ದುಬೈ: ಐಸಿಸಿ ಪ್ರಕಟಿಸಿದ ನೂತನ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ(ICC T20 Ranking) ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್(suryakumar yadav) ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ನಂ.1 ಸ್ಥಾನದಲ್ಲಿ ಮುಂದುವರಿಯುವ ಜತೆಗೆ ಶ್ರೇಯಾಂಕದಲ್ಲಿ ಅಧಿಕ ಅಂಕ ಪಡೆದ ವಿಶ್ವದ 2ನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಸೂರ್ಯ ಪಾತ್ರರಾಗಿದ್ದಾರೆ.
ಐಸಿಸಿ ಟಿ20 ರ‍್ಯಾಂಕಿಂಗ್ ಇತಿಹಾಸದಲ್ಲೇ 910 ಅಂಕ ಕಲೆಹಾಕುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎಂಬ ಸಾಧನೆಯನ್ನು ಸೂರ್ಯಕುಮಾರ್ ಯಾದವ್ ಮಾಡಿದ್ದಾರೆ. ಇಂಗ್ಲೆಂಡ್ ತಂಡದ ಡೇವಿಡ್ ಮಲಾನ್ ಒಟ್ಟು 915 ಪಾಯಿಂಟ್ ಕಲೆಹಾಕುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಅಂಕ ಪಡೆದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ Most men’s ICC awards: ಅತಿ ಹೆಚ್ಚು ಬಾರಿ ಪುರುಷರ ಐಸಿಸಿ ಪ್ರಶಸ್ತಿಗಳನ್ನು ಪಡೆದ ಆಟಗಾರ
ಸದ್ಯ 910 ಪಾಯಿಂಟ್ಗಳಿಸಿರುವ ಸೂರ್ಯಕುಮಾರ್ ಯಾದವ್ ಕಿವೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರುವ ಮೂಲಕ 6 ಅಂಕಗಳನ್ನು ಗಳಿಸಿದರೆ ಹೊಸ ಇತಿಹಾಸ ನಿರ್ಮಿಸಲಿದ್ದಾರೆ. ಈ ಮೂಲಕ ಡೇವಿಡ್ ಮಲಾನ್ ಹೆಸರಿನಲ್ಲಿರುವ ವಿಶ್ವ ದಾಖಲೆಯನ್ನು ಮುರಿಯುವ ಅವಕಾಶ ಅವರಿಗಿದೆ.