ಸಿಡ್ನಿ: ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಾಲಿನ ಸ್ನಾಯು ಸೆಳೆತದಿಂದ ಬಳಲುತ್ತಿದ್ದು, ಮುಂದಿನ ಪಂದ್ಯದಲ್ಲಿ ಆಡುವುದು ಅನುಮಾನ ಎಂದು ವರದಿಯಾಗಿದೆ.(T20 World Cup) ಮಂಗಳವಾರ ಟೀಮ್ ಇಂಡಿಯಾ ಆಟಗಾರರೆಲ್ಲರೂ ಅಭ್ಯಾಸ ನಡೆಸಿದ್ದಾರೆ. ಆದರೆ ಪಾಂಡ್ಯ ಮಾತ್ರ ಅಭ್ಯಾಸದ ವೇಳೆ ಕಾಣಿಸಿಕೊಂಡಿರಲಿಲ್ಲ. ಇದೇ ವಿಚಾರ ಈಗ ಹಲವು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.
ಪಾಕಿಸ್ತಾನ ವಿರುದ್ಧ ಪಾಂಡ್ಯ ಹೆಚ್ಚಾಗಿ ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸದೇ ಕೇವಲ ಓಟದ ಮೂಲಕವೇ ರನ್ ಗಳಿಸಿದ್ದರೂ. ಇದರಿಂದ ಬಳಲಿದ ಪಾಂಡ್ಯಗೆ ಕಾಲಿನ ಸ್ನಾಯು ಸೆಳೆತ ಉಂಟಾಗಿದೆ ಎಂದು ತಿಳಿದು ಬಂದಿದೆ. ಆದರೆ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಪಾಂಡ್ಯ ಫಿಟ್ನೆಸ್ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.
“ಹಾರ್ದಿಕ್ ಪಾಂಡ್ಯ ಕ್ಷೇಮವಾಗಿದ್ದಾರೆ. ಅವರು ಮುಂದಿನ ಪಂದ್ಯವನ್ನು ಆಡಲು ಫಿಟ್ ಆಗಿದ್ದಾರೆ. ನಾವು ಯಾರಿಗೂ ವಿಶ್ರಾಂತಿ ನೀಡಿಲ್ಲ. ಹಾರ್ದಿಕ್ ಎಲ್ಲ ಪಂದ್ಯಗಳನ್ನು ಆಡಬೇಕೆಂದು ನಾನು ಬಯಸುತ್ತೇನೆ. ಹಾರ್ದಿಕ್ ಬೌಲಿಂಗ್ ಜತೆಗೆ ಬ್ಯಾಟಿಂಗ್‌ನಲ್ಲಿಯೂ ಮಿಂಚುತ್ತಿದ್ದಾರೆ. ಅವರು ನಮಗೆ ಬಹಳ ಮುಖ್ಯವಾದ ಆಟಗಾರ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅವರ ಇನಿಂಗ್ಸ್ ನಿರ್ಣಾಯಕ ಎನಿಸಿತ್ತು” ಎಂದು ಪರಾಸ್ ಹೇಳಿದ್ದಾರೆ. ಒಟ್ಟಾರೆ ಪಾಂಡ್ಯ ನಾಳಿನ ಪಂದ್ಯದಲ್ಲಿ ಆಡಿದರೆ ಮಾತ್ರ ಈ ಎಲ್ಲ ಉಹಾಪೋಹಗಳಿಗೆ ಉತ್ತರ ಸಿಗಲಿದೆ.
ಇದನ್ನೂ ಓದಿ | T20 World Cup | ಟೀಮ್ ಇಂಡಿಯಾದಲ್ಲಿ ಪಾಕಿಸ್ತಾನ ತಂಡದ ಬೌಲರ್; ಕೊಹ್ಲಿ, ರೋಹಿತ್ ಮೆಚ್ಚುಗೆ