ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ರಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತನ್ನ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ (SuryaKumar Yadav) ಅವರ ಸೇವೆಗಳನ್ನು ಇನ್ನೂ ಕೆಲವು ಪಂದ್ಯಗಳಿಗೆ ಕಳೆದುಕೊಳ್ಳಬಹುದು. ಬಲಗೈ ಬ್ಯಾಟ್ಸ್ಮನ್ ಕಳೆದ ವರ್ಷ ಡಿಸೆಂಬರ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ 20 ಐ (T20 Cricket) ಶತಕ ಗಳಿಸಿದ ನಂತರ ಸ್ಪರ್ಧಾತ್ಮಕ ಪಂದ್ಯವನ್ನು ಆಡಿಲ್ಲ. ಅವರು ಸ್ಪೋರ್ಟ್ಸ್ ಹರ್ನಿಯಾ (Sports Hernia) ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಸಂಪೂರ್ಣ ಗುಣವಾಗಿಲ್ಲ. ಅವರ ಅಲಭ್ಯತೆಗೆ ಮುಂಬಯಿ ಇಂಡಿಯನ್ಸ್ ತಂಡಕ್ಕೆ ಹಿನ್ನಡೆ ಉಂಟು ಮಾಡಿದೆ. ಆ ತಂಡ ಈಗಾಗಲೇ ಎರಡು ಪಂದ್ಯಗಳನ್ನು ಸೋತಿದೆ.
Suryakumar Yadav might miss a few more games to get match fit for Mumbai Indians. [PTI] pic.twitter.com/fxoanyhErJ
— Johns. (@CricCrazyJohns) March 28, 2024
ಸೂರ್ಯ ಕುಮಾರ್ ಕ್ರೀಡಾ ಹರ್ನಿಯಾ ಸಮಸ್ಯೆ ಒಳಗಾಗುವ ಮೊದಲು ಪಾದದ ಗಾಯದಿಂದ ಬಳಲುತ್ತಿದ್ದರು. ಎರಡೂ ಗಾಯಗಳಿಗೆ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಪಾದದ ಗಾಯದ ಶಸ್ತ್ರಚಿಕಿತ್ಸೆಯ ನಂತರ, ಅವರು ಜನವರಿಯಲ್ಲಿ ಮ್ಯೂನಿಚ್ನಲ್ಲಿ ತಮ್ಮ ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.
ಸೂರ್ಯಕುಮಾರ್ ಯಾದವ್ ಕಳೆದ ತಿಂಗಳು ಡಿವೈ ಪಾಟೀಲ್ ಟಿ 20 ಕಪ್ ಮೂಲಕ ಆಡಲು ಯೋಜಿಸುತ್ತಿದ್ದರೂ ಬಿಸಿಸಿಐನ ವೈದ್ಯಕೀಯ ತಂಡದಿಂದ ಅವರಿಗೆ ಅನುಮತಿ ಸಿಗಲಿಲ್ಲ. ಐಪಿಎಲ್ 2024 ಪ್ರಾರಂಭವಾಗುವ ಮೊದಲು, ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಫಿಟ್ನೆಸ್ ಪರೀಕ್ಷೆಗೆ ಒಳಗಾಗಿದ್ದರು. ಆದರೆ ಮತ್ತೊಮ್ಮೆ ಮರಳಲು ಅನುಮತಿ ಪಡೆಯಲು ವಿಫಲಗೊಂಡರು.
