Site icon Vistara News

T20 Ranking | ಪಾಕ್​ ಬ್ಯಾಟರ್​ ರಿಜ್ವಾನ್​ ಹಿಂದಿಕ್ಕಿ ನಂ.1 ಸ್ಥಾನ ಅಲಂಕರಿಸಿದ ಸೂರ್ಯಕುಮಾರ್​ ಯಾದವ್​

t20

ದುಬೈ: ಐಸಿಸಿ ಬುಧವಾರ ಬಿಡುಗಡೆ ಮಾಡಿದ ನೂತನ ಟಿ20(T20 Ranking) ಶ್ರೇಯಾಂಕದಲ್ಲಿ ಟೀಮ್​ ಇಂಡಿಯಾದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್(863) ನಂ.1 ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಮೂಲಕ ಮೊದಲ ಸ್ಥಾನದಲ್ಲಿದ್ದ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್(842) ಅವರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ಟಿ20 ವಿಶ್ವ ಕಪ್​ನಲ್ಲಿ ಸತತ ಎರಡು ಅರ್ಧಶತಕ ಸಿಡಿಸಿ ಸೂರ್ಯಕುಮಾರ್​ ಮಿಂಚಿದ್ದರು. ಈ ಸಾಧನೆಯಿಂದ ಸೂರ್ಯಕುಮಾರ್​ ಇದೀಗ ನಂ.1 ಸ್ಥಾನಕ್ಕೇರಿದ್ದಾರೆ.

ನ್ಯೂಜಿಲೆಂಡ್ ಬ್ಯಾಟರ್ ಗ್ಲೆನ್ ಫಿಲಿಪ್ಸ್ ಕೂಡ ಶ್ರೇಯಾಂಕದಲ್ಲಿ ಮೇಲಕ್ಕೇರಿದ್ದು, ತಮ್ಮ ಕ್ರಿಕೆಟ್​ ವೃತ್ತಿಜೀವನದ ಅತ್ಯುತ್ತಮ ಏಳನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ಬಾಂಗ್ಲಾದೇಶ ವಿರುದ್ಧ 109 ರನ್‌ ಪೇರಿಸಿದ ದಕ್ಷಿಣ ಆಫ್ರಿಕಾ ಬ್ಯಾಟರ್ ರಿಲಿ ರೊಸೊ 17 ಸ್ಥಾನ ಮೇಲಕ್ಕೇರುವ ಮೂಲಕ ಟಾಪ್​ ಟೆನ್​ಗೆ ಎಂಟ್ರಿಕೊಟ್ಟಿದ್ದಾರೆ. ಅದರಂತೆ ಎಂಟನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ | IND VS Bangla | ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ

Exit mobile version