ಮುಂಬಯಿ: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಎಡ ಪಾದದ ನೋವಿಗೆ ಸಿಲುಕಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಟೀಮ್ ಇಂಡಿಯಾದ ಹಾರ್ಡ್ ಹಿಟ್ಟರ್ ಸೂರ್ಯಕುಮಾರ್ ಯಾದವ್(Suryakumar Yadav) ಅವರ ಚೇತರಿಕೆಗಾಗಿ ಬಾಲಿವುಡ್ನ ಸ್ಟಾರ್ ನಟ ಆಯುಷ್ಮಾನ್ ಖುರಾನ(Ayushmann Khurrana) ಹಾರೈಸಿದ್ದಾರೆ.
ಸೂರ್ಯಕುಮಾರ್ ಅವರೊಂದಿಗಿನ ಫೋಟೊವನ್ನು ತಮ್ಮ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಆಯುಷ್ಮಾನ್ ಖುರಾನ, ‘ಶೀಘ್ರವಾಗಿ ಚೇತರಿಸಿಕೊಳ್ಳಲಿ ಸಹೋದರ’ ಎಂದು ಹಾರೈಸಿದ್ದಾರೆ.
Great bumping into you SKY! 🩶🇮🇳
— Ayushmann Khurrana (@ayushmannk) December 23, 2023
Wishing you a speedy recovery bro. 🏏 pic.twitter.com/MiRu1bXZ1K
7 ವಾರಗಳ ಕಾಲ ವಿಶ್ರಾಂತಿ
ಗಾಯದಿಂದ ಚೇತರಿಕೆ ಕಾಣಲು ಸೂರ್ಯಕುಮಾರ್ ಯಾದವ್ಗೆ ಕನಿಷ್ಠ 7 ವಾರಗಳ ಕಾಲ ವಿಶ್ರಾಂತಿ ಪಡೆಯ ಬೇಕಾದ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಹೀಗಾಗಿ ಅವರು ಮುಂಬರುವ ಅಫಘಾನಿಸ್ತಾನ ಮತ್ತು ಐಪಿಎಲ್ ಟೂರ್ನಿಗೂ ಅಲಭ್ಯರಾಗುವ ಸಾಧ್ಯತೆ ಇದೆ.
ಸೂರ್ಯಕುಮಾರ್ ಯಾದವ್ ಅವರು ಊರುಗೋಲಿನ ನೆರವಿನಿಂದ ಸ್ಟ್ರೀಟ್ನಲ್ಲಿ ನಡೆಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೊವನ್ನು ಸೂರ್ಯಕುಮಾರ್ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ ಕುಸ್ತಿ ಒಕ್ಕೂಟಕ್ಕೆ ತಾತ್ಕಾಲಿಕ ಸಮಿತಿ ರಚಿಸಲು ಒಲಿಂಪಿಕ್ ಸಂಸ್ಥೆಗೆ ಕೇಂದ್ರದ ಸೂಚನೆ
ಅಫಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಜನವರಿ 11ರಿಂದ ಆರಂಭವಾಗಲಿದೆ. ಸದ್ಯದ ಪರಿಸ್ಥಿತಿ ನೋಡುವಾಗ ಸೂರ್ಯಕುಮಾರ್ ಈ ಸರಣಿ ಆಡುವುದು ಅನುಮಾನ. ಆದರೆ, ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಎರಡು ಪಂದ್ಯಗಳನ್ನು ಆಡಿ 156 ರನ್ ಬಾರಿಸಿದ್ದರು. ಒಂದು ಶತಕ ಮತ್ತು ಅರ್ಧಶತಕ ಬಾರಿಸಿದ್ದರು.
“ಗಾಯಗಳು ಎಂದಿಗೂ ವಿನೋದಮಯವಾಗಿರುವುದಿಲ್ಲ, ಆದರೆ ನಾನು ಅದನ್ನು ನನ್ನ ಹೆಜ್ಜೆಯಲ್ಲಿ ತೆಗೆದುಕೊಳ್ಳುತ್ತೇನೆ ಮತ್ತು ಯಾವುದೇ ಸಮಯದಲ್ಲಿ ಹಿಂತಿರುಗಿ, ಸಂಪೂರ್ಣವಾಗಿ ಫಿಟ್ ಆಗುತ್ತೇನೆ ಎಂದು ಭರವಸೆ ನೀಡುತ್ತೇನೆ! ಅಲ್ಲಿಯವರೆಗೆ, ನೀವೆಲ್ಲರೂ ರಜಾದಿನವನ್ನು ಆನಂದಿಸುತ್ತಿದ್ದೀರಿ ಮತ್ತು ಪ್ರತಿದಿನ ಸ್ವಲ್ಪ ಸಂತೋಷವನ್ನು ಕಂಡುಕೊಳ್ಳುತ್ತಿದ್ದೀರಿ ಎಂದು ಭಾವಿಸುತ್ತೇವೆ” ಎಂದು ಸೂರ್ಯಕುಮಾರ್ ಬರೆದುಕೊಂಡಿದ್ದಾರೆ.
ಒಡೆದ ಹೃದಯದ ಎಮೋಜಿ ಹಾಕಿದ್ದ ಸೂರ್ಯಕುಮಾರ್
ರೋಹಿತ್ ಶರ್ಮ ಅವರನ್ನು ಮುಂಬೈ ಇಂಡಿಯನ್ಸ್(Mumbai Indians Captain) ತಂಡದ ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದ ಮರು ದಿನವೇ ಸೂರ್ಯಕುಮಾರ್ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಒಡೆದು ಹೋದ ಹೃದಯದ ಫೋಟೊವನ್ನು ಶೇರ್ ಮಾಡಿ ಬೇಸರ ವ್ಯಕ್ತಪಡಿಸಿದ್ದರು.
ರೋಹಿತ್ ಮತ್ತು ಸೂರ್ಯಕುಮಾರ್ ನಡುವೆ ಉತ್ತಮ ಬಾಂಧವ್ಯ ಇದೆ. ಈ ವಿಚಾರ ಎಲ್ಲರಿಗೂ ತಿಳಿದಿದೆ. ಕಳೆದ ವರ್ಷದ ಐಪಿಎಲ್ನಲ್ಲಿ ಸೂರ್ಯಕುಮಾರ್ ಅವರು ನಿರೀಕ್ಷಿತ ಪ್ರದರ್ಶನ ತೋರದಿದ್ದರೂ ಕೂಡ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ರೋಹಿತ್ ಪ್ರಮುಖ ಕಾರಣ. ಟೀಮ್ ಇಂಡಿಯಾ ಪರ ಫಾರ್ಮ್ ಕಳೆದುಕೊಂಡಲಾಗಲು ಸೂರ್ಯ ಅವರ ಬೆಂಬಲಕ್ಕೆ ರೋಹಿತ್ ನಿಂತಿದ್ದರು. ಇದೀಗ ಅವರ ನೆಚ್ಚಿನ ನಾಯಕನನ್ನು ಈ ಸ್ಥಾನದಿಂದ ಕೆಳಗಿಳಿಸಿರುವುದು ಅವರಿಗೆ ಬೇಸರ ತಂದಂತಿದೆ. ಇದೇ ಕಾರಣಕ್ಕೆ ಅವರು ಒಡೆದು ಹೋದ ಹೃದಯದ ಎಮೊಜಿ ಹಾಕಿ ತನ್ನ ನೋವನ್ನು ವ್ಯಕ್ತಪಡಿಸಿದಂತಿದೆ.