಿಸಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಅವರು ಕಾಮೆಂಟ್ರಿ ಪ್ಯಾನಲ್ನಲ್ಲಿ ಕರ್ತತ್ಯ ನಿರ್ವಹಿಸಿದ್ದರು.