Site icon Vistara News

New Year Resolution | ವಿಶ್ವ ಕಪ್ ಗೆಲುವೇ ಟಿ20 ಕ್ಯಾಪ್ಟನ್​ ಪಾಂಡ್ಯ ಹೊಸ ವರ್ಷದ ಸಂಕಲ್ಪ

Hardik Pandya Captain

ಮುಂಬಯಿ : ಭಾರತ ಕ್ರಿಕೆಟ್​ ತಂಡ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಸಜ್ಜಾಗುತ್ತಿದೆ. ಮಂಗಳವಾರ ಪ್ರವಾಸಿ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಡಲಿದೆ. ಚುಟುಕು ಕ್ರಿಕೆಟ್​ನ ಈ ಸರಣಿಯಲ್ಲಿ ಹಾರ್ದಿಕ್​ ಪಾಂಡ್ಯ ಅವರು ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ಸ್ಟಾರ್​ ಸ್ಪೋರ್ಟ್ಸ್​ ಜತೆ ಮಾತನಾಡಿದ ಅವರು, ವಿಶ್ವ ಕಪ್​ ಗೆಲ್ಲುವುದೇ ತಮ್ಮ 2023ರ ಸಂಕಲ್ಪ (New Year Resolution) ಎಂದು ಹೇಳಿದ್ದಾರೆ.

ಹೊಸ ವರ್ಷಕ್ಕೆ ಪ್ರವೇಶ ಮಾಡುವಾಗ ಏನಾದರೂ ಹೊಸ ಸಂಕಲ್ಪ ಮಾಡುವುದು ಮಾಮೂಲಿ. ಅಂತೆಯೇ ಟೀಮ್​ ಇಂಡಿಯಾ ಕೂಡ 2023ರಲ್ಲಿ ಮೊದಲ ಸರಣಿಯನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಟಾರ್ ಸ್ಪೋರ್ಟ್ಸ್​ ಜತೆ ಮಾತನಾಡಿದ ಅವರಿಗೆ ಹೊಸ ವರ್ಷದ ನಿರ್ಣಯವೇನು ಎಂದು ಕೇಳಿದ್ದಾರೆ. ಅದಕ್ಕವರು ಭಾರತದಲ್ಲಿ ನಡೆಯುವ ಏಕ ದಿನ ವಿಶ್ವ ಕಪ್​ ಅನ್ನು ಗೆಲ್ಲುವುದೇ ಹೊಸ ಸಂಕಲ್ಪ ಎಂಬುದಾಗಿ ಹೇಳಿದ್ದಾರೆ.

ಅಕ್ಟೋಬರ್​ ಮತ್ತು ನವೆಂಬರ್ ತಿಂಗಳಲ್ಲಿ ಭಾರತದ ಆತಿಥ್ಯದಲ್ಲಿ ಏಕ ದಿನ ವಿಶ್ವ ಕಪ್​ ನಡೆಯಲಿದೆ. ಕಳೆದ ಒಂದು ದಶಕದಿಂದ ಭಾರತ ತಂಡ ಐಸಿಸಿ ಟ್ರೋಫಿಯ ಬರ ಎದುರಿಸುತ್ತಿರುವ ಕಾರಣ ಈ ಬಾರಿ ಗೆದ್ದೇ ಗೆಲ್ಲಬೇಕು ಎಂಬ ಯೋಜನೆಯೊಂದಿಗೆ 20 ಆಟಗಾರರ ಪಟ್ಟಿಯನ್ನು ತಯಾರಿಸಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಹಾರ್ದಿಕ್​ ಪಾಂಡ್ಯ ಅವರ ಸಂಕಲ್ಪ ನಿಜವಾಗಬಹುದು ಎಂದು ಹೇಳಲಾಗುತ್ತಿದೆ.

ಮಾತುಕತೆ ವೇಳೆ ಹಾರ್ದಿಕ್ ಪಾಂಡ್ಯ, ಟೀಮ್ ಇಂಡಿಯಾದ ಸಹ ಆಟಗಾರ ರಿಷಭ್​ ಪಂತ್​ ಅವರ ಆರೋಗ್ಯ ಸುಧಾರಣೆಯ ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ | Hardik Pandya | ಟ್ವಿಟರ್​ ಖಾತೆಯಲ್ಲಿ ಕೊಹ್ಲಿ, ರೋಹಿತ್​ಗೆ ಇಲ್ಲದ ಗೌರವ ಪಾಂಡ್ಯಗೆ! ನೆಟ್ಟಿಗರ ಅಚ್ಚರಿ

Exit mobile version