Site icon Vistara News

T20 World Cup 2024: ನಸೌ ಪಿಚ್​ ಬಗ್ಗೆ ಕಳವಳ ವ್ಯಕ್ತಪಡಿಸಿದ ಟೀಮ್​ ಇಂಡಿಯಾ ಆಟಗಾರರು

T20 World Cup 2024

T20 World Cup 2024: Team India players expressed concern about Nassau pitch

ನ್ಯೂಯಾರ್ಕ್​: ಐರ್ಲೆಂಡ್​(India vs Ireland) ವಿರುದ್ಧ ಗೆದ್ದು ಶುಭಾರಂಭ ಕಂಡಿರುವ ಭಾರತ ತಂಡ ಮುಂದಿನ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡಲಿದೆ. ಆದರೆ, ಈ ಪಂದ್ಯಕ್ಕೂ ಮುನ್ನ ಭಾರತೀಯ ಆಟಗಾರರಿಗೆ(T20 World Cup 2024) ಅಪಾಯಕಾರಿ ನಸೌ ಪಿಚ್​ ಬಗ್ಗೆ ಭೀತಿ ಕಾಡಿದೆ. ಈಗಾಗಲೇ ಈ ಪಿಚ್​ ಬಗ್ಗೆ ಹಲವುರು ಅಸಮಾಧಾನ ಹೊರಹಾಕಿದ್ದರು. ನಿನ್ನೆ(ಬುಧವಾರ) ನಡೆದ ಪಂದ್ಯದಲ್ಲಿ ನಾಯಕ ರೋಹಿತ್(Rohit Sharma) ​ತೋಳಿನ ಮಾಂಸಖಂಡಕ್ಕೆ ಚೆಂಡು ತಗುಲಿ ಅರ್ಧದಲ್ಲೇ ಬ್ಯಾಟಿಂಗ್​ ಮೊಟಕುಗೊಳಿಸಿದ್ದರು. ಸದ್ಯ ಗಾಯದ ಪ್ರಮಾಣ ಸಣ್ಣ ಮಟ್ಟದಿಂದ ಕೂಡಿದ್ದು ಮುಂದಿನ ಪಂದ್ಯಕ್ಕೆ ಕಣಕ್ಕಿಳಿಯಲಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ರೋಹಿತ್​ ಶರ್ಮ, ಇಲ್ಲಿನ ಡ್ರಾಪ್​ ಇನ್​ ಪಿಚ್​ ಅಷ್ಟು ಯೋಗ್ಯವಾಗಿಲ್ಲ. ಬಿರುಕುಗಳು ಅಧಿಕವಾಗಿದೆ. ಬೌಲರ್​ಗಳಿಗೆ ಅನುಕೂಲಕರವಾಗಿದ್ದರೂ ಕೂಡ ಬ್ಯಾಟರ್​ಗಳಿಗೆ ಇದು ಸೂಕ್ತವಾಗಿಲ್ಲ. ಚೆಂಡಿನ ಚಲನೆಯನ್ನು ಸರಿಯಾಗಿ ಗ್ರಹಿಸಿಕೊಳ್ಳಲು ಆಗುತ್ತಿಲ್ಲ. ಇದೇ ಕಾರಣಕ್ಕೆ ನಾನು ಗಾಯಗೊಂಡೆ. ಈಗ ಚೇತರಿಸಿಕೊಂಡಿದ್ದೇನೆ. ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡದ್ದು ಕೂಡ ಪಿಚ್​ ವರ್ತನೆಯನ್ನು ಅರಿಯುವ ಉದ್ದೇಶದಿಂದ. ಆದರೆ ಈ ಪಿಚ್​ ವರ್ತನೆ ಅರ್ಥೈಸುವುದು ಅಷ್ಟು ಸುಲಭವಾಗಿಲ್ಲ” ಎಂದರು.