ಹೆಚ್ಚಿನ ಪಂದ್ಯಗಳಿಂದ ಹೊರಕ್ಕೆ
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಸೂರ್ಯಕುಮಾರ್ ಯಾದವ್ ಸ್ಪೋರ್ಟ್ಸ್ ಹರ್ನಿಯಾ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಲಬೇಕಾಗಿರುವುದರಿಂದ ಇನ್ನೂ ಕೆಲವು ಐಪಿಎಲ್ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಅವರ ಪ್ರಗತಿಯನ್ನು ಪ್ರಸ್ತುತ ಎನ್ಸಿಎ ಮೇಲ್ವಿಚಾರಣೆ ಮಾಡುತ್ತಿದೆ. ಬ್ಯಾಟರ್ನೊಂದಿಗೆ ಬಿಸಿಸಿಐನ ಎಚ್ಚರಿಕೆಯ ನೀತಿಯನ್ನು ಅನುರಿಸುತ್ತಿದೆ. ಕಾರಣವೆಂದರೆ ಮುಂಬರುವ ಟಿ 20 ವಿಶ್ವಕಪ್. ಸೂರ್ಯಕುಮಾರ್ ಯಾದವ್ ಟಿ 20 ಐ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರು. ಬಿಸಿಸಿಐ ಅವರ ಫಿಟ್ನೆಸ್ ಅನ್ನು ಅಪಾಯಕ್ಕೆ ತಳ್ಳಲು ಮುಂದಾಗಿಲ್ಲ.
ಇದನ್ನೂ ಓದಿ: Hardik Pandya : ಹೈದರಾಬಾದ್ನಲ್ಲೂ ಪಾಂಡ್ಯಗೆ ಕಾಟ ಕೊಟ್ಟ ಕ್ರಿಕೆಟ್ ಪ್ರೇಕ್ಷಕರು
“ಸೂರ್ಯ ಉತ್ತಮ ಪ್ರಗತಿ ಸಾಧಿಸುತ್ತಿದ್ದಾರೆ. ಶೀಘ್ರದಲ್ಲೇ ಅವರು ಮುಂಬೈ ಇಂಡಿಯನ್ಸ್ ಪರ ಆಡಲು ಮರಳಲಿದ್ದಾರೆ. ಆದಾಗ್ಯೂ, ಮೊದಲ ಎರಡು ಪಂದ್ಯಗಳನ್ನು ತಪ್ಪಿಸಿಕೊಂಡಿರುವ ಅವರು ಇನ್ನೂ ಕೆಲವು ಪಂದ್ಯಗಳಿಗೆ ಹೊರಗುಳಿಯಬೇಕಾಗಬಹುದು,” ಎಂದು ಬಿಸಿಸಿಐ ಮೂಲವೊಂದು ಸುದ್ದಿ ಸಂಸ್ಥೆಗೆ ತಿಳಿಸಿದೆ.
“ಬಿಸಿಸಿಐಗೆ ವಿಶ್ವ ಟಿ 20 ಗೆ ಹಾದಿಯಲ್ಲಿದ್ದಾರೆಯೇ ಎಂಬುದು ಮುಖ್ಯ ಕಾಳಜಿಯಾಗಿದೆ. ನಿಸ್ಸಂಶಯವಾಗಿ ಅವರು ಎಂಐ ಪರ ಆಡುತ್ತಾರೆ. ಆದರೆ ಕ್ರೀಡಾ ಹರ್ನಿಯಾ ಶಸ್ತ್ರಚಿಕಿತ್ಸೆಯ ನಂತರ, ಅವರನ್ನು ತರಾತುರಿಯಲ್ಲಿ ಮೈದಾನಕ್ಕೆ ಇಳಿದಿಲ್ಲ ಎನ್ನಲಾಗಿದೆ, “ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ವಿಶ್ವದ ಅಗ್ರ ಶ್ರೇಯಾಂಕದ ಟಿ 20 ಐ ಬ್ಯಾಟರ್ ಸೂರ್ಯಕುಮಾರ್ ಯಾದವ್ ಐಪಿಎಲ್ 2024 ರಲ್ಲಿ ಮುಂಬೈನ ಎರಡೂ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. ಅವರ ಅನುಪಸ್ಥಿತಿಯಲ್ಲಿ, ಮುಂಬೈ ಎರಡೂ ಪಂದ್ಯಗಳನ್ನು ಸೋತಿದೆ. ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಭಾರತ ಮುಂದಿನ ಸೋಮವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ.