ದುಬೈ: ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯದಲ್ಲಿ ನಡೆಯುವ 2024ರ ಪುರುಷರ ಟಿ20 ವಿಶ್ವ ಕಪ್ (T20 World Cup 2024) ಟೂರ್ನಿಯು ಹೊಸ ಮಾದರಿಯಲ್ಲಿ ನಡೆಯಲಿದೆ. ಇದಕ್ಕೆ ಕಾರಣ ತಂಡಗಳ ಸಂಖ್ಯೆ 20ಕ್ಕೇರಿರುವುದು.
2024ರಲ್ಲಿ ನಡೆಯುವ ಟೂರ್ನಿಯಲ್ಲಿ 20 ತಂಡಗಳು ಕಾದಾಟ ನಡೆಸಲಿದೆ. ಅದರಂತೆ 5 ತಂಡಗಳ 4 ಗುಂಪುಗಳನ್ನಾಗಿ ವಿಂಗಡಿಸಲಾಗುತ್ತದೆ. ಮೊದಲ ಸುತ್ತಿನ ಪಂದ್ಯಗಳು ಮುಗಿದ ಬಳಿಕ ಸೂಪರ್ 8 ಮಾದರಿಯಲ್ಲಿ ಸ್ಪರ್ಧೆ ನಡೆಸಲಾಗುತ್ತದೆ.
ಹಿಂದಿನೆರಡು ಕೂಟಗಳಲ್ಲಿ ಒಟ್ಟು 16 ತಂಡಗಳು ಪಾಲ್ಗೊಂಡಿದ್ದವು. ಅರ್ಹತಾ ಹಂತದಲ್ಲಿ 8 ತಂಡಗಳು ಆಡುತ್ತಿದ್ದವು. ಇಲ್ಲಿ ಅಗ್ರ 4 ಸ್ಥಾನ ಪಡೆದ ತಂಡಗಳು ಸೂಪರ್ 12ಹಂತಕ್ಕೆ ಆಯ್ಕೆಯಾಗುತ್ತಿದ್ದವು. ಸೂಪರ್-12ರಲ್ಲಿ ಅದಾಗಲೇ 8 ತಂಡಗಳು ಉತ್ತಮ ರ್‍ಯಾಂಕಿಂಗ್ ಆಧಾರದಲ್ಲಿ ಸ್ಥಾನ ಪಡೆದಿರುತ್ತಿದ್ದವು. ಸೂಪರ್-12 ಹಂತದಲ್ಲಿ ತಂಡಗಳನ್ನು ತಲಾ 6 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು. ಇಲ್ಲಿ ಅಗ್ರ 4 ಸ್ಥಾನ ಪಡೆದ ತಂಡಗಳು ಸೆಮಿಫೈನಲ್‌ಗೇರುತ್ತಿದ್ದವು.
ಆದರೆ ಮುಂಬರುವ ಆವೃತ್ತಿಯಲ್ಲಿ ಪ್ರತಿ ನಾಲ್ಕು ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ 8 ಹಂತಕ್ಕೆ ಪ್ರವೇಶಿಸಲಿವೆ. ಮತ್ತೆ ಅವುಗಳನ್ನು ನಾಲ್ಕು ತಂಡಗಳ ಎರಡು ಗುಂಪುಗಳಾಗಿ ವಿಭಜಿಸಲಾಗುತ್ತದೆ. ಈ ಎರಡೂ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸಲಿದ್ದು, ಆ ಬಳಿಕ ಫೈನಲ್ ನಡೆಯಲಿದೆ.
ಇದನ್ನೂ ಓದಿ | IND VS NZ | ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಟಿ20 ಪಂದ್ಯ ಟೈನಲ್ಲಿ ಅಂತ್ಯ; ಸರಣಿ ಗೆದ್ದ ಭಾರತ