ಬ್ರೀಸ್ಬೇನ್: ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಶ್ರೀಲಂಕಾ ತಂಡವು ಟಿ20 ವಿಶ್ವ ಕಪ್(T20 World Cup) ಗ್ರೂಪ್ 1 ಪಂದ್ಯದಲ್ಲಿ ಅಫಘಾನಿಸ್ತಾನ ತಂಡದ ವಿರುದ್ಧ 6 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಜಯದೊಂದಿಗೆ ಲಂಕಾ ಟೂರ್ನಿಯಲ್ಲಿ ಆಡಿದ 4 ಪಂದ್ಯಗಳಲ್ಲಿ 2 ಗೆಲುವು ದಾಖಲಿಸಿ 4 ಅಂಕದೊಂದಿಗೆ ಮೂರನೇ ಸ್ಥಾನಕ್ಕೇರುವ ಮೂಲಕ ಸೆಮಿ ಫೈನಲ್ರೇಸ್ ಜೀವಂತವಿರಿಸಿದೆ.
ಗಬ್ಬಾ ಕ್ರಿಕೆಟ್ ಗ್ರೌಂಡ್‌ನಲ್ಲಿ ಮಂಗಳವಾರ ನಡೆದ ಈ ಮುಖಾಮುಖಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಅಫಘಾನಿಸ್ತಾನ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತು. ಸಾಧಾರಣ ಮೊತ್ತ ಬೆನ್ನಟ್ಟಿದ ಶ್ರೀಲಂಕಾ ತಂಡ ಧನಂಜಯ ಡಿ ಸಿಲ್ವಾ ಅವರ ಅಜೇಯ 66 ರನ್ ಸಹಾಯದಿಂದ 18.3 ಓವರ್‌ಗಳಲ್ಲಿ 6 ನಷ್ಟಕ್ಕೆ 148 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಅಫಘಾನಿಸ್ತಾನ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕ ಬ್ಯಾಟರ್ಗಳಾದ ರಹಮನುಲ್ಲಾ ಗುರ್ಬಜ್(28), ಉಸ್ಮಾನ್ ಗಾನಿ(27) ತಂಡಕ್ಕೆ ಉತ್ತಮ ಅಡಿಪಾಯ ನಿರ್ಮಿಸಿದರು. ಆದರೆ ಈ ಆರಂಭಿಕರ ವಿಕೆಟ್ ಪತನದ ಬಳಿಕ ಅಫಘಾನಿಸ್ತಾನ ನಾಟಕೀಯ ಕುಸಿತ ಕಂಡಿತು. ಇಬ್ರಾಬಿ ಜದ್ರಾನ್(22) ಹೊರತು ಪಡಿಸಿ ಉಳಿದ ಬ್ಯಾಟರ್ಗಳು ಲಂಕಾ ದಾಳಿಯನ್ನು ಸಮರ್ಥವಾಗಿ ಎದುರಿಸಲು ವಿಫಲವಾಯಿತು. ಲಂಕಾ ಪರ ಸ್ಪಿನ್ನರ್ ವನಿಂದು ಹಸರಂಗ ನಾಲ್ಕು ಓವರ್ ಬೌಲಿಂಗ್ ನಡೆಸಿ 13 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಿತ್ತರು.
ಲಂಕಾ ಪರ ಚೇಸಿಂಗ್ ವೇಳೆ ಪಾಥುಮ್ ನಿಸ್ಸಂಕಾ(10) ಬೇಗನೆ ವಿಕೆಟ್ ಒಪ್ಪಿಸಿ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಆದರೆ ಕುಸಲ್ ಮೆಂಡಿಸ್ 25 ಮತ್ತು ಧನಂಜಯ ಡಿ ಸಿಲ್ವಾ ಅಜೇಯ 66 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಸಂಕ್ಷಿಪ್ತ ಸ್ಕೋರ್
ಅಫಘಾನಿಸ್ತಾನ: 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 144 (ರಹಮನುಲ್ಲಾ ಗುರ್ಬಜ್ 28, ಉಸ್ಮಾನ್ ಗಾನಿ 27, ಹಸರಂಗ 13ಕ್ಕೆ3, ಲಹಿರು ಕುಮಾರ 30ಕ್ಕೆ2).
ಶ್ರೀಲಂಕಾ: 18.3 ಓವರ್‌ಗಳಲ್ಲಿ 4 ವಿಕೆಟ್ಗೆ 148 (ಧನಂಜಯ ಡಿ ಸಿಲ್ವಾ ಅಜೇಯ 66, ಕುಸಲ್ ಮೆಂಡಿಸ್ 25, ಮುಜೀಬ್ ಉರ್ ರೆಹ್ಮಾನ್ 24ಕ್ಕೆ2
ಇದನ್ನೂ ಓದಿ | Virat Kohli | ಅಡಿಲೇಡ್‌ಗೆ ತಲುಪಿದ ಟೀಮ್ ಇಂಡಿಯಾ, ಫೋಟೊ ಶೇರ್ ಮಾಡಿದ ವಿರಾಟ್ ಕೊಹ್ಲಿ