Site icon Vistara News

Suryakumar Yadav | ಸೂರ್ಯಕುಮಾರ್​ ಖರೀದಿಸುವಷ್ಟು ಹಣ ನಮ್ಮ ಬಳಿಯಿಲ್ಲ; ಮ್ಯಾಕ್ಸ್​​ವೆಲ್​ ಹೀಗೆ ಹೇಳಿದ್ದು ಯಾಕೆ?

suryakumar yadav

ಸಿಡ್ನಿ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ಸೂರ್ಯಕುಮಾರ್ ಯಾದವ್ ಅವರನ್ನು ಆಸ್ಟ್ರೇಲಿಯದ ಬಿಗ್‌ಬ್ಯಾಶ್‌ ಟಿ20 ಕ್ರಿಕೆಟ್​ ಟೂರ್ನಿಗೆ ಖರೀದಿಸುವಷ್ಟು ಹಣ ನಮ್ಮ ಬಳಿ ಇಲ್ಲ ಎಂದು ಆಸ್ಟ್ರೇಲಿಯದ ತಂಡದ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿದ್ದಾರೆ. ಕ್ರಿಕೆಟ್ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮ್ಯಾಕ್ಸ್​ವೆಲ್ ಈ ವಿಚಾರವನ್ನು ಹೇಳಿದ್ದಾರೆ.

ಭವಿಷ್ಯದಲ್ಲಿ ಸೂರ್ಯಕುಮಾರ್ ಯಾದವ್​ ಅವರು ಬಿಗ್‌ಬ್ಯಾಶ್ ಟೂರ್ನಿಯ ಒಪ್ಪಂದಕ್ಕೆ ಸಹಿ ಹಾಕಿದರೆ? ಎಂಬ ತಮಾಷೆಯ ಪ್ರಶ್ನೆಗೆ ಉತ್ತರಿಸಿದ ಮ್ಯಾಕ್ಸ್‌ವೆಲ್, ನಮ್ಮ ಬಳಿ ಅವರನ್ನು ಖರೀದಿಸುವಷ್ಟು ಹಣವಿಲ್ಲ. ಅವರು ಬಿಗ್‌ಬ್ಯಾಶ್ ಟೂರ್ನಿಗೆ ಬರಲು ಸಾಧ್ಯವೇ ಇಲ್ಲ. ಅವರನ್ನು ಸೇರಿಸುವುದಾದರೆ ನಾವು ಪ್ರತಿ ಆಟಗಾರರ ಒಪ್ಪಂದವನ್ನು ರದ್ದು ಪಡಿಸಬೇಕಾಗುತ್ತದೆ ಎಂದು ಮ್ಯಾಕ್ಸ್‌ವೆಲ್ ತಮಾಷೆಯ ಮಾತನ್ನಾಡಿದ್ದಾರೆ. ಜತೆಗೆ ಸೂರ್ಯಕುಮಾರ್​ ಆಟವನ್ನು ಇಷ್ಟಪಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ | Martin Guptill | ನ್ಯೂಜಿಲ್ಯಾಂಡ್​ ಕೇಂದ್ರೀಯ ಗುತ್ತಿಗೆಯಿಂದ ಹೊರಬಿದ್ದ ಮಾರ್ಟಿನ್ ಗಪ್ಟಿಲ್‌!

Exit mobile version