ಅಡಿಲೇಡ್: ಅಡಿಲೇಡ್ ಓವಲ್ ಮೈದಾನದಲ್ಲಿ ನವೆಂಬರ್ 10ರಂದು(ಗುರುವಾರ) ನಡೆಯಲಿರುವ ಟಿ20 ವಿಶ್ವ ಕಪ್‌ನ ಎರಡನೇ ಸೆಮಿಫೈನಲ್ ಕದನದಲ್ಲಿ ರೋಹಿತ್ ಶರ್ಮಾ ಪಡೆ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಇದಕ್ಕೂ ಮುನ್ನ ಭಾರತೀಯ ಕ್ರಿಕೆಟ್ ತಂಡವು ಸಾಕಷ್ಟು ಸೌಹಾರ್ದತೆಯನ್ನು ಪ್ರದರ್ಶಿಸಿದೆ. ರೋಹಿತ್, ಕೊಹ್ಲಿ ಮತ್ತು ದ್ರಾವಿಡ್ ಅವರು ಮೆಲ್ಬೋರ್ನ್‌ನಿಂದ ಅಡಿಲೇಡ್‌ಗೆ ತೆರಳುವ ವಿಮಾನದಲ್ಲಿ ತಮ್ಮ ಬಿಸಿನೆಸ್ ಕ್ಲಾಸ್ ಸೀಟುಗಳನ್ನು ವೇಗಿಗಳಿಗೆ ಬಿಟ್ಟುಕೊಟ್ಟಿದ್ದಾರೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಟಿ20 ವಿಶ್ವ ಕಪ್‌ನ ಪಂದ್ಯಕ್ಕೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳಲು ಕಡಿಮೆ ಎಂದರೂ ಐದು ಗಂಟೆಗಳವರೆಗೆ ದೇಶೀಯ ವಿಮಾನಗಳಲ್ಲಿ ಪ್ರಯಾಣಿಸಬೇಕು. ಇದರಲ್ಲಿ ತಂಡದ ಹಿರಿಯ ಆಟಗಾರರಿಗೆ ಮತ್ತು ಕೋಚ್ಗೆ ಐಸಿಸಿ ವಿಶೇಷವಾದ ನಾಲ್ಕು ಬಿಸಿನೆಸ್ ಕ್ಲಾಸ್ ಸೀಟುಗಳನ್ನು ನಿಗದಿಪಡಿಸುತ್ತದೆ. ಭಾರತ ಪರ ಈ ಸೀಟುಗಳಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ಗೆ ಮೀಸಲಿಡಲಾಗಿದೆ.
ಸೌಹಾರ್ದತೆ ಮೆರೆದ ಕೊಹ್ಲಿ, ದ್ರಾವಿಡ್, ರೋಹಿತ್
ಜಿಂಬಾಬ್ವೆ ವಿರುದ್ಧದ ಪಂದ್ಯ ಗೆದ್ದ ಬಳಿಕ ಮೆಲ್ಬೋರ್ನ್‌ನಿಂದ ಅಡಿಲೇಡ್‌ಗೆ ವಿಮಾನದಲ್ಲಿ ಪ್ರಯಾಣ ಬೆಳೆಸುವಾಗ ರೋಹಿತ್, ಕೊಹ್ಲಿ ಮತ್ತು ದ್ರಾವಿಡ್ ಅವರು ತಮ್ಮ ಬಿಸಿನೆಸ್ ಕ್ಲಾಸ್ ಸೀಟುಗಳನ್ನು ವೇಗಿಗಳಿಗೆ ಬಿಟ್ಟುಕೊಟ್ಟಿದ್ದಾರೆ. ಇದರಿಂದಾಗಿ ವೇಗದ ಬೌಲರ್ಗಳಾದ ಮೊಹಮ್ಮದ್ ಶಮಿ, ಅರ್ಶ್ದೀಪ್ ಸಿಂಗ್ ಮತ್ತು ಭುವನೇಶ್ವರ್ ಕುಮಾರ್ ಆರಾಮವಾಗಿ ಪ್ರಯಾಣಿಸಿದ್ದಾರೆ. ಮಹತ್ವದ ಸೆಮಿಫೈನಲ್ ಪಂದ್ಯಕ್ಕೆ ಮುನ್ನ ವೇಗಿಗಳಿಗೆ ಆಯಾಸವಾಗದಿರಲಿ ಎನ್ನುವ ಉದ್ದೇಶದಿಂದ ಬಿಸಿನೆಸ್ ಕ್ಲಾಸ್ ಟಿಕೆಟ್‌ಗಳನ್ನು ವೇಗಿಗಳಿಗೆ ಬಿಟ್ಟುಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಇದೀಗ ಕೊಹ್ಲಿ, ದ್ರಾವಿಡ್ ಮತ್ತು ರೋಹಿತ್ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ |Rohit Sharma | ಸೆಮಿಗೂ ಮುನ್ನ ಟೀಮ್ ಇಂಡಿಯಾಕ್ಕೆ ಶಾಕ್; ನಾಯಕ ರೋಹಿತ್ಗೆ ಗಾಯ ಅಭ್ಯಾಸ ಮೊಟಕು