ದುಬೈ: ಸ್ಫೋಟಕ ಬ್ಯಾಟಿಂಗ್ ಮೂಲಕ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ನ ವಿಶ್ವಾಸ ಗಳಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಐಸಿಸಿ ಟಿ೨೦ Rank ಪಟ್ಟಿಯಲ್ಲಿ ಶರವೇಗದ ಓಟ ಮುಂದುವರಿಸಿದ್ದು, ದಕ್ಷಿಣ ಆಫ್ರಿಕಾದ ಆಟಗಾರ ಏಡೆನ್ ಮಾರ್ಕ್ರಮ್ ಅವರನ್ನೂ ಓವರ್‌ಟೇಕ್ ಮಾಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಅವರು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಅವರನ್ನು ಶ್ರೇಯಾಂಕ ಪಟ್ಟಿಯಲ್ಲಿ ಹಿಂದಿಕ್ಕಿದ್ದರು. ಇದೀಗ ಅವರಿಗೆ ಪಾಕ್‌ನ ವಿಕೆಟ್‌ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ಞಾನ್ ಅವರೇ ಟಾರ್ಗೆಟ್. ಅವರೀಗ ನಂಬರ್ ಒನ್ ಸ್ಥಾನದಲ್ಲಿದ್ದಾರೆ.
ಸೂರ್ಯಕುಮಾರ್ ಯಾದವ್ ಈಗ 801 ರೇಟಿಂಗ್ ಅಂಕಗಳನ್ನು ಹೊಂದಿದ್ದು, ಎರಡು ಸ್ಥಾನ ಬಡ್ತಿಯೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಮೂರನೇ ಶ್ರೇಯಾಂಕ ಪಡೆದಿರುವ ಬಾಬರ್ ಅಜಮ್ ೭೯೯ ರೇಟಿಂಗ್ಸ್ ಅಂಕಗಳನ್ನು ಹೊಂದಿದ್ದು ಅವರಿಬ್ಬರ ನಡುವಿನ ಅಂತರ ಸಾಕಷ್ಟ ಕಡಿಮೆಯಿದೆ. ಆದರೆ, ಅದ್ಧೂರಿ ಫಾರ್ಮ್‌ನಲ್ಲಿರುವ ಮೊಹಮ್ಮದ್ ರಿಜ್ಞಾನ್ ಅವರು ೮೬೧ ರೇಟಿಂಗ್ ಅಂಕಗಳೊಂದಿಗೆ ಎರಡು ಹಾಗೂ ಮೂರನೇ ಸ್ಥಾನದಿಂದ ಸಾಕಷ್ಟು ಮುಂದಕ್ಕೆ ಹೋಗಿದ್ದಾರೆ.
ಮಾರ್ಕ್ರಮ್ ಸದ್ಯ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದು, ಆರೋನ್ ಫಿಂಚ್ ಐದನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ಹಾಗೂ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಭಾರತೀಯರು ಯಾರು ಸ್ಥಾನ ಪಡೆದಿಲ್ಲ.
ಇದನ್ನೂ ಓದಿ | ಇಂಗ್ಲೆಂಡ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿದ ಮಹಿಳಾ ತಂಡದ ನಾಯಕಿಯ ನೂತನ Rank ಎಷ್ಟು?