ದುಬೈ: ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ(Suresh Raina) ಅವರು, ನಿವೃತ್ತಿಯಿಂದ ಹೊರಬಂದು ಐಪಿಎಲ್ ಆಡಬಾರದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವರ್ಲ್ಡ್ ಜಯಂಟ್ಸ್ ಎದುರಿನ ಪಂದ್ಯದಲ್ಲಿ ಸುರೇಶ್ ರೈನಾ ಅರ್ಧಶತಕ ಬಾರಿಸಿ ಮಿಂಚಿದ್ದರು. ಪಂದ್ಯ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಪತ್ರಕರ್ತರೊಬ್ಬರು ರೈನಾ ಬಳಿ ನೀವು ನಿವೃತ್ತಿಯಿಂದ ಹೊರಬಂದು ಐಪಿಎಲ್ ಆಡಬಾರದೇಕೆ ಎಂದು ಕೇಳಿದ್ದಾರೆ.
ಈ ಪ್ರಶ್ನೆಗೆ ಉತ್ತರ ನೀಡಿದ ರೈನಾ “ನಾನು ಸುರೇಶ್ ರೈನಾ. ನಿವೃತ್ತಿ ಹಿಂಪಡೆಯಲು ನಾನು ಶಾಹಿದ್ ಅಫ್ರಿದಿ(shahid afridi) ಅಲ್ಲ. ಈಗಾಗಲೇ ನಾನು ನಿವೃತ್ತಿ ಕೊಟ್ಟಾಗಿದೆ. ಅದೇ ನನ್ನ ಅಂತಿಮ ನಿರ್ಧಾರ” ಎಂದು ಹೇಳಿದ್ದಾರೆ. ರೈನಾ ಅವರ ಈ ಉತ್ತರ ಎಲ್ಲಡೆ ವೈರಲ್ ಆಗಿದೆ.
ಇದನ್ನೂ ಓದಿ IND VS AUS ODI: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ
ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಪಾಕಿಸ್ತಾನ್ ಸೂಪರ್ ಲೀಗ್ ಕ್ರಿಕೆಟ್‌ಗೆ ನಿವೃತ್ತಿ ನೀಡಿದ ಬಳಿಕವೂ ತಮ್ಮ ನಿವೃತ್ತಿಯನ್ನು ವಾಪಾಸ್ ಪಡೆದು ಮತ್ತೆ ಕ್ರಿಕೆಟ್ ಆಡಿದ್ದರು. ಹೀಗಾಗಿ ರೈನಾ ಅವರು ಮಾಧ್ಯಮದವರ ಪ್ರಶ್ನೆಗೆ ಅಫ್ರಿದಿ ಅವರನ್ನು ಹೋಲಿಕೆ ಮಾಡಿ ಉತ್ತರಿಸಿದ್ದಾರೆ.