Site icon Vistara News

Suryakumar Yadav: ಶಸ್ತ್ರಚಿಕಿತ್ಸೆಗೆ ಒಳಗಾದ ಸೂರ್ಯಕುಮಾರ್; ಚೇತರಿಕೆಗೆ ಕನಿಷ್ಠ 9 ವಾರದ ಅಗತ್ಯ

Suryakumar Yadav undergoes groin surgery

ಮುಂಬಯಿ: ದಕ್ಷಿಣ ಆಫ್ರಿಕಾ ಟಿ20 ಸರಣಿಯ ಪ್ರವಾಸದ ವೇಳೆ ಎಡ ಪಾದದ ನೋವಿಗೆ ಸಿಲುಕಿದ್ದ ಟೀಮ್​ ಇಂಡಿಯಾದ ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಯಾದವ್​ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಒಂದುವರೆ ತಿಂಗಳ ವಿಶ್ರಾಂತಿ ಪಡೆಯಬೇಕಾದ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಸೂರ್ಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಫೋಟೊವನ್ನು ಬಿಸಿಸಿಐ(BCCI) ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡು ಶೀಘ್ರಗುಣಮುಖರಾಗಿ ಎಂದು ಹಾರೈಸಿದೆ.

“ನನ್ನ ಆರೋಗ್ಯ ಚೇತರಿಕೆಗೆ ಹಾರೈಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಮತ್ತು ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ” ಎಂದು ಸೂರ್ಯಕುಮಾರ್​ ತನ್ನ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಚೇತರಿಕೆ ಕಂಡ ಬಳಿಕ ರಿಹ್ಯಾಬ್‌ಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ತೆರಳಿದ ನಂತರವೇ ಸೂರ್ಯಕುಮಾರ್​ ತಂಡ ವಾಪಸಾತಿಯ ನಿಖರವಾದ ಸಮಯ ತಿಳಿಯಲಿದೆ.


ಸೂರ್ಯಕುಮಾರ್​ ಯಾದವ್ ಅವರ ವಿಷಯದಲ್ಲಿ ಅವರು ಚೇರಿಕೆಗೆ ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಅವರ ಹರ್ನಿಯಾ ಶಸ್ತ್ರಚಿಕಿತ್ಸೆಯ ಬಳಿಕ ಅವರು ತರಬೇತಿಯನ್ನು ಪ್ರಾರಂಭಿಸಲು ಎಂಟು-ಒಂಬತ್ತು ವಾರಗಳವರೆಗೆ ತೆಗೆದುಕೊಳ್ಳಬಹುದು. ಐಪಿಎಲ್ ಸಮಯದಲ್ಲಿ ಅವರು ಫಿಟ್ ಆಗುವ ಸಾಧ್ಯತೆ ಇದೆ. ಆದರೆ ಟಿ20 ವಿಶ್ವಕಪ್​ ಕೂಡ ಇರುವುದರಿಂದ ಅವರಿಗೆ ಬಿಸಿಸಿಐ ಪೂರ್ಣ ಪ್ರಮಾಣದಲ್ಲಿ ಐಪಿಎಲ್​ ಆಡಲು ಅನುಮತಿ ನೀಡುವುದು ಕೂಡ ಅನುಮಾನ ಎನ್ನಲಾಗಿದೆ.


ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯ ಎಡ ಪಾದದ ನೋವಿಗೆ ಸಿಲುಕಿದ್ದರು. ಗಾಯದ ಬಳಿಕ ಸ್ಟಿಕ್​ನಲ್ಲಿ ನಡೆದಾಡುದ ವಿಡಿಯೊವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದರು. “ಗಾಯಗಳು ಎಂದಿಗೂ ವಿನೋದಮಯವಾಗಿರುವುದಿಲ್ಲ, ಆದರೆ ನಾನು ಅದನ್ನು ನನ್ನ ಹೆಜ್ಜೆಯಲ್ಲಿ ತೆಗೆದುಕೊಳ್ಳುತ್ತೇನೆ ಮತ್ತು ಯಾವುದೇ ಸಮಯದಲ್ಲಿ ಹಿಂತಿರುಗಿ, ಸಂಪೂರ್ಣವಾಗಿ ಫಿಟ್ ಆಗುತ್ತೇನೆ ಎಂದು ಭರವಸೆ ನೀಡುತ್ತೇನೆ! ಅಲ್ಲಿಯವರೆಗೆ, ನೀವೆಲ್ಲರೂ ರಜಾದಿನವನ್ನು ಆನಂದಿಸುತ್ತಿದ್ದೀರಿ ಮತ್ತು ಪ್ರತಿದಿನ ಸ್ವಲ್ಪ ಸಂತೋಷವನ್ನು ಕಂಡುಕೊಳ್ಳುತ್ತಿದ್ದೀರಿ ಎಂದು ಭಾವಿಸುತ್ತೇವೆ” ಎಂದು ಸೂರ್ಯಕುಮಾರ್​ ಬರೆದುಕೊಂಡಿದ್ದರು.

ಒಡೆದ ಹೃದಯದ ಎಮೋಜಿ ಹಾಕಿದ್ದ ಸೂರ್ಯಕುಮಾರ್


ರೋಹಿತ್​ ಶರ್ಮ ಅವರನ್ನು ಮುಂಬೈ ಇಂಡಿಯನ್ಸ್​(Mumbai Indians Captain) ತಂಡದ ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್​ ಪಾಂಡ್ಯಗೆ ನಾಯಕತ್ವ ನೀಡಿದ ಮರು ದಿನವೇ ಸೂರ್ಯಕುಮಾರ್ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಒಡೆದು ಹೋದ ಹೃದಯದ ಫೋಟೊವನ್ನು ಶೇರ್​ ಮಾಡಿ ಬೇಸರ ವ್ಯಕ್ತಪಡಿಸಿದ್ದರು.

ರೋಹಿತ್​ ಮತ್ತು ಸೂರ್ಯಕುಮಾರ್​​ ನಡುವೆ ಉತ್ತಮ ಬಾಂಧವ್ಯ ಇದೆ. ಈ ವಿಚಾರ ಎಲ್ಲರಿಗೂ ತಿಳಿದಿದೆ. ಕಳೆದ ವರ್ಷದ ಐಪಿಎಲ್​ನಲ್ಲಿ ಸೂರ್ಯಕುಮಾರ್​ ಅವರು ನಿರೀಕ್ಷಿತ ಪ್ರದರ್ಶನ ತೋರದಿದ್ದರೂ ಕೂಡ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ರೋಹಿತ್​ ಪ್ರಮುಖ ಕಾರಣ. ಟೀಮ್​ ಇಂಡಿಯಾ ಪರ ಫಾರ್ಮ್​ ಕಳೆದುಕೊಂಡಲಾಗಲು ಸೂರ್ಯ ಅವರ ಬೆಂಬಲಕ್ಕೆ ರೋಹಿತ್ ನಿಂತಿದ್ದರು. ಇದೀಗ ಅವರ ನೆಚ್ಚಿನ ನಾಯಕನನ್ನು ಈ ಸ್ಥಾನದಿಂದ ಕೆಳಗಿಳಿಸಿರುವುದು ಅವರಿಗೆ ಬೇಸರ ತಂದಂತಿದೆ. ಇದೇ ಕಾರಣಕ್ಕೆ ಅವರು ಒಡೆದು ಹೋದ ಹೃದಯದ ಎಮೊಜಿ ಹಾಕಿ ತನ್ನ ನೋವನ್ನು ವ್ಯಕ್ತಪಡಿಸಿದಂತಿತ್ತು.

Exit mobile version