ಲಂಡನ್: ಟಿ20 ವಿಶ್ವಕಪ್(T20 World Cup 2024) ಟೂರ್ನಿ ಮುಕ್ತಾಯ ಕಂಡಿದ್ದರೂ ಕೂಡ ಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್(Suryakumar Yadav Catch) ಅವರು ಹಿಡಿದ ಕ್ಯಾಚ್ ಬಗೆಗಿನ ಚರ್ಚೆಗಳು ಮುಗಿದಂತೆ ಕಾಣುತ್ತಿಲ್ಲ. ಬೌಂಡರಿ ಲೈನ್ಗೆ ಬಳಸುವ ಕುಶನ್ ಹಿಂದಕ್ಕೆ ತಳ್ಳಲಾಗಿತ್ತು. ಭಾರತದ ಬೌಲಿಂಗ್ ವೇಳೆ ಬೇಕಂತಲೇ ಕುಶನ್ ಹಿಂದಕ್ಕೆ ದೂಡಲಾಗಿತ್ತು, ಸೂರ್ಯಕುಮಾರ್(Suryakumar Yadav) ಅವರು ಬೌಂಡರಿ ಗೆರೆಯನ್ನು ತುಳಿದಿದ್ದಾರೆ ಎನ್ನಲಾದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೀಗ ಭಾರತ ಗೆದ್ದಿರುವ ಟಿ20 ವಿಶ್ವಕಪ್ ವಾಪಸ್ ಕೊಡಬೇಕಾ? ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ಜೂನ್ 29, ಶನಿವಾರ ರಾತ್ರಿ ನಡೆದಿದ್ದ ಅತ್ಯಂತ ರೋಚಕ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ ಅಂತರದ ಗೆಲುವು ಸಾಧಿಸಿ 13 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಬರವನ್ನು ನೀಗಿಸಿತ್ತು.
ಕೊನೆಯ ಓವರ್ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತವನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ನತ್ತ ಬಾರಿಸಿದ್ದರು. ಬೌಂಡರಿ ಲೈನ್ ನಲ್ಲಿದ್ದ ಸೂರ್ಯ ಕುಮಾರ್ ಯಾದವ್ ಯಾರೂ ಊಹಿಸದಂತೆ ಸಾಹಸಮಯ ಅಮೋಘ ಕ್ಯಾಚ್ ಪಡೆದರು. 21 ರನ್ ಗಳಿಸಿದ್ದ ಡೇವಿಡ್ ಮಿಲ್ಲರ್ ವಿಕೆಟ್ ಕೈಚೆಲ್ಲಿದರು. ಮಿಲ್ಲರ್ ಔಟ್ ಆಗುತ್ತಿದ್ದಂತೆ ಭಾರತದ ಗೆಲುವು ಕೂಡ ಖಚಿತಗೊಂಡಿತು.
ಇದನ್ನೂ ಓದಿ Suryakumar Yadav : ವಿಶ್ವ ಕಪ್ ಟ್ರೋಫಿಯನ್ನು ಬೆಡ್ ಮಧ್ಯದಲ್ಲಿಟ್ಟು ನಿದ್ದೆ ಮಾಡಿದ ಸೂರ್ಯಕುಮಾರ್ ದಂಪತಿ!
ಕ್ಯಾಚ್ನ ವಿಡಿಯೊವನ್ನು ಟ್ವಿಟರ್ ಎಕ್ಸ್ನಲ್ಲಿ ಹಂಚಿಕೊಂಡಿದ್ದ ದಕ್ಷಿಣ ಆಫ್ರಿಕಾದ ನೆಟ್ಟಿಗರು, ಅಂಪೈರ್ಗಳು ಈ ವಿಡಿಯೊವನ್ನು ಸೂಕ್ಷವಾಗಿ ಗಮನಿಸುವ ಅಗತ್ಯವಿದೆ. ಸೂರ್ಯಕುಮಾರ್ ಅವರ ಕಾಲುಗಳು ಬೌಂಡರಿ ಲೈನ್ಗ ಕೆಳ ಭಾಗದ ಪಟ್ಟಿಗೆ ತಾಗಿರುವುದು ಕಂಡು ಬಂದಿದೆ. ಹೀಗಾಗಿ ಇದು ಔಟ್ ಅಲ್ಲ ಸಿಕ್ಸ್ ಎಂದು ಆಕ್ರೋಶ ಹೊರಹಾಕಿದ್ದರು. ಇದಾದ ಬಳಿಕ ಭಾರತದ ಬೌಲಿಂಗ್ ವೇಳೆ ಬೇಕಂತಲೇ ಕುಶನ್ ಹಿಂದಕ್ಕೆ ದೂಡಲಾಗಿತ್ತು ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಒಂದು ವೇಳೆ ಕುಶನ್ ನಿಗದಿತ ಸ್ಥಳದಲ್ಲಿ ಇದ್ದರೆ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸುತ್ತಿತ್ತು ಎಂದು ಹಲವರು ವಾದಿಸುತ್ತಿದ್ದಾರೆ. ಇದಕ್ಕೆ ಇದೀಗ ಸ್ಪಷ್ಟನೆಯೊಂದು ಸಿಕ್ಕಿದೆ.
ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞ ರಜನೀಶ್ ಗುಪ್ತಾ ಎಂಬವರು ಸೂರ್ಯಕುಮಾರ್ ಕ್ಯಾಚ್ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. “ನಾನು ಅಂದು ಮೈದಾನದ ಟಿವಿ ಕಾಮೆಂಟರಿ ಬಾಕ್ಸ್‌ನಲ್ಲಿದ್ದೆ. ಬಿಳಿ ಗೆರೆಯು ಬೌಂಡರಿಯಾಗಿರಲಿಲ್ಲ ಎಂದು ನಾನು ಹೇಳಬಲ್ಲೆ. ಏಕೆಂದರೆ ಬೌಂಡರಿ ರೋಪ್ ವೆಡ್ಜ್ ಆ ಬಿಳಿ ಗೆರೆಯ ಹಿಂದೆ ಇತ್ತು. ಪಂದ್ಯದ ಆರಂಭದಿಂದಲೂ ಹಾಗೆಯೇ ಇತ್ತು. ಪಿಚ್ ಅನ್ನು ಬದಲಾಯಿಸಿದಾಗ, ಬೌಂಡರಿಗಳನ್ನು ಸರಿಹೊಂದಿಸಲಾಗುತ್ತದೆ. ಹೀಗಾಗಿ ಈ ಬಗ್ಗೆ ಚರ್ಚೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದಿದ್ದಾರೆ.