Site icon Vistara News

T20 World Cup | ಹೊಸ ಮಾದರಿಯಲ್ಲಿ ನಡೆಯಲಿದೆ ಟಿ20 ವಿಶ್ವ ಕಪ್‌ 2024; ಏನೆಲ್ಲ ಬದಲಾವಣೆ?

t20 world cup

ದುಬೈ : ಆಸ್ಟ್ರೇಲಿಯಾದ ಆತಿಥ್ಯದಲ್ಲಿ ಟಿ೨೦ ವಿಶ್ವ ಕಪ್‌ (T20 World Cup) ಯಶಸ್ವಿಯಾಗಿ ನಡೆದಿದ್ದು, ಜೋಸ್‌ ಬಟ್ಲರ್‌ ನೇತೃತ್ವದ ಇಂಗ್ಲೆಂಡ್‌ ತಂಡ ಟ್ರೋಫಿ ಗೆದ್ದಿದೆ. ಇದೀಗ ಮುಂದಿನ ಆವೃತ್ತಿಯ ಟಿ೨೦ ವಿಶ್ವ ಕಪ್‌ಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ತನ್ನ ಯೋಜನೆಗಳನ್ನು ಆರಂಭಿಸಿದೆ. ಅಂತೆಯೇ ಮುಂದಿನ ಆವೃತ್ತಿಯ ಟೂರ್ನಿಯಲ್ಲಿ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ವೆಸ್ಟ್‌ ಇಂಡೀಸ್ ಹಾಗೂ ಅಮೆರಿಕದ ಆತಿಥ್ಯದಲ್ಲಿ ಮುಂದಿನ ಆವೃತ್ತಿಯ ವಿಶ್ವ ಕಪ್‌ ನಡೆಯಲಿದೆ. ಹೀಗಾಗಿ ಎರಡೂ ದೇಶಗಳ ಕ್ರಿಕೆಟ್‌ ಅಭಿಮಾನಿಗಳಿಗೆ ಭರಪೂರ ಮನರಂಜನೆ ಗ್ಯಾರಂಟಿ. ಏತನ್ಮಧ್ಯೆ, ಟೂರ್ನಿಯ ಗಾತ್ರವನ್ನೇ ಹಿಗ್ಗಿಸಲು ಐಸಿಸಿ ತೀರ್ಮಾನ ಮಾಡಿದ್ದು ಒಟ್ಟು ತಂಡಗಳ ಸಂಖ್ಯೆ ಹೆಚ್ಚಾಗಲಿದೆ. ಅಂದರೆ ಒಟ್ಟು ೨೦ ತಂಡಗಳ ನಡುವೆ ವಿಶ್ವ ಕಪ್‌ ಫೈಟ್‌ ನಡೆಯಲಿದೆ.

ಟಿ೨೦ ವಿಶ್ವ ಕಪ್‌ ೨೦೨೨ರಲ್ಲಿ ಸೂಪರ್‌ ೧೨ ಹಂತದ ಎರಡು ಗುಂಪುಗಳಲ್ಲಿ ಅಗ್ರ ನಾಲ್ಕು ಸ್ಥಾನಗಳನ್ನು ಪಡೆದ ತಂಡಗಳು ಮುಂದಿನ ವಿಶ್ವ ಕಪ್‌ಗೆ ಸ್ಥಾನ ಖಾತರಿಪಡಿಸಿಕೊಂಡಿದೆ. ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನ ತಂಡಗಳು ಶ್ರೇಯಾಂಕವನ್ನು ಆಧರಿಸಿ ಅರ್ಹತೆ ಪಡೆಯಲಿವೆ. ಇನ್ನು ವೆಸ್ಟ್ ಇಂಡೀಸ್‌ ಹಾಗೂ ಅಮೆರಿಕ ಆತಿಥ್ಯ ಹಕ್ಕಿನ ಮೂಲಕ ಅರ್ಹತೆ ಪಡೆದುಕೊಳ್ಳಿದೆ. ಅಲ್ಲಿಗೆ ಒಟ್ಟು ೧೨ ತಂಡಗಳಾಗಿವೆ. ಇನ್ನುಳಿದ ೮ ತಂಡಗಳಿಗಾಗಿ ಪ್ರಾಂತೀಯ ಮಟ್ಟದ ಅರ್ಹತಾ ಸುತ್ತುಗಳನ್ನು ನಡೆಸುವುದ ಐಸಿಸಿ ಚಿಂತನೆಯಾಗಿದೆ. ಹಿಂದಿನಂತೆ ಜಾಗತಿಕ ಮಟ್ಟದ ಅರ್ಹತಾ ಸುತ್ತು ಆಯೋಜಿಸುವ ಮಾದರಿಯನ್ನು ನಿಲ್ಲಿಸಲು ಬಿಸಿಸಿಐ ಯೋಜನೆ ರೂಪಿಸಿಕೊಂಡಿದೆ.

