ತಿರುಪತಿ: ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ತಮ್ಮ ಪತ್ನಿ ದೇವಿಶಾ ಶೆಟ್ಟಿಯೊಂದಿಗೆ ಮಂಗಳವಾರ (ಫೆಬ್ರವರಿ 21)ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರನ ದರ್ಶನ ಮಾಡಿ ಆಶೀರ್ವಾದ ಪಡೆದರು.
ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿದ ಫೋಟೊವನ್ನು ಸೂರ್ಯಕುಮಾರ್ ಯಾದವ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಭಾರತ ತಂಡ ತಿರುವನಂತಪುರಂಗೆ ಹೋದಾಗಲೂ ಅನಂತ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ದಂಪತಿ ತೆರಳಿ ಪೂಜೆ ಸಲ್ಲಿಸಿದ್ದರು.
ತಿರುಪತಿ ತಿಮ್ಮಪ್ಪ ಎಂದೇ ಪ್ರಖ್ಯಾತವಾಗಿರುವ ಬಾಲಾಜಿಯ ದರ್ಶನ ಪಡೆದ ನಂತರ ತಿರುಮಲದ ರಂಗನಾಯಕ ಮಂಟಪದಲ್ಲಿ ವೈದಿಕರು ಆಶೀರ್ವಚನ ನೀಡಿದರು. ಬಳಿಕ ದೇಗುಲದ ಅಧಿಕಾರಿಗಳು ಸೂರ್ಯಕುಮಾರ್ ಯಾದವ್ ದಂಪತಿಗೆ ರೇಷ್ಮೆ ವಸ್ತ್ರವನ್ನು ನೀಡಿ ಗೌರವಿಸಿದರು.