‘ಇದು ಹೊಸ ಪಿಚ್ ಆಗಿದ್ದು, ಉತ್ತಮವಾದ ಹುಲ್ಲಿನ ಹೊದಿಕೆ ಇದೆ. ಆದರೆ, ಅದರೊಂದಿಗೆ ದೊಡ್ಡ ಬಿರುಕುಗಳೂ ಇವೆ. ಇದರಿಂದ ಚೆಂಡಿನ ಬೌನ್ಸ್ ಕುಗ್ಗುತ್ತದೆ. ಈ ರೀತಿಯ ಪಿಚ್‌ಗಳಲ್ಲಿ ಅಭ್ಯಾಸ ಪಂದ್ಯಗಳನ್ನು ನಡೆಸಿ ಇದನ್ನು ಸೆಟ್ ಮಾಡಬೇಕು​. ಬಳಿಕ, ದೊಡ್ಡ ಪಂದ್ಯಗಳನ್ನು ಆಯೋಜಿಸಬೇಕು. ಎಲ್ಲ 4 ಪಿಚ್‌ಗಳು ಇದೇ ರೀತಿ ಆಗಿದ್ದು, ಟಿ-20 ಟೂರ್ನಿಗೆ ಯೋಗ್ಯವಲ್ಲ’ ಎಂದು ಕ್ರಿಕೆಟ್​ ವಿಶ್ಲೇಷಕರೊಬ್ಬರು ಹೇಳಿದ್ದಾರೆ. ಆಸ್ಟ್ರೇಲಿಯಾದಿಂದ ತರಿಸಿದ ಡ್ರಾಪ್ ಇನ್ ಪಿಚ್‌ ಇದಾಗಿದೆ.

ಇದನ್ನೂ ಓದಿ India vs Ireland: ಪಂಜಾಬಿ ಪುಟ್ಟ ಪೋರನಿಂದ ಚಿನ್ನದ ಪದಕ ಪಡೆದ ಮೊಹಮ್ಮದ್​ ಸಿರಾಜ್

ಪಾಕಿಸ್ತಾನ ಮತ್ತು ಭಾರತ ತಂಡದ ಪರ ಘಾತಕ ಬೌಲರ್​ಗಳು ಇರುವ ಕಾರಣ ಉಭಯ ತಂಡಗಳ ಬ್ಯಾಟರ್​ಗಳಿಗೆ ಇಲ್ಲಿ ಆಡುವುದೇ ಸವಾಲಾಗಿ ಪರಿಣಮಿಸಿದೆ. ಬ್ಯಾಟರ್​ಗಳು ಗಾಯಗೊಳ್ಳುವ ಸಾಧ್ಯತೆ ಅಧಿಕವಾಗಿದೆ. ಅದರಲ್ಲೂ ಸ್ಟಾರ್​ ಬ್ಯಾಟರ್​ಗಳು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದರೆ ತಂಡಕ್ಕೆ ದೊಡ್ಡ ನಷ್ಟವಾಗಲಿದೆ. ಹೀಗಾಗಿ ಎಲ್ಲ ತಂಡದ ಬ್ಯಾಟರ್​ಗಳು ಕೂಡ ಜಾಗರೂಕರಾಗಿ ಆಡಬೇಕಿದೆ. ಈ ಸ್ಟೇಡಿಯಂ ಅನ್ನು ಕೇವಲ ಮೂರು ತಿಂಗಳಲ್ಲಿ ನಿರ್ಮಾಣ ಮಾಡಲಾಗಿತ್ತು.

34 ಸಾವಿರ ಪ್ರೇಕ್ಷಕರು ಕೂರುವಷ್ಟು ಸಾಮರ್ಥ್ಯದ ಸ್ಟೇಡಿಯಂ ಇದಾಗಿದ್ದು. ಭಾರತ-ಪಾಕ್​ ಪಂದ್ಯಕ್ಕಾಗಿಯೇ ಇದನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. ಪಂದ್ಯದ ನಂತರ ಇದನ್ನು ಕೆಡವಲಾಗುತ್ತದೆ ಎಂದು ತಿಳಿಸಲಾಗಿದೆ. ಭಾರತ ಮತ್ತು ಪಾಕ್​ ನಡುವಣ ಪಂದ್ಯ ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ.

Exit mobile version