ಆಫ್ರಿಕಾ ವಿಭಾಗದಲ್ಲಿ ಎರಡು ತಂಡಗಳು, ಏಷ್ಯಾ ಮತ್ತು ಯೂರೋಪ್‌ ಪ್ರಾಂತ್ಯದಲ್ಲಿ ನಾಲ್ಕು ತಂಡಗಳು ಹಾಗೂ ಅಮೆರಿಕ ಮತ್ತು ಏಷ್ಯಾ ಫೆಸಿಪಿಕ್‌ ಪ್ರಾಂತ್ಯಗಳಿಂದ ಎರಡು ತಂಡಗಳು ಆಯ್ಕೆಯಾಗಿ ಬರಲಿವೆ.

ಸೂಪರ್-೧೨ ಹಂತ ಇಲ್ಲ

ಒಟ್ಟು ೨೦ ತಂಡಗಳ ಟೂರ್ನಿ ನಡೆಯಲಿರುವ ಕಾರಣ ಮುಂದಿನ ಆವೃತ್ತಿಯಲ್ಲಿ ಸೂಪರ್-೧೨ ಹಂತ ನಡೆಯುವುದಿಲ್ಲ ಎಂದು ಹೇಳಲಾಗುತ್ತಿದೆ. ಕಳೆದ ಆವೃತ್ತಿಯ್ಲಲಿ ೮+೮ ತಂಡಗಳು ವಿಶ್ವ ಕಪ್‌ಗಾಗಿ ಆಡಿದ್ದರೆ ಮುಂದಿನ ಬಾರಿ ೨೦ ತಂಡಗಳು ಆಡಲಿವೆ. ಆದರೆ, ನಾಕೌಟ್‌ ಹಂತದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

2024ರ ಆವೃತ್ತಿಯಲ್ಲಿ ಒಟ್ಟಾರೆ 55 ಪಂದ್ಯಗಳು ನಡೆಯಲಿವೆ. ಮೂರಲ್ಲಿ ಒಂದು ಭಾಗದಷ್ಟು ಪಂದ್ಯಗಳು ಅಮೆರಿಕದ ಆತಿಥ್ಯದಲ್ಲಿ ನಡೆಯಲಿವೆ. ಬಹುಪಾಲು ಪಂದ್ಯಗಳು ವೆಸ್ಟ್‌ ಇಂಡೀಸ್‌ನಲ್ಲಿ ಜರುಗಲಿದೆ. 2030ರ ಆವೃತ್ತಿಯ ಟಿ20 ವಿಶ್ವಕಪ್‌ ಟೂರ್ನಿಯ ಸ್ವರೂಪದಲ್ಲಿ ಬಹುಪಾಲು ಬದಲಾವಣೆ ಆಗಲಿದೆ ಎಂದು ಐಸಿಸಿ ಹೇಳಿದೆ.

ಎಲಿಮಿನೇಟರ್‌ ಹಂತ ಜಾರಿಗೆ?

ಐಪಿಎಲ್‌ ಮಾದರಿಯಂತೆ ಟೂರ್ನಿಯ ಅಂಕಪಟ್ಟಿಯಲ್ಲಿ ಸ್ಥಾನ ಪಡೆಯುವ ಅಗ್ರ ನಾಲ್ಕು ತಂಡಗಳಿಗೆ ಎಲಿಮಿನೇಟರ್‌ ಹಾಗೂ ಪ್ಲೇಆಫ್‌ ಹಂತದ ನಡೆಯಲಿದೆಯಾ ಎಂಬ ಚರ್ಚೆಯೂ ನಡೆಯುತ್ತಿದೆ. ಆದರೆ ಸದ್ಯದ ಮಾಹಿತಿ ಪ್ರಕಾರ ಸೆಮಿಫೈನಲ್ ಹಾಗೂ ಫೈನಲ್ ಮೂಲಕ ಪ್ರಶಸ್ತಿಗಾಗಿ ಫೈಟ್‌ ನಡೆಯಲಿದೆ.

ಇದನ್ನೂ ಓದಿ | T20 World Cup | ಟಿ20 ವಿಶ್ವ ಕಪ್​ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್‌ ಗಳಿಸಿದ ಅಗ್ರ 5 ಆಟಗಾರರು

Exit mobile version