Site icon Vistara News

Suryakumar Yadav | ರಣಜಿ ಪಂದ್ಯದಲ್ಲಿ ಆಡಲಿದ್ದಾರೆ ಸೂರ್ಯಕುಮಾರ್‌ ಯಾದವ್‌; ಯಾಕೆ ಗೊತ್ತೇ?

suryakumar yadav

ಮುಂಬಯಿ: ಟೀಮ್ ಇಂಡಿಯಾದ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಅವರು ಬಾಂಗ್ಲಾದೇಶ ವಿರುದ್ಧದ ಸರಣಿಯಿಂದ ರಜೆ ಪಡೆದಿದ್ದಾರೆ. ಅವರ ಅಲಭ್ಯತೆಯಿಂದಾಗಿ ಟೀಮ್ ಇಂಡಿಯಾದ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಸೊರಗುತ್ತಿದೆ ಎಂದು ಹೇಳಲಾಗುತ್ತಿದೆ. ಏತನ್ಮಧ್ಯೆ ರಜೆ ತೆಗೆದುಕೊಂಡಿರುವ ಸೂರ್ಯಕುಮಾರ್‌ ಯಾದವ್‌ ಅವರು ಸುಮ್ಮನೆ ಕುಳಿತಿಲ್ಲ. ಬದಲಾಗಿ ರಣಜಿ ಟ್ರೋಫಿ ಪಂದ್ಯದಲ್ಲಿ ಆಡಲು ಮುಂದಾಗಿದ್ದಾರೆ.

ಡಿಸೆಂಬರ್‌ ೨೦ರಿಂದ ಮುಂಬಯಿ ಹಾಗೂ ಹೈದರಾಬಾದ್‌ ತಂಡಗಳ ನಡುವೆ ರಣಜಿ ಟ್ರೋಫಿ ಪಂದ್ಯ ನಡೆಯಲಿದೆ. ಈ ಪಂದ್ಯ ಮುಂಬಯಿಗೆ ಎರಡನೇ ಹಣಾಹಣಿ. ಅ ಹೋರಾಟದಲ್ಲಿ ಸೂರ್ಯಕುಮಾರ್ ಆಡಲಿದ್ದಾರೆ ಎಂಬುದಾಗಿ ಮುಂಬಯಿ ತಂಡದ ಮೂಲಗಳು ತಿಳಿಸಿವೆ. ಅಲ್ಲದೆ, ತಮ್ಮ ಕ್ರಿಕೆಟ್‌ ಕೌಶಲವನ್ನು ಹೆಚ್ಚಿಸಲು ಅವರು ರಣಜಿ ಟ್ರೋಫಿಯಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

” ರಣಜಿ ಟ್ರೋಫಿ ಪಂದ್ಯಕ್ಕೆ ತಾವು ಲಭ್ಯವಾಗುವುದಾಗಿ ಸೂರ್ಯ ತಿಳಿಸಿದ್ದಾರೆ. ಆಯ್ಕೆ ಸಮಿತಿಯು ಇಂದು ಅಜಿಂಕ್ಯ ರಹಾನೆ ನೇತೃತ್ವದ ತಂಡವನ್ನು ಆಯ್ಕೆ ಮಾಡಿದೆ,” ಎಂದು ಎಂಸಿಎ ಗೌರವ ಕಾರ್ಯದರ್ಶಿ ಅಜಿಂಕ್ಯ ನಾಯಕ್ ಇಂಗ್ಲಿಷ್‌ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಸೂರ್ಯಕುಮಾರ್‌ ಯಾದವ್‌ ಅವರು ಭಾರತ ಟಿ೨೦ ತಂಡದ ಕಾಯಂ ಸದಸ್ಯರಾಗಿದ್ದು, ೨೦೨೨ರಲ್ಲಿ ೩೧ ಇನಿಂಗ್ಸ್‌ಗಳಲ್ಲಿ ೧೮೭.೪೩ ಸ್ಟ್ರೈಕ್‌ ರೇಟ್‌ನಂತೆ ೧೧೬೪ ರನ್‌ ಬಾರಿಸಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಜಾಗತಿಕ ಕ್ರಿಕೆಟ್‌ನ ಗಮನ ಸೆಳೆದಿರುವ ಸೂರ್ಯಕುಮಾರ್‌ ಯಾದವ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲೂ ಉತ್ತಮ ಸಾಧನೆ ತೋರಿದ್ದಾರೆ. 77 ಪಂದ್ಯಗಳಿಂದ 44.01 ಸರಾಸರಿಯಲ್ಲಿ 5326 ರನ್ ಬಾರಿಸಿದ್ದಾರೆ. ಅದರಲ್ಲಿ ಒಂದು ದ್ವಿಶತಕ, 14 ಶತಕಗಳು ಮತ್ತು 26 ಅರ್ಧ ಶತಕಗಳು ಸೇರಕೊಂಡಿವೆ.

ಇದನ್ನೂ ಓದಿ | IND vs NZ | ಪಾಕಿಸ್ತಾನ ನಾಯಕ ಬಾಬರ್‌ ಅಜಮ್‌ ದಾಖಲೆಯನ್ನು ಪುಡಿಗಟ್ಟಿದ ಸೂರ್ಯಕುಮಾರ್‌ ಯಾದವ್‌

Exit mobile version