T20 Blast: ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ಪಂದ್ಯದಲ್ಲಿ ಇಬ್ಬರು ಆಟಗಾರರು ಬ್ಯಾಟಿಂಗ್‌ನಿಂದ ರಿಟೈರ್ ಆಗಿದ್ದಾರೆ. ಇಂಗ್ಲೆಂಡ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ T20 ಬ್ಲಾಸ್ಟ್ ಸರಣಿಯ ನಾಟಿಂಗ್‌ಶೈರ್ ಹಾಗೂ ವಾರ್ವಿಕ್‌ಶೈರ್ ನಡುವಿನ ಪಂದ್ಯದಲ್ಲಿ ಆಶ್ಚರ್ಯಕರ ಘಟನೆ ನಡೆದಿದೆ. ವಾರ್ವಿಕ್‌ಶೈರ್ ತಂಡದ ಕಾರ್ಲೋಸ್ ಬ್ರೆಥ್‌ವೈಟ್ ಹಾಗೂ ನಾಟಿಂಗ್‌ಶೈರ್ ತಂಡದ ಸಮಿತ್ ಪಟೇಲ್ ಬ್ಯಾಟಿಂಗ್ ನಡುವೆ ರಿಟೈರ್ ಆಗಿ ಪವಿಲಿಯನ್‌ಗೆ ತೆರಳಿದರು.
ಈ ಮೊದಲು ಕ್ರಿಕೆಟ್ ಪಂದ್ಯದಲ್ಲಿ ಬ್ಯಾಟರ್‌ಗೆ ಪೆಟ್ಟಾದರೆ ಮಾತ್ರ ರಿಟೈರ್ ಆಗುವ ರೂಢಿ ಇತ್ತು. ಆದರೆ, ಇತ್ತೀಚೆಗೆ ಈ ರೀತಿ ಬ್ಯಾಟಿಂಗ್‌ನ ಅರ್ಧಕ್ಕೆ ಬಿಟ್ಟು ಪವಿಲಿಯನ್‌ಗೆ ಹೋಗುವ ಚಾಳಿ ಆಟದ ತಂತ್ರಗಾರಿಕೆ ಆಗಿಬಿಟ್ಟಿದೆ. ಈ ಬಾರಿ ಐಪಿಎಲ್‌ನಲ್ಲಿ ರವಿಚಂದ್ರನ್ ಅಶ್ವಿನ್ ಈ ರೀತಿ ಆಟದ ನಡುವೆ ರಿಟೈರ್ ಆಗಿದ್ದರು. ಆದರೆ, ಒಂದೇ ಪಂದ್ಯದಲ್ಲಿ ಇಬ್ಬರೂ ಬ್ಯಾಟ್ಸಮನ್ ರಿಟೈರ್ ಆಗಿ ಪೆವಿಲಿಯನ್‌ಗೆ ತೆರಳಿದ್ದು ಇದೇ ಮೊದಲು!
ನಾಟಿಂಗ್‌ಶೈರ್ ಹಾಗೂ ವಾರ್ವಿಕ್‌ಶೈರ್ ಪಂದ್ಯದಲ್ಲಿ ವಾರ್ವಿಕ್‌ಶೈರ್ ಮೊದಲು ಬ್ಯಾಟಿಂಗ್ ಮಾಡಿತ್ತು. ಮಳೆ ಬರುತ್ತಿದ್ದ ಕಾರಣದಿಂದ ಮ್ಯಾಚನ್ನು 8 ಓವರ್‌ಗಳಿಗೆ ಇಳಿಸಲಾಗಿತ್ತು. ವಾರ್ವಿಕ್‌ಶೈರ್ ತಂಡದ ಪರವಾಗಿ ಬ್ರೆಥ್‌ವೈಟ್ ಉತ್ತಮವಾಗಿಯೇ ಆಡುತ್ತಿದ್ದರು. 11 ಬಾಲ್‌ನಲ್ಲಿ 17 ರನ್ ಗಳಿಸಿದ್ದರು. ಆದರೆ, ಕೊನೆಯ ಓವರ್‌ನಲ್ಲಿ ಬ್ರೆಥ್‌ವೈಟ್ ಇದ್ದಕ್ಕಿದಂತೆಯೆ ಪೆವಿಲಿಯನತ್ತ ಹೆಜ್ಜೆ ಹಾಕಿದರು. ಅವರ ಬದಲಿಗೆ ಸ್ಯಾಮ್ ಹೈನ್ ಅಖಾಡಕ್ಕೆ ಇಳಿದರು. ಆದರೆ., ಅವರು ಒಂದೇ ಒಂದು ಬಾಲ್ ಕೂಡ ಎದುರಿಸಲು ಅವಕಾಶವಿರಲಿಲ್ಲ. ಅಲೆಕ್ಸ್ ಡೆವಿಸ್ ಕೇವಲ 4 ಬಾಲ್‌ನಲ್ಲಿ 14 ರನ್ ಗಳಿಸಿ ಮಿಂಚಿದರು. 8 ಓವರ್‌ನ ಅಂತ್ಯದಲ್ಲಿ ತಂಡವು 5 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿ ಉತ್ತಮ ಟಾರ್ಗೆಟ್ ನೀಡಿದರು.
