Site icon Vistara News

T20 World Cup 2024: ಸೂಪರ್​-8 ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಆಘಾತ; ಅಭ್ಯಾಸದ ವೇಳೆ ಸ್ಟಾರ್​ ಆಟಗಾರನಿಗೆ ಗಾಯ

T20 World Cup 2024

T20 World Cup 2024: Suryakumar Yadav suffers minor injury scare ahead of Super 8s

ಬಾರ್ಬಡೋಸ್​: ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ಸೂಪರ್​-8 ಪಂದ್ಯ ಆರಂಭಕ್ಕೂ ಮುನ್ನವೇ ಟೀಮ್​ ಇಂಡಿಯಾಕ್ಕೆ ಆಘಾತವೊಂದು ಎದುರಾಗಿದೆ. ತಂಡದ ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಯಾದವ್ (Suryakumar Yadav)​ ಅವರು ಕೈ ಬೆರಳಿನ ಗಾಯಕ್ಕೆ ತುತ್ತಾಗಿದ್ದಾರೆ. ಅಭ್ಯಾಸ ನಡೆಸುವ ವೇಳೆ ಅವರು ಗಾಯಗೊಂಡರು(Suryakumar Yadav suffers minor injury).

ಭಾನುವಾರದಂದು ಬಾರ್ಬಡೋಸ್‌ಗೆ ಆಗಮಿಸಿದ ಭಾರತೀಯ ಆಟಗಾರರು ಕೆರಿಬಿಯನ್ ಬೀಚ್​ನಲ್ಲಿ ವಾಲಿಬಾಲ್​ ಆಡಿ ಎಂಜಾಯ್​ ಮಾಡಿದ್ದರು. ಸೋಮವಾರ ರಾತ್ರಿ ಅಭ್ಯಾಸ ಆರಂಭಿಸಿದ್ದಾರೆ. ಇದೇ ವೇಳೆ ನೆಟ್ಸ್​ನಲ್ಲಿ ಬ್ಯಾಟಿಂಗ್​ ಅಭ್ಯಾಸ ನಡೆಸುತ್ತಿದ್ದ ಸೂರ್ಯಕುಮಾರ್​ ಅವರ ಕೈ ಬೆರಳಿಗೆ ಚೆಂಡಿನೇಟು ಬಿದ್ದಿದೆ. ಕೆಲಕಾಲ ನೋವಿನಿಂದ ಬಳಲಿದ ಅವರುನ್ನು ಫಿಸಿಯೋ ಆರೈಕೆ ಮಾಡಿದ್ದಾರೆ. ಮೂಲಗಳ ಪ್ರಕಾರ ಅವರ ಗಾಯದ ಪ್ರಮಾಣ ಗಂಭೀರವಾಗಿ ಪರಿಣಮಿಸಿಲ್ಲ ಎಂದು ತಿಳಿದುಬಂದಿದೆ. ಒಂದೊಮ್ಮೆ ಮತ್ತೆ ನೋವು ಕಾಣಿಸಿಕೊಂಡರೆ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಸೂರ್ಯ ಅವರು ಇದೇ ವರ್ಷದ ಜನವರಿಯಲ್ಲಿ ಸ್ಪೋರ್ಟ್ಸ್ ಹರ್ನಿಯಾಕ್ಕಾಗಿ ತೊಡೆಸಂದು ಶಸ್ತ್ರಚಿಕಿತ್ಸೆಗೆ ಒಳಗಾಗಿ ಬಳಿಕ ಐಪಿಎಲ್​ ಮೂಲಕ ಮತ್ತೆ ಕ್ರಿಕೆಟ್​ ಕಮ್​ಬ್ಯಾಕ್​ ಮಾಡಿದ್ದರು.

