Site icon Vistara News

T20 World Cup 2024: ಟಿ20 ವಿಶ್ವಕಪ್​ ಟೂರ್ನಿಗೆ ಕಾಮೆಂಟರಿ ಬಳಗ ಘೋಷಿಸಿದ ಐಸಿಸಿ; ದಿನೇಶ್​ ಕಾರ್ತಿಕ್​ಗೂ ಸ್ಥಾನ

T20 World Cup 2024

T20 World Cup 2024: ICC Announces Star-Studded Commentary Panel For ICC T20 World Cup 2024

ದುಬೈ: 2 ದಿನಗಳ ಹಿಂದಷ್ಟೇ ಕ್ರಿಕೆಟ್​ಗೆ ನಿವೃತ್ತಿ ಹೇಳಿದ್ದ ಆರ್​ಸಿಬಿ ತಂಡದ ದಿನೇಶ್​ ಕಾರ್ತಿಕ್​(Dinesh Karthik) ಅವರು ಇದೀಗ ಟಿ20 ವಿಶ್ವಕಪ್​ ಟೂರ್ನಿಯಲ್ಲಿ(T20 World Cup 2024) ಕರ್ತವ್ಯ ನಿರ್ವಹಿಸಲು ಸಜ್ಜಾಗಿದ್ದಾರೆ. ಇದೇ ಜೂನ್​ 1ರಿಂದ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆಯುವ ಮಿನಿ ವಿಶ್ವಕಪ್​ ಸಮರದಲ್ಲಿ ಕಾರ್ತಿಕ್​ ವೀಕ್ಷಕ ವಿವರಣೆಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಶುಕ್ರವಾರ ಐಸಿಸಿ ವೀಕ್ಷಕ ವಿವರಣೆಗಾರರ ಪಟ್ಟಿಯನ್ನು ಪ್ರಕಟಿಸಿತು. ಈ ಪಟ್ಟಿಯಲ್ಲಿ ದಿನೇಶ್​ ಕಾರ್ತಿಕ್​ ಸೇರಿ ಹಲವು ದೇಶಗಳ ತಾರಾ ಕಾಮೆಂಟೇಟರ್ ಕಾಣಿಸಿಕೊಂಡಿದ್ದಾರೆ.

ರವಿಶಾಸ್ತ್ರಿ, ನಾಸರ್ ಹುಸೇನ್, ಇಯಾನ್ ಸ್ಮಿತ್, ಮೆಲ್ ಜೋನ್ಸ್, ಹರ್ಷಾ ಭೋಗ್ಲೆ ಮತ್ತು ಇಯಾನ್ ಬಿಷಪ್ ಪ್ರಮುಖ ಆಕರ್ಷಣೆಯಾಗಿದ್ದಾರೆ. ಇವರ ಜತೆ ದಿನೇಶ್ ಕಾರ್ತಿಕ್, ಎಬೊನಿ ರೈನ್‌ಫೋರ್ಡ್-ಬ್ರೆನ್, ಸ್ಯಾಮುಯೆಲ್ ಬದ್ರಿ, ಕಾರ್ಲೊಸ್ ಬ್ರಾತ್ ವೇಟ್, ಸ್ಟೀವನ್​ ಸ್ಮಿತ್, ಫಿಂಚ್, ಲಿಸಾ ಸ್ತಾಲೆಕರ್ ಈ ಬಾರಿಯ ಕಾಮೆಂಟರಿ ಪ್ಯಾನೆಲ್​ನಲ್ಲಿ ಇರಲಿದ್ದಾರೆ.

