ಹೋಬರ್ಟ್ : ಸಿಕಂದರ್ ರಾಜಾ (82) ಅವರ ಸ್ಫೋಟಕ ಅರ್ಧ ಶತಕದ ನೆರವು ಪಡೆದ ಜಿಂಬಾಬ್ವೆ ತಂಡ ಐರ್ಲೆಂಡ್ ವಿರುದ್ಧದ ಟಿ೨೦ ವಿಶ್ವ ಕಪ್‌ನ (T20 World Cup) ಮೊದಲ ಸುತ್ತಿನ ಪಂದ್ಯದಲ್ಲಿ ೩೧ ರನ್‌ಗಳಿಂದ ಜಯ ಸಾಧಿಸಿತು. ಈ ಮೂಲಕ ಹಾಲಿ ವಿಶ್ವ ಕಪ್‌ಗೆ ಭರ್ಜರಿ ಪ್ರವೇಶ ಪಡೆದುಕೊಂಡಿತು.
ಹೋಬರ್ಟ್‌ನ ಬೆಲ್ಲೆರಿವ್ ಸ್ಟೇಡಿಯಮ್‌ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಅಹ್ವಾನ ಪಡೆದ ಜಿಂಬಾಬ್ವೆ ತಂಡ ನಿಗದಿತ ೨೦ ಓವರ್‌ಗಳಲ್ಲಿ ೭ ವಿಕೆಟ್‌ಗೆ ೧೭೪ ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಐರ್ಲೆಂಡ್ ಬಳಗ ನಿಗದಿತ ೨೦ ಓವರ್‌ಗಳು ಮುಕ್ತಾಯಗೊಂಡಾಗ ೯ ವಿಕೆಟ್‌ಗೆ ೧೪೩ ರನ್ ಬಾರಿಸಿ ಸೋಲೊಪ್ಪಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡ ಆರಂಭಿಕ ಹಿನ್ನಡೆ ಅನುಭವಿಸಿದ ಹೊರತಾಗಿಯೂ ಸಿಕಂದರ್ ರಾಜಾ ಅವರ ಏಕಾಂಗಿ ಹೋರಾಟದ ಮೂಲಕ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಿತು. ಗುರಿ ಬೆನ್ನಟ್ಟಿದ ಐರ್ಲೆಂಡ್ ಕೂಡ ಆರಂಭದಲ್ಲಿ ಕುಸಿತ ಕಂಡಿತು. ಬಳಿಕ ಚೇತರಿಕೆಯ ಪ್ರದರ್ಶನ ನೀಡಿದರೂ ಗೆಲುವು ಸಾಧಿಸಲು ವಿಫಲಗೊಂಡಿತು.
ಸ್ಕೋರ್ ವಿವರ
ಜಿಂಬಾಬ್ವೆ : ೨೦ ಓವರ್‌ಗಳಲ್ಲಿ ೭ ವಿಕೆಟ್‌ಗೆ ೧೭೪ (ಸಿಕಂದರ್ ರಾಜಾ ೮೨, ವೆಲ್ಲೆಸ್ಲಿ ಮಧವೆರೆ ೨೨; ಜೋಶ್ ಲಿಟಲ್ ೨೪ಕ್ಕೆ೩).
ಐರ್ಲೆಂಡ್ : ೨೦ ಓವರ್‌ಗಳಲ್ಲಿ ೯ ವಿಕೆಟ್‌ಗೆ ೧೪೩ (ಕರ್ಟಿಸ್ ಕ್ಯಾಂಫೆರ್ ೨೭; ಜಾರ್ಜ್ ಡಾಕ್‌ರೆಲ್ ೨೪; ಬ್ಲೆಸಿಂಗ್ ಮುಜರ್‌ಬಾನಿ ೨೩ಕ್ಕೆ೩).