ನಾಗ್ಪುರ : ಬುಮ್ರಾ ಕಣಕ್ಕೆ ಇಳಿಯುವುದಕ್ಕೆ ಸಜ್ಜಾಗಿದ್ದಾರೆ. ಆತಂಕ ಬೇಡ ಎಂದು ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ. ಈ ಮೂಲಕ ಭಾರತ ತಂಡದ ಬೌಲಿಂಗ್ ವಿಭಾಗ ದುರ್ಬಲವಾಗುತ್ತಿದೆ ಎಂಬ ಅಭಿಮಾನಿಗಳ ಆತಂಕವನ್ನು ಕಡಿಮೆ ಮಾಡಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲಿದ್ದ ಸೂರ್ಯಕುಮಾರ್ ಯಾದವ್ ಅವರು ಬೆನ್ನು ನೋವಿನ ಸಮಸ್ಯೆಯಿಂದ ಗುಣಮುಖರಾಗಿದ್ದರೂ, ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಪಾಲ್ಗೊಂಡಿರಲಿಲ್ಲ. ಹೀಗಾಗಿ ಡೆತ್ ಓವರ್‌ಗಳಲ್ಲಿ ಟೀಮ್ ಇಂಡಿಯಾ ನಿಖರ ದಾಳಿ ಸಂಘಟಿಸುವಲ್ಲಿ ಎಡವಿತ್ತು. ಈ ಸೋಲಿನ ಕಾರಣಕ್ಕೆ ಭಾರತದ ಬೌಲಿಂಗ್ ವಿಭಾಗದ ದುರ್ಬಲವಾಗುತ್ತಿದೆ ಎಂಬ ಚರ್ಚೆ ನಡೆಯುತ್ತಿದೆ.
ಬುಮ್ರಾ ಅವರು ಗಾಯದ ಸಮಸ್ಯೆಯಿಂದ ಹೊರಕ್ಕೆ ಬಂದಿದ್ದರೂ, ವಿಶ್ವ ಕಪ್ ಹಿನ್ನೆಲೆಯಲ್ಲಿ ಅವರಿಗೆ ಇನ್ನಷ್ಟು ವಿಶ್ರಾಂತಿ ನೀಡಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಬಯಸಿತ್ತು. ಅವರ ಅಲಭ್ಯತೆ ಪಂದ್ಯದ ಫಲಿತಾಂಶದಲ್ಲಿ ಪ್ರಕಟಗೊಂಡಿತ್ತು. ಈ ಪ್ರಶ್ನೆಯನ್ನು ಸೂರ್ಯಕುಮಾರ್ ಯಾದವ್ ಅವರಿಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ್ದು, ಅದಕ್ಕವರು ಎಲ್ಲವೂ ಸರಿಯಾಗಿದೆ. ಅವರು ಸದ್ಯದಲ್ಲೇ ಬಂದು ಚೆಂಡೆಸೆಯಲಿದ್ದಾರೆ ಎಂದು ಹೇಳಿದರು.
“ಬುಮ್ರಾ ಅವರ ಫಿಟ್ನೆಸ್ ವಿಚಾರ ನನಗೆ ಸಂಬಂಧಪಟ್ಟಿದ್ದಲ್ಲ. ಅದು ನನ್ನ ಡಿಪಾರ್ಟ್‌ಮೆಂಟ್ ಕೂಡ ಅಲ್ಲ. ಫಿಸಿಯೊಗಳು ಹಾಗೂ ಮ್ಯಾನೇಜ್ಮೆಂಟ್ ಉತ್ತರ ಕೊಡುತ್ತದೆ,” ಎಂದು ಸೂರ್ಯಕುಮಾರ್ ಹೇಳಿದರು.
“ನಮ್ಮ ತಂಡದೊಳಗಿನ ವಾತಾವರಣ ಉತ್ತಮವಾಗಿದೆ. ಬುಮ್ರಾ ಕೂಡ ಎರಡನೇ ಪಂದ್ಯಕ್ಕೆ ಸಜ್ಜಾಗಿದ್ದಾರೆ. ಅವರು ಆಡುವುದಕ್ಕೆ ಸಿದ್ಧರಿದ್ದಾರೆ,” ಎಂದು ಅವರು ಹೇಳಿದರು.
“ಹಿಂದಿನ ಪಂದ್ಯದಲ್ಲಿ ನಾವು ಚೆನ್ನಾಗಿಯೇ ಆಡಿದೆವು. ಆದರೆ, ಇಬ್ಬನಿ ಪರಿಣಾಮ ಹೆಚ್ಚಾಗಿತ್ತು. ಎಲ್ಲದಕ್ಕಿಂತ ಮಿಗಿಲಾಗಿ ಎದುರಾಳಿ ಆಸ್ಟ್ರೇಲಿಯಾ ತಂಡ ಆಕ್ರಮಣಕಾರಿ ಭಾವದಿಂದ ಆಡಿತು. ಹೀಗಾಗಿ ಗೆಲುವು ಅವರದ್ದಾಯಿತು,” ಸೂರ್ಯಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ | IND vs PAK | ಕೊಹ್ಲಿಯನ್ನು ನೋಡಿ ಕಲಿಯಿರಿ ಎಂದು ಸೂರ್ಯಕುಮಾರ್ ಮತ್ತು ಪಂತ್‌ಗೆ ಪಾಠ ಹೇಳಿದ ಗಂಭೀರ್