ಬ್ರೆಥ್‌ವೈಟ್ ಅವರು ಕೊನೇ ಓವರ್‌ನಲ್ಲಿ ವಾಕೌಟ್ ಮಾಡಿದರೆ, ಸಮಿತ್ ಪಟೆಲ್ ಅವರು ವಾಕೌಟ್ ಮಾಡಿದ ಸಂದರ್ಭ ಅಚ್ಚರಿ ಮೂಡಿಸುವಂತ್ತಿತ್ತು!
ನೊಟ್ಟಿಂಘಂಶೈರ್ ತಂಡದ ಡ್ಯಾನಿಯಲ್ ಕ್ರಿಶ್ಚಿಯನ್ ಔಟಾದ ಬಳಿಕ ಸಮಿತ್ ಪಟೇಲ್ ಪಿಚ್‌ಗೆ ಬಂದರು. ಅದು ಕೊನೆಯ ಓವರ್‌ನಲ್ಲಿ! ಎರಡು ಬಾಲ್ ಫೇಸ್ ಮಾಡಿ ಕೇವಲ ಎರಡು ರನ್‌ಗಳಿಸಿದ್ದರು. ಪಂದ್ಯವನ್ನು ಗೆಲ್ಲಲು ಕೊನೆಯ ಒಂದು ಬಾಲ್‌ನಲ್ಲಿ ಮೂರು ರನ್ ಅವಶ್ಯಕೆಯಿತ್ತು. ಆದರೆ ಆಶ್ಚರ್ಯವೆಂದರೆ, ಈ ಹಂತದಲ್ಲಿ ಸಮಿತ್ ಪಟೇಲ್ ಪಿಚ್‌ನಿಂದ ವಾಕೌಟ್ ಮಾಡಿದರು.
ಸಮಿತ್ ಪಟೇಲ್ ಪೆವಿಲಿಯನ್‌ನತ್ತ ಸಾಗಿದ ರೀತಿಯನ್ನು ನೋಡಿದಾಗ ಇದು ಗೇಮ್‌ನ ಟ್ಯಾಕ್ಟಿಕ್ಸ್ ಇರಬಹುದೇ! ಎಂಬ ಕುತೂಹಲ ಮೂಡಿಸಿತ್ತು. ಕಾಲ್ವಿನ್ ಹ್ಯಾರಿಸನ್ ಬಂದು ಮ್ಯಾಚನ್ನು ಕೊನೇ ಪಕ್ಷ ಟೈ ಮಾಡಿಸುವ ನಿರೀಕ್ಷೆಯಿಂದ ಈ ರೀತಿ ಮಾಡಿರಬಹುದೇ! ಎಂಬ ಪ್ರಶ್ನೆಯನ್ನೂ ಹುಟ್ಟಿಹಾಕಿತ್ತು.
ನಂತರ ಸ್ಟ್ರೈಕ್‌ನಲ್ಲಿ ಟಾಮ್ ಮೂರ್ಸ್ ಇದ್ದರು. ಕ್ರೈಗ್ ಮಿಲ್ಸ್ ಅವರ ಬೌಲಿಂಗ್ ಫೇಸ್ ಮಾಡಲು ಸಿದ್ಧರಾಗಿದ್ದರು. ಒಂದು ಬಾಲ್‌ನಲ್ಲಿ ಮೂರು ರನ್ ಬೇಕಿತ್ತು. ಆದರೆ ನೊಟ್ಟಿಂಘಂಶೈರ್ ತಂಡಕ್ಕೆ ಅಡ್ವಾಂಟೇಜ್ ಇತ್ತು. ಹಿಂದಿನ ಬಾಲ್ ನೋ-ಬಾಲ್ ಆಗಿದ್ದ ಕಾರಣ ಕೊನೆಯ ಬಾಲ್ ಫ್ರೀ-ಹಿಟ್ ಆಗಿತ್ತು. ಆದರೆ, ನೊಟ್ಟಿಂಘಂಶೈರ್ ತಂಡಕ್ಕೆ ಅಂತಿಮ ಬಾಲ್‌ನಲ್ಲಿ ಕೇವಲ ಒಂದು ರನ್ ಗಳಿಸಲು ಮಾತ್ರ ಸಾಧ್ಯವಾಯಿತು.
ಈ ಮೂಲಕ ವಾರ್‌ವಿಕ್‌ಶೈರ್ 1 ರನ್ ರೋಚಕ ಗೆಲುವು ಸಾಧಿಸಿತು.
ಇದನ್ನೂ ಓದಿ: T20 Series | ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ವಿಶ್ವ ದಾಖಲೆ ಬರೆಯುತ್ತಾ?