Site icon Vistara News

Suryakumar Yadav: ಕಾಪು ಮಾರಿಗುಡಿಗೆ ಭೇಟಿ ನೀಡಿ ಹರಕೆ ತೀರಿಸಿದ ಸೂರ್ಯಕುಮಾರ್ ದಂಪತಿ

Suryakumar Yadav

Suryakumar Yadav: Surya Kumar Yadav with his wife Devisha Shetty visited kapu marigudi temple

ಉಡುಪಿ: ಟೀಮ್​ ಇಂಡಿಯಾದ ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಯಾದವ್(Suryakumar Yadav)​ ಮತ್ತು ಅವರ ಪತ್ನಿ ದಿವೀಶಾ ಶೆಟ್ಟಿ(Devisha Shetty) ಉಡುಪಿ ಜಿಲ್ಲೆಯ ಕಾಪು ಮಾರಿಗುಡಿ(kapu marigudi) ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ತಮ್ಮ ಹರಕೆ ತೀರಿಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ. ಸೋಮವಾರ ಮಂಗಳೂರಿಗೆ ಆಗಮಿಸಿದ್ದ ಸೂರ್ಯ ಮತ್ತು ದಿವೀಶಾ ಶೆಟ್ಟಿ ವಿಮಾನ ನಿಲ್ದಾಣದಲ್ಲಿ ಕೇಕ್‌ ಕತ್ತರಿಸಿ ತಮ್ಮ, 8ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿದ್ದರು. ಮಂಗಳವಾರ ಉಡುಪಿಗೆ ಭೇಟಿ ನೀಡಿದ್ದಾರೆ.

ಸೂರ್ಯಕುಮಾರ್‌ ಯಾದವ್‌ ಅವರ ಪತ್ನಿ ದೀವಿಶಾ ಶೆಟ್ಟಿ ಅವರು ಕರಾವಳಿ ಮೂಲದವರಾಗಿದ್ದು, ಚೆನ್ನಾಗಿ ತುಳು ಮಾತಾಡುತ್ತಾರೆ. ಕಾಪು ಮಾರಿಗುಡಿಯಲ್ಲಿಯೂ ಇಲ್ಲಿನ ಅರ್ಚಕರ ಜತೆ ತುಳುವಿನಲ್ಲಿಯೇ ಮಾತನಾಡಿದ್ದು ವಿಡಿಯೊದಲ್ಲಿ ಕಾಣಬಹುದಾಗಿದೆ. ಮಲ್ಲಿಗೆ ಹೂವಿನ ಮಾಲೆಯನ್ನು ನೀಡಿ ತಮ್ಮ ಹರೆಕೆಯನ್ನು ತೀರಿಸಿಕೊಂಡರು. ಸೂರ್ಯಕುಮಾರ್​ ಕೂಡ ಈ ಹಿಂದೆ ತುಳುವಿನಲ್ಲಿ ಮಾತನಾಡುವ ವೀಡಿಯೊ ವೈರಲ್‌ ಆಗಿತ್ತು. ಒಟ್ಟಾರೆ ತುಳುನಾಡಿದ ನಂಟನ್ನು ದೀವಿಶಾ ಶೆಟ್ಟಿ ಇನ್ನೂ ಕೂಡ ಮುಂದುವರಿಸಿದ್ದಾರೆ.


ನೂತನವಾಗಿ ನಿರ್ಮಾಣವಾಗುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ನಿರ್ಮಾಣ, ಕೆತ್ತನೆ ಶಿಲ್ಪಕಲೆಯ ಬಗ್ಗೆ ಸೂರ್ಯಕುಮಾರ್ ಮಾಹಿತಿ ಪಡೆದರು. ಸುಮಾರು 40 ಕೋಟಿ ರುಪಾಯಿ ವೆಚ್ಚದಲ್ಲಿ ಇಳಕಲ್ ಶಿಲೆಯಲ್ಲಿ ಈ ದೇವಸ್ತಾನ ನಿರ್ಮಾಣವಾಗುತ್ತಿದೆ. ಗರ್ಭಗುಡಿ, ಉಚ್ಚಂಗಿ ಗುಡಿ, ಸುತ್ತುಪೌಳಿ ಕಾಮಗಾರಿ ಶೇ.90 ಪೂರ್ಣಗೊಂಡಿದೆ.

ಇದನ್ನೂ ಓದಿ Suryakumar Yadav: 8 ವರ್ಷಗಳ ಹಿಂದೆಯೇ ಅದ್ಭುತ ಕ್ಯಾಚ್​ ಹಿಡಿದೆ ಎಂದು ವಿವಾಹ ವಾರ್ಷಿಕೋತ್ಸವ ಆಚರಿಸಿದ ಸೂರ್ಯಕುಮಾರ್

ಜೂನ್ 29 ರಂದು ಬಾರ್ಬಡೋಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸೂರ್ಯಕುಮಾರ್​ ಯಾದವ್ ಅದ್ಭುತ ಕ್ಯಾಚ್​ ಹಿಡಿದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೇ ಕ್ಯಾಚ್​ ಅನ್ನು ಸೂರ್ಯಕುಮಾರ್ ತಮ್ಮ ವಿವಾಹ ವಾರ್ಷಿಕೋತ್ಸ ಆಚರಣೆಯ ವೇಳೆಯೂ ಬಳಸಿಕೊಂಡಿದ್ದಾರೆ. ‘ಆ ಕ್ಯಾಚ್‌ ಹಿಡಿದು 8 ದಿನಗಗಳು ಕಳೆದಿವೆ. ಆದರೆ ನನ್ನ ಪ್ರಮುಖ ಕ್ಯಾಚ್ 8 ವರ್ಷಗಳ ಹಿಂದೆ ಹಿಡಿದದ್ದು!’ ಎಂದು ಬರೆದುಕೊಳ್ಳುವ ಮೂಲಕ ಪತ್ನಿಗೆ ವಿವಾಹ ವಾರ್ಷಿಕೋತ್ಸದ ಶುಭ ಹಾರೈಸಿದ್ದರು.

ಕೊನೆಯ ಓವರ್​ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತವನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ನತ್ತ ಬಾರಿಸಿದ್ದರು. ಬೌಂಡರಿ ಲೈನ್ ನಲ್ಲಿದ್ದ ಸೂರ್ಯ ಕುಮಾರ್ ಯಾದವ್ ಯಾರೂ ಊಹಿಸದಂತೆ ಸಾಹಸಮಯ ಅಮೋಘ ಕ್ಯಾಚ್ ಪಡೆದರು. 21 ರನ್ ಗಳಿಸಿದ್ದ ಡೇವಿಡ್​ ಮಿಲ್ಲರ್ ವಿಕೆಟ್​ ಕೈಚೆಲ್ಲಿದರು. ಮಿಲ್ಲರ್​ ಔಟ್​ ಆಗುತ್ತಿದ್ದಂತೆ ಭಾರತದ ಗೆಲುವು ಕೂಡ ಖಚಿತಗೊಂಡಿತ್ತು. ಸೂರ್ಯ ಈ ಕ್ಯಾಚ್​ ಹಿಡಿಯದೇ ಹೋಗಿದ್ದರೆ ಭಾರತ ಸೋಲುವ ಸಾಧ್ಯತೆಯೂ ಅಧಿಕವಾಗಿತ್ತು.

Exit mobile version