ಬೆಂಗಳೂರು: ಕಳೆದ 8 ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ(T20 World Cup 2024) ಅತ್ಯಧಿಕ ಕ್ಯಾಚ್ ಹಿಡಿದ ಆಟಗಾರ(most catches in T20 World Cup) ಯಾರು? ಈ ಬಾರಿಯ ಟೂರ್ನಿಯಲ್ಲಿ ಯಾರಿಗೆಲ್ಲ ಮಾಜಿ ಆಟಗಾರರ ದಾಖಲೆಗಳನ್ನು ಮುರಿಯುವ ಅವಕಾಶವಿದೆ ಎನ್ನುವ ಸಂಪೂರ್ಣ ಮಾಹಿತಿ ಇಂತಿದೆ.
ಎಬಿ ಡಿವಿಲಿಯರ್ಸ್
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಆಟಗಾರ ಎಬಿ ಡಿವಿಲಿಯರ್ಸ್(AB de Villiers) ಅವರು ಇದುವರೆಗಿನ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕ್ಯಾಚ್ ಪಡೆದ ದಾಖಲೆ ಹೊಂದಿದ್ದಾರೆ. 2007-2016 ತನಕ ವಿಶ್ವಕಪ್ ಆಡಿದ ವಿಲಿಯರ್ಸ್, 30 ಪಂದ್ಯಗಳಿಂದ 23 ಕ್ಯಾಚ್ ಹಿಡಿದಿದ್ದಾರೆ.
ಡೇವಿಡ್ ವಾರ್ನರ್
ವಿದಾಯದ ಟಿ20 ವಿಶ್ವಕಪ್ ಆಡುತ್ತಿರುವ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್(David Warner) ಈ ಯಾದಿಯಲ್ಲಿ ದ್ವಿತೀಯ ಸ್ಥಾನಿಯಾಗಿದ್ದಾರೆ. 34* ಪಂದ್ಯವನ್ನಾಡಿ 21* ಕ್ಯಾಚ್ ಹಿಡಿದಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿ 3 ಕ್ಯಾಚ್ ಹಿಡಿದರೆ ಡಿವಿಲಿಯರ್ಸ್ ದಾಖಲೆ ಪತನಗೊಳ್ಳಲಿದೆ. ವಾರ್ನರ್ ಈಗಾಗಲೇ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಇದನ್ನೂ ಓದಿ T20 World Cup 2024: ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ಗಳು ಯಾರು?
ಮಾರ್ಟಿನ್ ಗಪ್ಟಿಲ್
ನ್ಯೂಜಿಲ್ಯಾಂಡ್ನ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್(Martin Guptill) ಅವರು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ಕ್ಯಾಚ್ ಹಿಡಿದ ಆಟಗಾರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 28 ಪಂದ್ಯಗಳಿಂದ 19 ಕ್ಯಾಚ್ ಹಿಡಿದಿದ್ದಾರೆ. ಈ ಬಾರಿ ಅವರಿಗೆ ಆಡುವ ಅವಕಾಶ ಸಿಕ್ಕಿಲ್ಲ.
ರೋಹಿತ್ ಶರ್ಮ
ಟೀಮ್ ಇಂಡಿಯಾದ ನಾಯಕ, ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ(Rohit Sharma) ಅವರು 16 ಕ್ಯಾಚ್ ಹಿಡಿದು ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಆವೃತ್ತಿಯಲ್ಲಿ 4 ಕ್ಯಾಚ್ ಹಿಡಿದರೆ ಮಾರ್ಟಿನ್ ಗಪ್ಟಿಲ್ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಚೊಚ್ಚಲ ಆವೃತ್ತಿಯಿಂದ ಇದುವರೆಗಿನ ಎಲ್ಲ ಆವೃತ್ತಿಯ ಟಿ20 ವಿಶ್ವಕಪ್ ಆಡಿದ ಆಟಗಾರ ಎನ್ನುವ ಹಿರಿಮೆಯೂ ರೋಹಿತ್ ಅವರದ್ದಾಗಿದೆ.
ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಟಾಪ್ 5 ಬೌಲರ್ಗಳು ಯಾರು?
ಗ್ಲೆನ್ ಮ್ಯಾಕ್ಸ್ವೆಲ್
ಆಸ್ಟ್ರೇಲಿಯಾದ ಬಿಗ್ ಹಿಟ್ಟರ್, ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್(Glenn Maxwell) ಕೂಡ 16 ಕ್ಯಾಚ್ ಹಿಡಿದು ರೋಹಿತ್ ಶರ್ಮ ಜತೆ ಜಂಟಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಈ ಬಾರಿಯೂ ಆಡುತ್ತಿರುವ ಕಾರಣ ಅವರ ಕ್ಯಾಚ್ಗಳ ಸಂಖ್ಯೆ ಹೆಚ್ಚಿಸುವ ಅವಕಾಶವಿದೆ.
ಕೇನ್ ವಿಲಿಯಮ್ಸನ್
ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್(Kane Williamson) 2012-2022ರ ಅವಧಿಯಲ್ಲಿ 25 ಪಂದ್ಯಗಳಿಂದ 15 ಕ್ಯಾಚ್ ಹಿಡಿದಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ಕ್ಯಾಚ್ ಹಿಡಿದ ಆಟಗಾರರ ಪಟ್ಟಿಯಲ್ಲಿ ಸದ್ಯ 5ನೇ ಸ್ಥಾನಿಯಾಗಿದ್ದಾರೆ. 2 ಕ್ಯಾಚ್ ಹಿಡಿದರೆ ರೋಹಿತ್ ಶರ್ಮ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ದಾಖಲೆ ಹಿಂದಿಕ್ಕಲಿದ್ದಾರೆ.