ಸಿಡ್ನಿ: ಐಸಿಸಿ ಟಿ20 ವಿಶ್ವ ಕಪ್‌ನ ಸೂಪರ್ 12 ಹಂತದ ಪಂದ್ಯಗಳು ಮುಕ್ತಾಯ ಕಂಡು ಸೆಮಿಫೈನಲ್ ಸಮರಕ್ಕೆ ವೇದಿಕೆ ಸಜ್ಜಾಗಿದೆ. ಆದರೆ ಇದಕ್ಕೂ ಮುನ್ನ ಇಂಗ್ಲೆಂಡ್ ತಂಡಕ್ಕೆ ಗಾಯಾದ ಸಮಸ್ಯೆ ಎದುರಾಗಿದೆ. ತಂಡದ ಸ್ಟಾರ್ ಎಡಗೈ ಆಟಗಾರ ಡೇವಿಡ್ ಮಲಾನ್ ಸ್ನಾಯು ಸೆಳೆತಕ್ಕೆ ಸಿಲುಕಿದ್ದು ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ ಎನ್ನಲಾಗಿದೆ.
ಶ್ರೀಲಂಕಾ ಎದುರು ಶನಿವಾರ ನಡೆದ ‘ಸೂಪರ್ 12’ ಹಂತದ ಕೊನೆಯ ಲೀಗ್ ಪಂದ್ಯದಲ್ಲಿ ಮಲಾನ್ ಗಾಯಗೊಂಡಿದ್ದರು. ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದ ಅವರು ಇಂಗ್ಲೆಂಡ್‌ನ ಇನಿಂಗ್ಸ್ ವೇಳೆ ಬ್ಯಾಟಿಂಗ್ ನಡೆಸಲಿಲ್ಲ. ಇದೀಗ ಭಾರತ ವಿರುದ್ಧದ ಸೆಮಿ ಪಂದ್ಯದ ವೇಳೆಗೆ ಮಲಾನ್ ಚೇತರಿಸಿಕೊಳ್ಳದಿದ್ದರೆ, ಫಿಲ್ ಸಾಲ್ಟ್‌ಗೆ ಅವಕಾಶ ಲಭಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಒಂದೊಮ್ಮೆ ಫಿಲ್ ಸಾಲ್ಟ್‌ಗೆ ಅವಕಾಶ ನೀಡಿದರೂ ಮಲಾನ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಬೆನ್ ಸ್ಟೋಕ್ಸ್ ಆಡಳಿದ್ದಾರೆ ಎಂದು ತಂಡದ ಮೂಲವೊಂದು ಮಾಹಿತಿ ನೀಡಿದೆ.
ಮಲಾನ್ ಗಾಯದ ಕುರಿತು ಮಾತನಾಡಿದ ತಂಡದ ಉಪನಾಯಕ ಮೊಯಿನ್ ಅಲಿ, “ಮಲಾನ್ ಗಾಯದ ಕುರಿತು ಯಾವುದೇ ಅಪ್‌ಡೇಟ್ ಲಭ್ಯವಾಗಿಲ್ಲ. ಪಂದ್ಯಕ್ಕೆ ಇನ್ನೂ ಎರಡು ದಿನ ಬಾಕಿ ಉಳಿದಿವೆ. ಆದ್ದರಿಂದ ಅವರು ಭಾರತ ವಿರುದ್ಧ ಆಡುವುದು ಅನುಮಾನ ಎಂದು ಮೊದಲೇ ನಿರ್ಧರಿಸಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | T20 World Cup | ಅಡಿಲೇಡ್ ತಲುಪಿದ ರೋಹಿತ್ ಪಡೆ; ಮಂಗಳವಾರದಿಂದ ಕಠಿಣ ಅಭ್ಯಾಸ