ಮೌಂಟ್ ಮಾಂಗ್ನುಯಿ : ನ್ಯೂಜಿಲ್ಯಾಂಡ್ ವಿರುದ್ಧದ ಟಿ೨೦ ಸರಣಿಯ ಎರಡನೇ ಪಂದ್ಯದಲ್ಲಿ ಸ್ಫೋಟಕ ಶತಕ ಬಾರಿಸಿದ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್, ಈ ಇನಿಂಗ್ಸ್ ಮೂಲಕ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಅವರ ದಾಖಲೆಯೊಂದನ್ನು ಮುರಿದಿದ್ದಾರೆ. ಹಾಲಿ ಕ್ಯಾಲೆಂಡರ್ ವರ್ಷದಲ್ಲಿ ಸೂರ್ಯಕುಮಾರ್ ಯಾದವ್ ಅವರ ೧೧ನೇ ಅರ್ಧ ಶತಕವಾಗಿದ್ದು, ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದುವರೆಗೆ ಈ ದಾಖಲೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಅವರ ಹೆಸರಿನಲ್ಲಿತ್ತು. ಅವರು ೧೦ ಅರ್ಧ ಶತಕಗಳನ್ನು ಬಾರಿಸಿದ್ದರು.
ಇದೇ ವೇಳೆ ಸೂರ್ಯಕುಮಾರ್ ಯಾದವ್ ಅವರು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಅವರ ದಾಖಲೆಯೊಂದನ್ನೂ ಸರಿಗಟ್ಟಿದ್ದಾರೆ. ರೋಹಿತ್ ಶರ್ಮ ಅವರು ೨೦೧೮ರಲ್ಲಿ ಟಿ೨೦ ಮಾದರಿಯಲ್ಲಿ ಎರಡು ಅರ್ಧ ಶತಕಗಳನ್ನು ಬಾರಿಸಿದ್ದರು. ಇದೀಗ ಸೂರ್ಯಕುಮಾರ್ ಅವರೂ ಅದೇ ಮಾದರಿಯ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಸೂರ್ಯಕುಮಾರ್ ಮೊದಲ ಶತಕ ಬಾರಿಸಿದ್ದರೆ ಇದೀಗ ಎರಡನೇ ಅರ್ಧ ಶತಕ ತಮ್ಮದಾಗಿಸಿಕೊಂಡರು.
ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ಮಾಡಿದ ಸೂರ್ಯಕುಮಾರ್ ಅವರು ಮೊದಲ ೩೨ ಎಸೆಗಳಲ್ಲಿ ೫೦ ರನ್ ಬಾರಿಸಿದ್ದರೆ ನಂತರದ ೧೯ ಎಸೆತಗಳಲ್ಲಿ ೬೧ ರನ್ ಚಚ್ಚಿದ್ದರು. ಈ ಮೂಲಕ ಅವರು ಕ್ರಿಕೆಟ್ ಅಭಿಮಾನಿಗಳಿಗೆ ಫೋರ್, ಸಿಕ್ಸರ್‌ಗಳ ರಸದೌತಣ ಉಣಬಡಿಸಿದರು.
ಇದನ್ನೂ ಓದಿ | INDvsNZ | ಮಿನುಗಿದ ಸೂರ್ಯ, ಹೂಡಾ, ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ 65 ರನ್ ಜಯ