ಕೊಲೊಂಬೊ : ಏಷ್ಯಾ ಕಪ್ ಚಾಂಪಿಯನ್ ಶ್ರೀಲಂಕಾ ತಂಡ ಮುಂಬರುವ ಟಿ೨೦ ವಿಶ್ವ ಕಪ್‌ಗೆ ೧೫ ಸದಸ್ಯರ ಬಳಗವನ್ನು ಶುಕ್ರವಾರ ಪ್ರಕಟಿಸಿದೆ. ದ್ವೀಪ ರಾಷ್ಟ್ರದ ತಂಡಕ್ಕೆ ದುಷ್ಮಂತಾ ಚಾಮೀರಾ ಹಾಗೂ ಲಾಹಿರು ಕುಮಾರ್ ಸೇರ್ಪಡೆಗೊಂಡಿದ್ದಾರೆ. ಈ ಇಬ್ಬರೂ ಏಷ್ಯಾ ಕಪ್‌ನಲ್ಲಿ ಆಡಿರಲಿಲ್ಲ. ಆದರೆ, ಈ ಜೋಡಿ ಗಾಯದ ಸಮಸ್ಯೆಯಿಂದ ಪೂರ್ಣ ಮುಕ್ತಿ ಪಡೆದಿಲ್ಲ. ಹೀಗಾಗಿ ಫಿಟ್ನೆಸ್ ಸಾಬೀತುಪಡಿಸಿದ ಬಳಿಕ ಮಾತ್ರ ತಂಡವನ್ನು ಸೇರಿಕೊಳ್ಳಲಿದ್ದಾರೆ.
ದಸುನ್ ಶನಕ ನೇತೃತ್ವದ ಲಂಕಾ ಬಳಗ ೧೫ನೇ ಆವೃತ್ತಿಯ ಏಷ್ಯಾ ಕಪ್‌ಗೆ ಯಾವುದೇ ನಿರೀಕ್ಷೆಗಳು ಇಲ್ಲದೇ ತೆರಳಿತ್ತು. ಅಂತೆಯೇ ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋಲು ಕಂಡಿತ್ತು. ಆ ಬಳಿಕ ಫೈನಲ್ ಸೇರಿದಂತೆ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ಅದೇ ವಿಶ್ವಾಸದಲ್ಲಿರುವ ತಂಡದ ಮುಂದಿನ ಟಿ೨೦ ವಿಶ್ವ ಕಪ್‌ಗೂ ತಂಡವನ್ನು ಪ್ರಕಟಿಸಿದೆ.
ತಂಡ: ದಸುನ್ ಶನಕ, ದನುಷ್ಕಾ (ನಾಯಕ), ಗುಣತಿಲಕ, ಪಾಥುಮ್ ನಿಸ್ಸಂಕ, ಕುಸಾಲ್ ಮೆಂಡಿಸ್, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸ, ಧನಂಜಯ ಡಿ ಸಿಲ್ವಾ, ವಾನಿಂದು ಹಸರಂಗ, ಮಹೀಶ್ ತೀಕ್ಷಣ, ಜೆಫ್ರಿ ವಂಡರ್ಸೆ, ಚಾಮಿಕಾ ಕರುಣಾರತ್ನ, ದುಷ್ಮಂತಾ ಚಾಮಿರಾ, ಲಾಹಿರು ಕುಮಾರ, ದಿಲ್ಶನ್ ಮಧುಶಂಕ, ಪ್ರಮೋದ್ ಮದುಶಾನ್.
ಇದನ್ನೂ ಓದಿ | BCCI | ಸಂಜು ಸ್ಯಾಮ್ಸನ್ ಪರ ಅಭಿಯಾನದ ನಡುವೆ ನಾಯಕನ ಪಟ್ಟ ಕಟ್ಟಿದ ಬಿಸಿಸಿಐ