ಭಾರತ ತನ್ನ ಮಪದಲ ಸೂಪರ್​-8 ಪಂದ್ಯವನ್ನು ಜೂನ್​ 20ರಂದು ಅಫಘಾನಿಸ್ತಾನ ವಿರುದ್ಧ ಆಡಲಿದೆ. ಮಂಗಳವಾರ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ ಸೇರಿ ತಂಡದ ಆಟಗಾರರು ಬ್ಯಾಟಿಂಗ್​ ಮತ್ತು ಬೌಲಿಂಗ್​ ಅಭ್ಯಾಸ ನಡೆಸಿದ್ದಾರೆ. ವಿರಾಟ್​ ಕೊಹ್ಲಿ ಅವರು ಮತ್ತೆ ತಮ್ಮ ಹಳೆಯ ಬ್ಯಾಟಿಂಗ್​ ಫಾರ್ಮ್ ಕಂಡುಕೊಳ್ಳುವ ನಿಟ್ಟಿನಲ್ಲಿ ಸೋಮವಾರ ಹೆಚ್ಚುವರಿ ಬ್ಯಾಟಿಂಗ್​ ಅಭ್ಯಾಸ ನಡೆಸಿದ್ದರು. ಕಳೆದ ಮೂರು ಪಂದ್ಯಗಳಲ್ಲಿಯೂ ಒಂದಂಕಿಗೆ ಸೀಮಿತರಾಗಿದ್ದರು. ಒಂದು ಪಂದ್ಯದಲ್ಲಿ ಶೂನ್ಯ ಸುತ್ತಿದ್ದರು.​​

ಕೊಹ್ಲಿ ವೈಫಲ್ಯಕ್ಕೆ ನಿಧಾನಗತಿ ಪಿಚ್ ಕಾರಣ!


ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸುವ ಮುನ್ನ ಅಮೆರಿಕ ಮತ್ತು ವಿಂಡೀಸ್​ ಪಿಚ್​ಗಳು ನಿಧಾನಗತಿಯದ್ದಾಗಿದ್ದು, ಕೊಹ್ಲಿಗೆ ಇದು ಸೂಕ್ತವಾಗಿಲ್ಲ ಹೀಗಾಗಿ ಅವರನ್ನು ಆಯ್ಕೆ ಮಾಡುವುದು ಅನುಮಾನ ಎನ್ನಲಾಗಿತ್ತು. ಆದರೆ, ಸ್ಟಾರ್​ ಆಟಗಾರನನ್ನು ಕೈ ಬಿಟ್ಟರೆ ಬಿಸಿಸಿಐ ವಿರುದ್ಧ ಭಾರೀ ಟೀಕೆ ಮತ್ತು ವಿರೋಧ ವ್ಯಕ್ತವಾಗುವುದು ಎನ್ನುವ ನಿಟ್ಟಿನಲ್ಲಿ ಅವರಿಗೆ ಅವಕಾಶ ನೀಡಲಾಗಿತ್ತು. ಅಂದು ಊಹೆ ಮಾಡಿದಂತೆ ಇದೀಗ ಕೊಹ್ಲಿ ನಿಧಾನಗತಿಯ ಪಿಚ್​ನಲ್ಲಿ ರನ್​ ಗಳಿಸಲು ಪರದಾಡುತ್ತಿದ್ದಾರೆ.

ಇದನ್ನೂ ಓದಿ Team India Coach: ಜಾಂಟಿ ರೋಡ್ಸ್ ಟೀಮ್​ ಇಂಡಿಯಾದ ಮುಂದಿನ ಫೀಲ್ಡಿಂಗ್​ ಕೋಚ್​

ಸೂಪರ್​ 8 ಹಂತದ ಮೊದಲ ಪಂದ್ಯ ಜೂನ್​ 19ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ ಸೆಣಸಾಟ ನಡೆಸಲಿವೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಹೈವೋಲ್ಟೇಜ್​ ಪಂದ್ಯ ಜೂನ್​ 24 ಭಾನುವಾರದಂದು ನಡೆಯಲಿದೆ. ಟೀಮ್​ ಇಂಡಿಯಾದ ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಸಾರಗೊಳ್ಳಲಿದೆ.

ಭಾರತದ ಸೂಪರ್​-8 ಪಂದ್ಯದ ವೇಳಾಪಟ್ಟಿ

ಎದುರಾಳಿದಿನಾಂಕತಾಣಪ್ರಸಾರ
ಭಾರತ-ಅಫಘಾನಿಸ್ತಾನಜೂನ್​ 20ಬಾರ್ಬಡೋಸ್ರಾತ್ರಿ 8ಕ್ಕೆ
ಭಾರತ-ಬಾಂಗ್ಲಾದೇಶಜೂನ್​ 22ಆಂಟಿಗುವಾರಾತ್ರಿ 8ಕ್ಕೆ
ಭಾರತ-ಆಸ್ಟ್ರೇಲಿಯಾಜೂನ್​ 24ಸೇಂಟ್ ಲೂಸಿಯಾರಾತ್ರಿ 8ಕ್ಕೆ
Exit mobile version