ಅಹಮದಾಬಾದ್: ಕಿವೀಸ್ ವಿರುದ್ಧ ಬುಧವಾರ(ಫೆಬ್ರವರಿ 1) ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್(Suryakumar Yadav) ಅದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಅವರ ಈ ಕ್ಯಾಚ್ನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಾರ್ದಿಕ್ ಪಾಂಡ್ಯ(Hardik Pandya) ಅವರು ಎಸೆದ ಮೊದಲ ಓವರ್ನ 5ನೇ ಎಸೆತದಲ್ಲಿ ಫಿನ್ ಅಲೆನ್(Finn Allen) ಅವರ ಬ್ಯಾಟ್ನ ಹೊರ ಅಂಚಿಗೆ ಬಡಿದು ಚೆಂಡು ಹಿಂದೆ ಸಾಗಿತು. ಇದೇ ವೇಳೆ ಸ್ಲಿಪ್ನಲ್ಲಿದ್ದ ಸೂರ್ಯಕುಮಾರ್ ಯಾದವ್ ಮಿಂಚಿನ ವೇಗದಲ್ಲಿ ಹಿಮ್ಮುಖವಾಗಿ ಜಂಪ್ ಮಾಡುವ ಮೂಲಕ ಕ್ಯಾಚ್ ಪಡೆದರು. ಇದನ್ನು ಕಂಡ ಪ್ರೇಕ್ಷಕರು ಮತ್ತು ಹಾರ್ದಿಕ್ ಪಾಂಡ್ಯ ಒಂದು ಕ್ಷಣ ನಿಬ್ಬೆರಗಾದರು. ಸೂರ್ಯ ಅವರು ಕ್ಯಾಚ್ ಹಿಡಿದ ವಿಡಿಯೊವನ್ನು ಬಿಸಿಸಿಐ(BCCI) ತನ್ನ ಅಧಿಕೃತ ಟ್ವಿಟರ್ನಲ್ಲಿ ಶೇರ್ ಮಾಡಿದ್ದು ಈ ಕ್ಯಾಚ್ನಿಂದ ಫಿನ್ ಅಲೆನ್ ದಿಗ್ಭ್ರಮೆಗೊಂಡರು ಎಂದು ಹೇಳಿದೆ.
ಇದನ್ನೂ ಓದಿ Virat Kohli: ಶುಭ್ಮನ್ ಗಿಲ್ ಭವಿಷ್ಯದ ಕ್ರಿಕೆಟ್ ತಾರೆ; ವಿರಾಟ್ ಕೊಹ್ಲಿ ವಿಶ್ವಾಸ
ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಎರಡು ಅದ್ಭುತ ಕ್ಯಾಚ್ ಪಡೆಯುವ ಮೂಲಕ ಮಿಂಚಿದರು. ಆದರೆ ಬ್ಯಾಟಿಂಗ್ನಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವೈಫಲ್ಯ ಕಂಡರು.