ರಿಕಿ ಪಾಂಟಿಂಗ್, ಸುನಿಲ್ ಗವಾಸ್ಕರ್, ಮ್ಯಾಥ್ಯೂ ಹೇಡನ್, ರಮಿಜ್ ರಾಜಾ, ಇಯಾನ್ ಮಾರ್ಗನ್, ಟಾಮ್ ಮೂಡಿ ಮತ್ತು ವಾಸಿಮ್ ಅಕ್ರಮ್ ಪಂದ್ಯಕ್ಕೂ ಮುನ್ನ ನಡೆಯುವ ವಿಶ್ಲೇಷಣೆಯಲ್ಲಿ ತಂಡಗಳ ಮತ್ತು ಆಟಗಾರರ ಸಾಮರ್ಥದ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಉಳಿದಂತೆ ಡೇಲ್ ಸ್ಟೇನ್​, ಗ್ರೇಮ್ ಸ್ಮಿತ್, ಮೈಕೆಲ್ ಅಥರ್ಟನ್, ವಕಾರ್ ಯೂನಿಸ್, ಸೈಮನ್ ಡೌಲ್, ಶಾನ್ ಪೊಲಾಕ್, ಕೇಟಿ ಮಾರ್ಟಿನ್, ಎಂಪುಮೆಲೆಲೊ ಎಂಬಾಂಗ್ವಾ, ನಟಾಲಿ ಜರ್ಮನೋಸ್, ಡ್ಯಾನಿ ಮಾರಿಸನ್, ಅಲಿಸನ್ ಮಿಚೆಲ್, ಅಲನ್ ವಿಲ್ಕಿನ್ಸ್, ಬ್ರಿಯಾನ್ ಮುರ್ಗಟ್ರಾಯ್ಡ್, ಮೈಕ್ ಹೇಸ್‌ಮನ್, ಇಯಾನ್ ವಾರ್ಡ್, ಅಥರ್ ಅಲಿ ಖಾನ್, ರಸೆಲ್ ಅರ್ನಾಲ್ಡ್, ನಿಯಾಲ್ ಒ’ಬ್ರಿಯಾನ್, ಕಾಸ್ ನೈಡೋ ಮತ್ತು ಡ್ಯಾರೆನ್ ಗಂಗಾ ಕೂಡ ಟಿ20 ವಿಶ್ವಕಪ್ ನಲ್ಲಿ ಕಾಮೆಂಟರಿ ಮಾಡಲಿದ್ದಾರೆ.

ಇದನ್ನೂ ಓದಿ T20 World Cup 2024 : ಭಾರತ ತಂಡ ವಿಶ್ವ ಕಪ್​ ಗೆಲ್ಲುವುದಿಲ್ಲ; ಇಂಗ್ಲೆಂಡ್​ ಮಾಜಿ ಆಟಗಾರನ ಭವಿಷ್ಯ

ರಾಜಸ್ಥಾನದದ ರಾಯಲ್ಸ್​ ವಿರುದ್ಧದ ಎಲಿಮಿನೇಟರ್​ ಪಂದ್ಯವೇ ದಿನೇಶ್ ಕಾರ್ತಿಕ್(Dinesh Karthik)ಗೆ ವಿದಾಯ(dinesh karthik retirement) ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಆರ್​ಸಿಬಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿತ್ತು. 17 ವರ್ಷಗಳ ಐಪಿಎಲ್​ ಜರ್ನಿಯಲ್ಲಿ ದಿನೇಶ್ ಕಾರ್ತಿಕ್ ಒಟ್ಟು 6 ತಂಡಗಳ ಪರ ಕಣಕ್ಕಿಳಿದಿದ್ದಾರೆ. ಈ ವೇಳೆ 2013 ರಲ್ಲಿ ಮುಂಬೈ ಇಂಡಿಯನ್ಸ್ ಪರ ಅವರು ಟ್ರೋಫಿ ಗೆದ್ದಿದ್ದರು. ಇದಾದ ಬಳಿಕ ಹಲವು ತಂಡಗಳ ಪರ ಆಡಿದರೂ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸಾಧ್ಯವಾಗಿಲ್ಲ.

2004 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಮಾಡಿದ ಕಾರ್ತಿಕ್​ ಭಾರತ ಪರ 26 ಟೆಸ್ಟ್‌ಗಳನ್ನು ಆಡಿ 1025 ರನ್ ಗಳಿಸಿದ್ದಾರೆ. 57 ಕ್ಯಾಚ್‌ಗಳು ಮತ್ತು 6 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ. ಅವರು ತಮ್ಮ ಕೊನೆಯ ಟೆಸ್ಟ್ ಆಡಿದ್ದು 2018 ರಲ್ಲಿ. ಏಕದಿನದಲ್ಲಿ 94 ಪಂದ್ಯಗಳನ್ನು ಆಡಿ 1752 ರನ್ ಗಳಿಸಿದ್ದಾರೆ. 64 ಕ್ಯಾಚ್‌ಗಳು ಮತ್ತು 7 ಸ್ಟಂಪಿಂಗ್‌ಗಳನ್ನು ನಿರ್ವಹಿಸಿದ್ದಾರೆ. 60 ಟಿ20 ಪಂದ್ಯಗಳಿಂದ 686 ರನ್ ಗಳಿಸಿ, 30 ಕ್ಯಾಚ್‌ಗಳು ಮತ್ತು 8 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ.

Exit mobile version