ಮೌಂಟ್ ಮೌಂಗುನಿ : ಟೀಮ್ ಇಂಡಿಯಾದ (Team India) ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರದ್ದೇ ಎಲ್ಲ ಕಡೆಯೂ ಸುದ್ದಿ. ವಿಸ್ಫೋಟಕ ಬ್ಯಾಟಿಂಗ್ ಮೂಲಕ ಅವರು ಕ್ರಿಕೆಟ್ ಪ್ರಿಯರ ಮನಗೆದ್ದಿದ್ದಾರೆ. ಸದ್ಯಕ್ಕೆ ಅವರು ಟೀಮ್ ಇಂಡಿಯಾದ ಸೀಮಿತ ಓವರ್‌ಗಳ ತಂಡದಲ್ಲಿ ಮಾತ್ರ ಸ್ಥಾನ ಪಡೆಯುತ್ತಿದ್ದು ಅವಕಾಶಗಳನ್ನು ಸದ್ಬಳಕೆ ಮಾಡುತ್ತಿದ್ದಾರೆ. ಆದರೆ, ಅವರಿಗೆ ಇತರ ಮಾದರಿಯ ಕ್ರಿಕೆಟ್‌ನಲ್ಲೂ ಆಡುವ ಹಂಬಲವನ್ನು ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಟೆಸ್ಟ್ ಕ್ರಿಕೆಟ್ ಕ್ಯಾಪ್ ಧರಿಸುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ಭಾನುವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ೨೦ ಸರಣಿಯ ಎರಡನೇ ಪಂದ್ಯದಲ್ಲಿ ಸ್ಫೋಟಕ ೧೧೧ ರನ್ ಬಾರಿಸಿದ್ದರು. ಈ ಮೂಲಕ ಅವರು ಕ್ಯಾಲೆಂಡರ್ ವರ್ಷದಲ್ಲಿ ಎರಡನೇ ಟಿ೨೦ ಶತಕ ಬಾರಿಸಿದ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಪಂದ್ಯದ ಬಳಿಕ ಅವರಿಗೆ ಟೆಸ್ಟ್ ಮಾದರಿಯಲ್ಲಿ ಆಡುವಿರಾ ಎಂದು ಪತ್ರಕರ್ತರು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ಕೊಟ್ಟ ಅವರು, ಹೌದು ಖಂಡಿತಾ ಬರುವೆ ಅಲ್ಲಿಗೆ. ಒಂದು ದಿನ ಅಲ್ಲೇ ಇರುವೆ ಎಂದು ಹೇಳಿದ್ದಾರೆ.
“ಹೌದುದು, ಆ ಅವಕಾಶವೂ ಬರಲಿದೆ. ನಾನು ಕೆಂಪು ಚೆಂಡಿನಲ್ಲಿಯೇ ನನ್ನ ಕ್ರಿಕೆಟ್ ಆರಂಭಿಸಿದ್ದೆ. ಅದು ಕೂಡ ನನಗೆ ಇಷ್ಟ. ಮುಂಬಯಿ ತಂಡಕ್ಕಾಗಿ ಆಡಿದ್ದೆ. ಹೀಗಾಗಿ ಟೆಸ್ಟ್ ಮಾದರಿಯ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಆ ಮಾದರಿಯಲ್ಲೂ ಚೆನ್ನಾಗಿ ಅಡಲು ಬರುತ್ತದೆ. ಹೀಗಾಗಿ ಟೆಸ್ಟ್ ಕ್ಯಾಪ್ ಸಿಕ್ಕೇ ಸಿಗುತ್ತದೆ,” ಎಂದು ಅವರು ಹೇಳಿದ್ದಾರೆ.
“ನಾನು ಪರಿಸ್ಥಿತಿಯ ಬಗ್ಗೆ ಹೆಚ್ಚು ಚರ್ಚೆ ನಡೆಸುತ್ತಿರುತ್ತೇನೆ. ನಾನು ಕೊಠಡಿಯಲ್ಲಿ ಇರುವ ವೇಳೆ, ಪತ್ನಿಯೊಂದಿಗೆ ಪ್ರಯಾಣ ಮಾಡುವಾಗ ಇದೇ ವಿಚಾರವನ್ನು ಮಾತನಾಡುತ್ತಿರುತ್ತೇನೆ. ಎರಡು ವರ್ಷದ ಹಿಂದೆ ನಾನು ಎಲ್ಲಿದ್ದೆ ಹಾಗೂ ಈಗ ಎಲ್ಲಿದ್ದೇನೆ,” ಎಂಬುದನ್ನು ಚರ್ಚೆ ನಡೆಸುತ್ತಿರುತ್ತೇನೆ,” ಎಂಬುದಾಗಿ ಅವರು ಹೇಳಿದ್ದಾರೆ.
ಆಟ ಮುಗಿಸಿ ನನ್ನ ಕೊಠಡಿಗೆ ತೆರಳಿದ ಬಳಿಕವೂ ಕೆಲವೊಂದು ನನ್ನ ಹೊಡೆತಗಳನ್ನು ನೋಡಿ ಆಶ್ಚರ್ಯಚಕಿತನಾಗಿದ್ದೇನೆ, ನನ್ನ ಆಟದ ಹೈಲೈಟ್ಸ್‌ಗಳನ್ನು ನೋಡುತ್ತೇನೆ. ಹಾಗೆಂದು ಪ್ರತಿಯೊಂದು ಬಾರಿಯೂ ಇನ್ನೂ ಚೆನ್ನಾಗಿ ಆಡಬೇಕಿತ್ತು ಎಂದು ಯೋಚನೆ ಮಾಡುತ್ತಿರುತ್ತೇನೆ. ಅದುವೇ ನನ್ನ ಕ್ರಿಕೆಟ್ ಯಶಸ್ಸಿಗೆ ಕಾರಣ,” ಎಂಬುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ | IND vs NZ | ಪಾಕಿಸ್ತಾನ ನಾಯಕ ಬಾಬರ್ ಅಜಮ್ ದಾಖಲೆಯನ್ನು ಪುಡಿಗಟ್ಟಿದ ಸೂರ್ಯಕುಮಾರ್ ಯಾದವ್